ಕಸೌಲಿ - ಒಂದು ಸುಂದರ ನಿಸರ್ಗ ಧಾಮ

ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿರುವ ಗುಡ್ಡ ಪ್ರದೇಶ ಕಸೌಲಿ ಅತ್ಯಂತ ಜನಪ್ರಿಯವಾದ ಹಿಲ್ ಸ್ಟೇಷನ್. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 1800 ಮೀಟರ್ ಎತ್ತರದಲ್ಲಿದೆ, ಈ ಪ್ರದೇಶದ ಹೆಸರು ರಾಮಾಯಣದಲ್ಲೂ ಬರೆಯಲ್ಪಟ್ಟಿದೆ. ರಾಮ ಲಕ್ಷ್ಮಣರು ರಾವಣನ ವಿರುದ್ಧ ಯುದ್ದ ಮಾಡುವ ಸಂದರ್ಭದಲ್ಲಿ ಮೃತಪಟ್ಟ ಲಕ್ಷ್ಮಣ ಪ್ರಾಣ ಉಳಿಸಲು ರಾಮ ಭಕ್ತ ಹನುಮ ಸಂಜೀವಿನಿ ಪರ್ವತವನ್ನು ತರಲು ಹಿಮಾಲಯಕ್ಕೆ ಬಂದಾಗ ಅದನ್ನು ತೆಗೆದುಕೊಂಡು ಹೋಗುವಾಗ ಈ ಬೆಟ್ಟದ ಮೇಲೆ ಪಾದವೂರಿದ್ದ ಎಂದು ಹೇಳಲಾಗುತ್ತದೆ. ಇಲ್ಲಿನ ಬೆಟ್ಟ ಪ್ರದೇಶದಲ್ಲಿ ಹರಿಯುವ ಜಬ್ಲಿ ಹಾಗೂ ಕಸೌಲಿ ಝರಿಗಳಿಂದಾಗಿ ಈ ಪ್ರದೇಶಕ್ಕೆ ಕೌಸಲ್ಯ ಎಂಬ ಹೆಸರು ಬಂದಿತು.

19 ನೇ ಶತಮಾನದಲ್ಲಿ ಈ ಪ್ರದೇಶ ಗೂರ್ಖಾರಿಗೆ ಬಹಳ ಪ್ರಮುಖ ಪ್ರದೇಶವಾಗಿತ್ತು. ನಂತರ ಬ್ರಿಟೀಷರು ಈ ಪ್ರದೇಶವನ್ನು ಸೇನೆಯ ಪ್ರಮುಖ ಬೆಟಾಲಿಯನ್ ಆಗಿ ಪರಿವರ್ತಿಸಿಕೊಂಡರು. ಈ ಸ್ಥಳದಲ್ಲಿ ಭಾರತೀಯರೂ ಸೇರಿ ಅನೇಕರು ಬ್ರಿಟೀಷ್ ಸೇನೆಯನ್ನು ಸೇರಿದರು. 1857 ರಲ್ಲಿ ಇಡೀ ಭಾರತಾಧ್ಯಂತ ಆರಂಭಗೊಂಡ ಸಿಪಾಯಿ ದಂಗೆ ದಳ್ಳುರಿ ಕಸೌಲಿಯಲ್ಲೂ ಭಾರಿ ಪರಿಣಾಮವನ್ನುಂಟು ಮಾಡಿತ್ತು. ಇಲ್ಲಿನ ಸೈನಿಕರು ಗೂರ್ಖಾರೊಂದಿಗೆ ಕೈ ಜೋಡಿಸಿದ್ದರೂ ಕ್ರಮೇಣ ಪ್ರತಿಭಟನಾಕಾರರು ಹಿಂಜರಿದಿದ್ದರಿಂದ ದಂಗೆಗೆ ಸೋಲುಂಟಾಯಿತು. ಈ ಸೈನಿಕರು ನಂತರ ಬ್ರಿಟೀಷ್ ಸೇನಾಧಿಕಾರಿಗಳಿಂದ ಕ್ರೂರವಾದ ಶಿಕ್ಷೆಗೆ ಒಳಗಾದರು.

