Search
  • Follow NativePlanet
Share

ರೈಸನ್‌ : ನದಿ ಈಜುವವರ ಸ್ವರ್ಗ

6

ಸಮುದ್ರ ಮಟ್ಟದಿಂದ ಸುಮಾರು 1433 ಮೀ. ಎತ್ತರದಲ್ಲಿರುವ ರೈಸನ್‌ ಕುಲುವಿನಿಂದ 16 ಕಿ.ಮೀ ದೂರದಲ್ಲಿದೆ. ಸಣ್ಣ ಸಣ್ಣ ಹಳ್ಳಿಗಳಿಂದ ಆವೃತವಾಗಿರುವ ಬಿಯಸ್‌ ನದಿಯ ದಡದಲ್ಲಿರುವ ರೈಸನ್‌ ವ್ಹೈಟ್ ವಾಟರ್ ರಿವರ್ ರಾಫ್ಟಿಂಗ್ ಮತ್ತು ಶಿಬಿರುಗಳಿಗಾಗಿ ಪ್ರಸಿದ್ಧವಾಗಿದೆ. ಹಲವಾರು ಆಪಲ್‌ ತೋಟಗಳು ಮತ್ತು ಹಣ್ಣಿನ ಉದ್ಯಾನಗಳು ಈ ಪ್ರದೇಶದ ನಿಸರ್ಗ ಸೌಂದರ್ಯಕ್ಕೆ ಇನಷ್ಟು ಮೆರುಗನ್ನು ನೀಡಿವೆ. ಚಳಿಗಾಲವು ಅಂತ್ಯವಾಗುವ ಹೊತ್ತಿಗೆ ಅಂದರೆ ಮಾರ್ಚ್‌ನಲ್ಲಿ ಇಡೀ ರೈಸನ್ ಪ್ರದೇಶವು ಹೂವುಗಳಿಂದ ಕಂಗೊಳಿಸುತ್ತಿರುತ್ತದೆ.

ಈ ಪ್ರದೇಶದ ಪ್ರಮುಖ ಆಕರ್ಷಣೆಯೆಂದರೆ ರಾಜೇಂದ್ರ ಪ್ರಸಾದ ನ್ಯಾಷನಲ್‌ ಆಪ್ತಮಾಲಜಿ ಸೆಂಟರ್. ಇಲ್ಲಿ ಪ್ರತಿವರ್ಷ ಸಮ್ಮರ್ ಕ್ಯಾಂಪ್‌ನ್ನು ಮಾಡಲಾಗುತ್ತದೆ. ಈ ಕ್ಯಾಂಪ್‌ನಲ್ಲಿ ಕಣ್ಣಿನ ವಿವಿಧ ಕಾಯಿಲೆಗಳಿ ಚಿಕಿತ್ಸೆ ನಡೆಸಲಾಗುತ್ತದೆ. ರೈಸನ್‌ನಲ್ಲಿರುವ ರಘುನಾಥ ದೇವಸ್ಥಾನವು ಹಿಂದೂಗಳಿಗೆ ಅತ್ಯಂತ ಪವಿತ್ರವಾದದ್ದು. ಹಿಂದೂ ದೇವರಾದ ರಾಮನಿಗೆ ಈ ದೇವಸ್ಥಾನ ಅರ್ಪಿತವಾಗಿದ್ದು, ವರ್ಷಪೂರ್ತಿ ಅಪಾರ ಪ್ರಮಾಣದ ಪ್ರವಾಸಿಗರು ಮತ್ತು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ರೈಸನ್‌ನಲ್ಲಿರುವ ಇನ್ನೊಂದು ದೇವಸ್ಥಾನವೆಂದರೆ ಜಗನ್ನತಿ ದೇವಿ ದೇವಸ್ಥಾನ. ಇದು ಬೇಖಿ ಎಂಬ ಹಳ್ಳಿಯಲ್ಲಿ, ಕುಲುವಿನಿಂದ 3 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನದ ವಾಸ್ತುಶಿಲ್ಪವು ಅತ್ಯಂತ ವಿಶಿಷ್ಟವಾಗಿದೆ. ಕುಲು, ಮನಾಲಿ, ಗುಶೈನಿ, ನಗ್ಗರ್, ಭುಂತರ್, ಮನಿಕರನ್‌ ಮತ್ತು ಪಾಲಂಪುರಗಳು ರೈಸನ್‌ನಲ್ಲಿರುವ ಇತರ ಪ್ರಮುಖ ಪ್ರವಾಸಿ ತಾಣಗಳು.

