Search
  • Follow NativePlanet
Share
ಮುಖಪುಟ » ಸ್ಥಳಗಳು» ರೋಹ್ರು

ರೋಹ್ರು - ನಿಸರ್ಗದ ಮಡಿಲಲ್ಲಿ...

21

ಪಬ್ಬರ‍್ ನದಿಯ ದಡದಲ್ಲಿ ಸಮುದ್ರ ಮಟ್ಟದಿಂದ ಸುಮಾರು 1525 ಮೀ. ಎತ್ತರದಲ್ಲಿ ನೆಲೆಸಿದೆ ರೋಹ್ರು. ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿರುವ ರೋಹ್ರು ಸೇಬು ತೋಟದಿಂದಾಗಿ ಜನಪ್ರಿಯ. ಈ ಪ್ರದೇಶದಲ್ಲಿ ಬೆಳೆಯುವ ರಿಚ್‌ ರೆಡ್‌ ಮತ್ತು ರಾಯಲ್‌ ಡೆಲಿಶಿಯಸ್‌ ಸೇಬು, ಅತ್ಯಂತ ಜನಪ್ರಿಯವಾಗಿದೆ. ರೋಹ್ರು ಜನಪ್ರಿಯವಾಗಿದ್ದು ಇನ್ನೂ ಒಂದು ಕಾರಣಕ್ಕೆ, ಅದು ಮೀನುಗಾರಿಕೆ. ಈ ನಗರವನ್ನು ಅಭಿವೃದ್ಧಿಗೊಳಿಸಿದ್ದು ರಾಜ ಬಜ್ರಂಗ್‌ ಬಹಾದುರ್‌ ಸಿಂಗ್‌. ಈ ಸ್ಥಳವನ್ನು ಕಂಡುಹಿಡಿದು ಇದನ್ನು ಮೀನುಗಾರಿಕೆಗೆ ಸೂಕ್ತ ತಾಣವನ್ನಾಗಿ ಪರಿವರ್ತಿಸಿದರು. ಇನ್ನು ಸಾಹಸಿ ಪ್ರವೃತ್ತಿಯುಳ್ಳ ಪ್ರವಾಸಿಗರು ಚಾರಣ, ಪ್ಯಾರಾಗ್ಲೈಡಿಂಗ್‌ ಮತ್ತು ಹ್ಯಾಂಗ್‌ ಗ್ಲೈಡಿಂಗ್‌ನ್ನೂ ಇಲ್ಲಿ ಮಾಡಬಹುದು.

ಪ್ರವಾಸಿಗರು ರೋಹ್ರುಗೆ ಭೇಟಿ ನೀಡಿದಾಗ ಸಮೀಪದಲ್ಲಿನ ಪ್ರದೇಶಗಳನ್ನೂ ನೋಡಿಕೊಂಡು ಬರಬಹುದು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಶಿಕ್ರು ದೇವತಾ ದೇವಸ್ಥಾನ, ಚಿರಗಾಂವ್‌ ಮತ್ತು ದೋದ್ರಾ ಹಾಗೂ ಚನ್ಸಲ್‌ ಶ್ರೇನಿ. ಇದರ ಜೊತೆಗೆ ಹತ್ಕೋಟಿ ಕೂಡಾ ಪಬ್ಬರ‍್ ನದಿಯ ದಡದಲ್ಲೇ ಇದೆ. ಇದೂ ಕೂಡಾ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಈ ಪ್ರದೇಶವು ಮೂರು ನದಿ ಮೂಲವು ಸೇರುವ ಸ್ಥಳವಾಗಿದ್ದರಿಂದ ಇದನ್ನು ಸಂಗಮ ಎಂದೂ ಕರೆಯಲಾಗುತ್ತದೆ. ಹಿಂದೂಗಳಿಗೆ ಇದು ಅತ್ಯಂತ ಪುಣ್ಯಸ್ಥಳ. ಐತಿಹ್ಯಗಳ ಪ್ರಕಾರ, ಹತ್ಕೋಟಿಯಲ್ಲಿ ಶಿವ ಮತ್ತು ಆತನ ಪತ್ನಿ ಪಾರ್ವತಿಗೂ ಜಗಳ ನಡೆದಿತ್ತಂತೆ.