ಈ ಪ್ರದೇಶದ ಪ್ರಮುಖ ಆಕರ್ಷಣೆಗಳು:- 1) ಮಂಕಿ ಪಾಯಿಂಟ್ 2) ದಾಗ್ ಶೈ 3) ಟಿಂಬರ್ ಟ್ರಯಲ್ ರಿಸಾರ್ಟ್ 4) ಕಸೌಲಿ ಬ್ರೇವರಿ 5) ಸನ್ ರೈಜ್ ಪಾಯಿಂಟ್ 6) ಸನ್ ಸೆಟ್ ಪಾಯಿಂಟ್ 7) ಬಾಬಾ ಬಾಲಕ್ ನಾಥ್ ದೇವಸ್ಥಾನ 8) ಗುರುದ್ವಾರ ಶ್ರೀ ಗುರುನಾನಕ್ ಜೀ 9) ಕೇಂದ್ರೀಯ ಸಂಶೋಧನಾ ಸಂಸ್ಥೆ 10) ಲಾರೆನ್ಸ್ ಸ್ಕೂಲ್ 11) ಕಸೌಲಿ ಕ್ಲಬ್ 12) ಗೂರ್ಖಾ ಫೋರ್ಟ್ 13) ಮಾಲ್ ರೋಡ್ 14) ಬ್ಯಾಪ್ಟಿಸ್ಟ್ ಚರ್ಚ್ 15) ಕೃಷ್ಣ ಭವನ್ ಮಂದಿರ 16) ಕ್ರೈಸ್ಟ್ ಚರ್ಚ್

ಪ್ರಸ್ತುತ, ಕಸೌಲಿಯು ಭಾರತ ಸೇನೆಯ ಉಪನಗರವಾಗಿ ಗುರುತಿಸಲ್ಪಟ್ಟಿದೆ. ಕೇಂದ್ರೀಯ ಸಂಶೋಧನಾ ಸಂಸ್ಥೆ, ಕಸೌಲಿ ಕ್ಲಬ್ ಹಾಗೂ ಲಾರೆನ್ಸ್ ಸ್ಕೂಲ್ ಇವುಗಳು ಕಸೌಲಿಯಲ್ಲಿರುವ ಪ್ರಮುಖ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದಿರುವ ಶಿಕ್ಷಣ ಸಂಸ್ಥೆಗಳು. ಪ್ರಕೃತಿ ಸೌಂದರ್ಯದ ನಡುವೆ ಸುಂದರವಾಗಿ ಹರಡಿಕೊಂಡಿರುವ ಕಸೌಲಿ ನಗರ ಕ್ರೈಸ್ಟ್ ಚರ್ಚ್, ಮಂಕಿ ಪಾಯಿಂಟ್, ಕಸೌಲಿ ಬ್ರೇವರಿ, ಬಾಬಾ ಬಾಲಕ್ ನಾಥ್ ದೇವಸ್ಥಾನ ಮತ್ತು ಗೂರ್ಖಾ ಕೋಟೆಗೆ ಬಹಳ ಹೆಸರುವಾಗಸಿಯಾದದ್ದು.

ಪ್ರವಾಸಿಗರು ಇಲ್ಲಿಗೆ ವಾಯು ಮಾರ್ಗ, ರಸ್ತೆ ಮಾರ್ಗ ಹಾಗೂ ರೈಲು ಮಾರ್ಗಗಳ ಮೂಲಕ ಈ ಪ್ರದೇಶ ತಲುಪ ಬಹುದು. ಸುಮಾರು 70 ಕಿ.ಮೀ.ದೂರದಲ್ಲಿರುವ ಚಂಡೀಘಡದ ವಿಮಾನ ನಿಲ್ದಾಣ ಸಮೀಪ ನಿಲ್ದಾಣವಾಗಿದೆ. ಈ ನಿಲ್ದಾಣವೂ ದೇಶದ ಇತರ ವಿಮಾನ ನಿಲ್ದಾಣಗಳಾದ ಶ್ರೀನಗರ, ಕೊಲ್ಕೋತ್ತಾ, ನವದೆಹಲಿ ಹಾಗೂ ಮುಂಬೈ ನಗರಗಳೊಂದಿಗೆ ಸಂಪರ್ಕ ಹೊಂದಿದೆ.

ಕಸೌಲಿಯಿಂದ ಸುಮಾರು 40 ಕಿ.ಮೀ.ದೂರದಲ್ಲಿರುವ ಕಲ್ಕ ರೈಲು ನಿಲ್ದಾಣವು ಸಮೀಪದ ನಿಲ್ದಾಣವಾಗಿದೆ. ಹಿಮಾಚಲ ಪ್ರದೇಶದ ವಿವಿಧ ಭಾಗಗಳಿಂದ ಕಸೌಲಿಗೆ ಬಸ್ ಸಂಪರ್ಕವಿದೆ.

ವರ್ಷದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಹವಾಮಾನ ಇರುವ ಸಂದರ್ಭದಲ್ಲಿ ಮಾತ್ರ ಈ ಬೆಟ್ಟ ಪ್ರದೇಶಕ್ಕೆ ಭೇಟಿ ನೀಡುವುದು ಸೂಕ್ತ.

Please Wait while comments are loading...