ರೈಸನ್‌ಗೆ ನೀವು ರೈಲು, ವಿಮಾನ ಮತ್ತು ರಸ್ತೆಯ ಮೂಲಕ ತಲುಪಬಹುದು. ಆದರೆ ರೈಸನ್‌ನಲ್ಲಿ ಯಾವುದೇ ರೈಲ್ವೆ ನಿಲ್ದಾಣವಾಗಲಿ, ವಿಮಾನ ನಿಲ್ದಾಣವಾಗಲಿ ಇಲ್ಲ. ರೈಸನ್‌ಗೆ ಸಮೀಪದ ವಿಮಾನ ನಿಲ್ದಾಣ ಅಥವಾ ರೈಲು ನಿಲ್ದಾಣಕ್ಕೆ ಹೋಗಿ ಅಲ್ಲಿಂದ ರಸ್ತೆಯಲ್ಲಿ ಪ್ರಯಾಣಿಸಬಹುದು. ಸಮೀಪದ ವಿಮಾನ ನಿಲ್ದಾಣವು ಕುಲುವಿನಲ್ಲಿದೆ. ಪ್ರವಾಸಿಗರು ಕುಲು ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸಿಗುವ ಟ್ಯಾಕ್ಸಿ ಅಥವಾ ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆದು ರೈಸನ್‌ ತಲುಪಬಹುದು. ರಸ್ತೆ ಪ್ರಯಾಣವಾದರೆ ರೈಸನ್‌ನಿಂದ 21 ಕಿ.ಮೀ ದೂರದಲ್ಲಿರುವ ಕುಲು ಮೂಲಕ ಸಾಗಬಹುದು. ಪ್ರವಾಸಿಗರು ಖಾಸಗಿ ಮತ್ತು ರಾಜ್ಯ ಸರ್ಕಾರಿ ಬಸ್‌ ಸೇವೆ ಮೂಲಕ ನಿಮ್ಮ ತಾಣವನ್ನು ತಲುಪಬಹುದು.

ರೈಸನ್‌ನ ವಾತಾವರಣವು ವರ್ಷಪೂರ್ತಿ ಬದಲಾಗುತ್ತದೆ. ಬೇಸಿಗೆಕಾಲದಲ್ಲಿ ತಾಪಮಾನವು 25 ಡಿಗ್ರಿಯಿಂದ 35 ಡಿಗ್ರಿಯ ತನಕ ಇರುತ್ತದೆ. ಮಳೆಗಾಲದಲ್ಲಿ ಮಧ್ಯಮ ಪ್ರಮಾಣದ ಮಳೆ ರೈಸನ್‌ನಲ್ಲಿ ಆಗುತ್ತದೆ. ಹೀಗಾಗಿ ಪ್ರವಾಸಿಗರು ಮಳೆಗಾಲದಲ್ಲೂ ಕೂಡಾ ಇಲ್ಲಿ ಪ್ರಯಾಣ ಮಾಡಬಹುದು. ಚಳಿಗಾಲದಲ್ಲಿ ತಾಪಮಾನವು 25 ಡಿಗ್ರಿಯಿಂದ 0 ಡಿಗ್ರಿಯ ತನಕ ಇರುತ್ತದೆ. ಪ್ರವಾಸಿಗರು ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದನ್ನು ಮುಂದೂಡಿದರೆ ಒಳಿತು. ಯಾಕೆಂದರೆ ಚಳಿಗಾಲದಲ್ಲಿ ಇಲ್ಲಿ ವಿಪರೀತ ಚಳಿ ಇರುತ್ತದೆ.

ರೈಸನ್ ಪ್ರಸಿದ್ಧವಾಗಿದೆ

ರೈಸನ್ ಹವಾಮಾನ

ಉತ್ತಮ ಸಮಯ ರೈಸನ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ರೈಸನ್

  • ರಸ್ತೆಯ ಮೂಲಕ
    ರೈಸನ್‌ಗೆ ಕುಲು ಮೂಲಕ ರಸ್ತೆಯಲ್ಲಿ ತಲುಪಬಹುದು. ಕುಲುವಿನಿಂದ ರೈಸನ್‌ಗೆ ಕೇವಲ 21 ಕಿ.ಮೀ ದೂರ. ಕುಲುವಿಗೆ ಶಿಮ್ಲಾ, ಚಂಡೀಗಢ ಮತ್ತು ಅಮೃತಸರದಿಂದ ದೇಶದ ಇತರ ನಗರಗಳಿಗೆ ಸೂಕ್ತ ಸಂಪರ್ಕ ವ್ಯವಸ್ಥೆಯಿದೆ. ಪ್ರವಾಸಿಗರು ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್‌ಗಳ ವ್ಯವಸ್ಥೆಯನ್ನು ಕುಲುವಿನಿಂದ ರೈಸನ್‌ಗೆ ತಲುಪಲು ಬಳಸಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಚಂಡೀಗಢ ರೈಲ್ವೆ ನಿಲ್ದಾಣವು ರೈಸನ್‌ಗೆ ಸಮೀಪದ ರೈಲು ನಿಲ್ದಾಣ. ಈ ರೈಲು ನಿಲ್ದಾಣವು ಚೆನ್ನೈ, ನವದೆಹಲಿ ಮತ್ತು ಅಮೃತಸರದಂತಹ ಭಾರತದ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಸುಲಭವಾಗಿ ಬಸ್‌ ಅಥವಾ ಟ್ಯಾಕ್ಸಿಗಳನ್ನು ಪಡೆದು ಇಲ್ಲಿಂದ ರೈಸನ್‌ಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಭುಂತರ್ ವಿಮಾನ ನಿಲ್ದಾಣವು ರೈಸನ್‌ಗೆ 21 ಕಿ.ಮೀ ದೂರದಲ್ಲಿದೆ. ಇದೇ ಅತಿ ಸಮೀಪದ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣವು ದೇಶದ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಟ್ಯಾಕ್ಸಿ ಅಥವಾ ಬಸ್‌ ಅನ್ನು ಇಲ್ಲಿಂದ ರೈಸನ್‌ಗೆ ಪ್ರಯಾಣಿಸಲು ಬಳಸಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue