Search
 • Follow NativePlanet
Share
ಮುಖಪುಟ » ಸ್ಥಳಗಳು» ಕೊಟ್‌ಖೈ

ಕೊಟ್‌ಖೈ - ಬನ್ನಿ..ಧ್ಯಾನದಲ್ಲಿ ತೊಡಗಿಕೊಳ್ಳಿ

9

ಕೊಟ್‌ಖೈ ಒಂದು ಸಣ್ಣ ನಗರ. ಇದು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿದೆ. ಇಲ್ಲಿನ ರಾಜನಿಂದಾಗಿ ಈ ಪ್ರದೇಶಕ್ಕೆ ಹೀಗೆಂದು ಹೆಸರು ಬಂದಿದೆ. ಕೊಟ್‌ ಎಂದರೆ ಅರಮನೆ ಎಂದರ್ಥ ಹಾಗೂ ಖೈ ಎಂದರೆ ಗುಡ್ಡ ಎಂದರ್ಥ. ಇಲ್ಲಿನ ನಿಸರ್ಗ ಸೌಂದರ್ಯ ಮತ್ತು ಪ್ರಶಾಂತವಾದ ವಾತಾವರಣವು ದೂರದೂರುಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಈ ಪ್ರದೇಶವು ಸೇಬು ತೋಟಗಳಿಗಾಗಿ ಹೆಸರುವಾಸಿಯಾಗಿದ್ದು, ಸುಮಾರು 23000 ಹೆಕ್ಟೇರ್‌ ಪ್ರದೇಶ ವ್ಯಾಪ್ತಿಯಲ್ಲಿ ವ್ಯಾಪಿಸಿಕೊಂಡಿದೆ. ಪ್ರವಾಸಿಗರು, ಮಾಲೀಕರ ಪೂರ್ವಪರವಾನಗಿ ಪಡೆದು ಈ ಉದ್ಯಾನವನ್ನು ನೋಡಬಹುದು. ತೋಟಗಾರಿಕೆ ಚಟುವಟಿಕೆಗಳು ಕೊಟ್‌ಖೈನಲ್ಲಿ ಪ್ರಮುಖವಾಗಿದೆ. ನಗರದ ಸಮೀಪದಲ್ಲೇ ಗಿರಿ ನದಿಯು ಹರಿಯುತ್ತದೆ. ಇದು ಇಲ್ಲಿನ ಮಣ್ಣಿನ ಫಲವತ್ತತೆಗೆ ಪ್ರಮುಖ ಕಾರಣ.

ಕೊಟ್‌ಖೈ ಅರಮನೆಯು ರಾಜಾ ರಾಣಾ ಸಾಬ್‌ರಿಂದ ನಿರ್ಮಾಣವಾಯಿತು. ಇದು ಕೊಟ್‌ಖೈನಲ್ಲಿರುವ ಅತ್ಯಂತ ಆಕರ್ಷಕ ಪ್ರವಾಸಿ ತಾಣ. ಪಗೋಡಾ ಶೈಲಿಯ ಮೇಲ್ಛಾವಣಿಯು ಟಿಬೇಟಿಯನ್‌ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆ. ಕೊಟ್‌ಖೈ ಪ್ರದೇಶದಲ್ಲಿರುವ ಅತ್ಯಂತ ಜನಪ್ರಿಯ ದೇವಸ್ಥಾನಗಳಲ್ಲಿ ಮಹಾಮಾಯಿ ದೇವಸ್ಥಾನ ಮತ್ತು ಲಂಕ್ರಾ ವೀರ‍್ ದೇವಸ್ಥಾನ ಅತ್ಯಂತ ಪ್ರಮುಖವಾದದ್ದು. ಈ ದೇವಸ್ಥಾನಗಳ ಹೊರತಾಗಿ ನೆರ ಘಾಟಿ, ಕೈಯಾಲ ಅರಣ್ಯ ಮತ್ತು ಧಿಲೋನ್‌ ಕೊಳವನ್ನು ಪ್ರವಾಸಿಗರು ನೋಡಬಹುದು.

ಪ್ರವಾಸಿಗರು ಕೊಟ್‌ಖೈ ಪ್ರದೇಶವನ್ನು ರೈಲು, ರಸ್ತೆ ಮತ್ತು ವಿಮಾನದ ಮೂಲಕ ತಲುಪಬಹುದು. ಶಿಮ್ಲಾ ವಿಮಾನ ನಿಲ್ದಾಣವು ಕೊಟ್‌ಖೈಗೆ ಸಮೀಪದ್ದು. ಇದು ಕುಲು ಮತ್ತು ನವದೆಹಲಿಗೂ ಸಂಪರ್ಕ ಸಾಧಿಸುತ್ತದೆ. ನವ ದೆಹಲಿ ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ಪ್ರವಾಸಿಗರು ಶಿಮ್ಲಾಗೆ  ನೇರವಾಗಿ ಪ್ರಯಾಣಿಸಬಹುದು.

ಶಿಮ್ಲಾದಲ್ಲಿರುವ ರೈಲ್ವೆ ನಿಲ್ದಾಣವು ಕೊಟ್‌ಖೈಗೆ ಸಮೀಪದ್ದು. ಇದು ಕಲ್ಕಾ ರೈಲ್ವೆ ನಿಲ್ದಾಣಕ್ಕೆ ಸಂಪರ್ಕವನ್ನು ಹೊಂದಿರುತ್ತದೆ. ಇಲ್ಲಿಂದ ಪ್ರವಾಸಿಗರು ಟ್ಯಾಕ್ಸಿ ಅಥವಾ ಕಾರುಗಳನ್ನು ಕೊಟ್‌ಖೈಗೆ ತಲುಪಲು ಬಾಡಿಗೆಗೆ ಪಡೆಯಬಹುದು. ರಸ್ತೆಯ ಮೂಲಕ ಪ್ರಯಾಣ ಮಾಡಲು ಬಯಸುವ ಪ್ರವಾಸಿಗರು ಬಸ್‌, ಟ್ಯಾಕ್ಸಿ ಮತ್ತು ಕ್ಯಾಬ್‌ಗಳನ್ನು ಪಡೆದು ಸಮೀಪದ ನಗರದಿಂದ ಆಗಮಿಸಬಹುದು.

ವರ್ಷದಾದ್ಯಂತ ಕೊಟ್‌ಖೈನ ವಾತಾವರಣವು ಪ್ರಶಾಂತವಾಗಿರುತ್ತದೆ. ಏಪ್ರಿಲ್‌ ತಿಂಗಳು ಬೇಸಿಗೆಯ ಆರಂಭವಾದರೆ ಜೂನ್‌ನ ವರೆಗೂ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ದಾಖಲಾದ ಪ್ರಕಾರ 15 ಡಿಗ್ರಿ ಮತ್ತು 28 ಡಿಗ್ರಿ ಆಗಿದೆ. ನವೆಂಬರಿನಿಂದ ಫೆಬ್ರವರಿ ಅವಧಿಯಲ್ಲಿ ಚಳಿಗಾಲವಿರುತ್ತದೆ. ಈ ಅವಧಿಯಲ್ಲಿ ತಾಪಮಾನವು 15 ಡಿಗ್ರಿಯಿಂದ 4 ಡಿಗ್ರಿಯ ತನಕ ಇರುತ್ತದೆ..

ಕೊಟ್‌ಖೈ ಪ್ರಸಿದ್ಧವಾಗಿದೆ

ಕೊಟ್‌ಖೈ ಹವಾಮಾನ

ಕೊಟ್‌ಖೈ
14oC / 57oF
 • Sunny
 • Wind: NE 9 km/h

ಉತ್ತಮ ಸಮಯ ಕೊಟ್‌ಖೈ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕೊಟ್‌ಖೈ

 • ರಸ್ತೆಯ ಮೂಲಕ
  ಶಿಮ್ಲಾದಿಂದ ಕೊಟ್‌ಖೈಗೆ ನೇರ ಬಸ್‌ ಸೇವೆಯಿದೆ. ಪ್ರವಾಸಿಗರು ಸುಲಭವಾಗಿ ಬಸ್‌ಗಳನ್ನು ಟ್ಯಾಕ್ಸಿಗಳನ್ನು ಮತ್ತು ಕ್ಯಾಬ್‌ಗಳನ್ನು ಕೊಟ್‌ಖೈನಿಂದ ಪಡೆದು ಪ್ರಯಾಣಿಸಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಶಿಮ್ಲಾ ರೈಲ್ವೆ ಸ್ಟೇಷನ್‌ ಅತ್ಯಂತ ಸಮೀಪದ್ದು. ಕಲ್ಕಾ ರೈಲ್ವೆ ನಿಲ್ದಾಣಕ್ಕೆ ಇಲ್ಲಿಂದ ನೇರ ಸಂಪರ್ಕವಿದೆ. ಇದು ನ್ಯಾರೋ ಗೇಜ್‌ ರೈಲ್ವೆ. ಪ್ರವಾಸಿಗರು ಟ್ಯಾಕ್ಸಿ ಮತ್ತು ಕ್ಯಾಬ್‌ಗಳನ್ನು ರೈಲ್ವೆ ನಿಲ್ದಾಣದ ಹೊರಗೆ ಬಾಡಿಗೆಗೆ ಪಡೆದು ಕೊಟ್‌ಖೈ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕೊಟ್‌ಖೈಗೆ ಸಮೀಪದ ವಿಮಾನ ನಿಲ್ದಾಣ ಶಿಮ್ಲಾ ವಿಮಾನ ನಿಲ್ದಾಣ. ಕುಲು ಮತ್ತು ನವದೆಹಲಿಯಂಥ ಪ್ರಮುಖ ನಗರಗಳಿಗೆ ಇಲ್ಲಿಂದ ನೇರ ಸಂಪರ್ಕವಿದೆ. ವಿದೇಶದಿಂದ ಬರುವ ಪ್ರವಾಸಿಗರು ನವದೆಹಲಿಯಿಂದ ಶಿಮ್ಲಾಗೆ ಪ್ರಯಾಣಿಸುವ ವಿಮಾನದಲ್ಲಿ ಬರಬಹುದು. ವಿಮಾನ ನಿಲ್ದಾಣದ ಹೊರಗೆ ಟ್ಯಾಕ್ಸಿ ಅಥವಾ ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆದು ಕೊಟ್‌ಖೈ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
15 Aug,Sat
Return On
16 Aug,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Aug,Sat
Check Out
16 Aug,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Aug,Sat
Return On
16 Aug,Sun
 • Today
  Kotkhai
  14 OC
  57 OF
  UV Index: 5
  Sunny
 • Tomorrow
  Kotkhai
  8 OC
  47 OF
  UV Index: 5
  Partly cloudy
 • Day After
  Kotkhai
  10 OC
  49 OF
  UV Index: 5
  Partly cloudy