ರೋಹ್ರುವಿಗೆ ನೀವು ರೈಲು, ವಿಮಾನ ಮತ್ತು ರಸ್ತೆಯ ಮೂಲಕ ಪ್ರಯಾಣಿಸಬಹುದು. ರೋಹ್ರುವಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಶಿಮ್ಲಾ ವಿಮಾನ ನಿಲ್ದಾಣ. ನವದೆಹಲಿಯಿಂದ ನಿರಂತರ ವಿಮಾನ ಸೇವೆಯು ಶಿಮ್ಲಾಗೆ ಲಭ್ಯವಿದೆ. ವಿವಿಧ ಸಂಸ್ಥೆಗಳು ವಿಮಾನ ಸೇವೆಯನ್ನು ಇಲ್ಲಿ ಒದಗಿಸುತ್ತವೆ. ಅಂತಾರಾಷ್ಟ್ರೀಯ ಪ್ರವಾಸಿಗರು ನವದೆಹಲಿಯಿಂದ ವಿಮಾನಗಳಲ್ಲಿ ಪ್ರಯಾಣಿಸಬಹುದು. ನವದೆಹಲಿಯಿಂದ ಇಲ್ಲಿಗೆ ಸುಮಾರು 443 ಕಿ.ಮೀ ದೂರವಿದೆ. ರೋಹ್ರುಗೆ ರೈಲಿನ ಮೂಲಕ ಹೋಗಲು ಇಷ್ಟಪಡವು ಪ್ರವಾಸಿಗರಿಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಕಲ್ಕಾ ರೈಲ್ವೆ ಸ್ಟೇಷನ್‌. ರೋಹ್ರುವಿನಿಂದ 165 ಕಿಮೀ ದೂರದಲ್ಲಿ ಈ ರೈಲ್ವೆ ನಿಲ್ದಾಣವಿದೆ. ಪ್ರವಾಸಿಗರು ಕಲ್ಕಾ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಲಭ್ಯವಿರುವ ಟ್ಯಾಕ್ಸಿ ಅಥವಾ ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆದು ರೋಹ್ರುವನ್ನು ತಲುಪಬಹುದು. ರೋಹ್ರುಗೆ ರಸ್ತೆಯ ಮೂಲಕ ಪ್ರಯಾಣಿಸುವುದಾದರೆ ಶಿಮ್ಲಾದಿಂದ ನಿರಂತರ ಬಸ್‌ ಸೇವೆ ಲಭ್ಯವಿದೆ.

ರೋಹ್ರುವಿನ ವಾತಾವರಣವು ವರ್ಷಪೂರ್ತಿ ಬದಲಾಗುತ್ತಲೇ ಇರುತ್ತದೆ. ಚಳಿಗಾಲದಲ್ಲಿ ಮಾತ್ರ ತಾಪಮಾನವು ತುಂಬಾ ಇಳಿದು ಸೊನ್ನೆಗಿಂತಲೂ ಕಡಿಮೆ ಡಿಗ್ರಿಗೆ ಇಳಿಯುತ್ತದೆ. ಬೇಸಿಗೆಯಲ್ಲಿ ತಾಪಮಾನವು 14 ಡಿಗ್ರಿಯಿಂದ 20 ಡಿಗ್ರಿಯ ತನಕ ಇರುತ್ತದೆ. ರೋಹ್ರುವಿನಲ್ಲಿ ಮಧ್ಯಮ ಪ್ರಮಾಣದ ಮಳೆಯು ಬೀಳುತ್ತದೆ. ಇದರಿಂದ ಮಳೆಗಾಲದಲ್ಲಿ ಪ್ರಯಾಣ ಮಾಡುವವರು ಸೂಕ್ತ ರೈನ್‌ಕೋಟ್‌ಗಳನ್ನು ತೆಗೆದುಕೊಂಡು ಹೋಗಬೇಕು. ರೋಹ್ರುವಿನಲ್ಲಿ ಚಳಿಗಾಲದಲ್ಲಿ ವಿಪರೀತ ಶೀತವಿರುತ್ತದೆ, 10 ಡಿಗ್ರಿಯಿಂದ -7 ಡಿಗ್ರಿಯ ತನಕ ತಾಪಮಾನ ಇಳಿಯುತ್ತದೆ. ಹೀಗಾಗಿ ಈ ಅವಧಿಯಲ್ಲಿ ಬರುವ ಪ್ರವಾಸಿಗರು ದಪ್ಪ ಉಲನ್‌ ಬಟ್ಟೆಗಳನ್ನು ತರಲೇ ಬೇಕು. ಇಲ್ಲವಾದಲ್ಲಿ ಚಳಿಯಿಂದ ತಪ್ಪಿಸಿಕೊಳ್ಳುವುದು ಕಷ್ಟ. ರೋಹ್ರುವಿಗೆ ಹೋಗಬಯಸುತ್ತಿರೆಂದಾದರೆ ಮಾರ್ಚ್‌‌ನಿಂದ ನವೆಂಬರಿನ ಅವಧಿಯನ್ನು ಕಾಯ್ದಿರಿಸಿಕೊಳ್ಳಿ,

ರೋಹ್ರು ಪ್ರಸಿದ್ಧವಾಗಿದೆ

ರೋಹ್ರು ಹವಾಮಾನ

ಉತ್ತಮ ಸಮಯ ರೋಹ್ರು

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ರೋಹ್ರು

  • ರಸ್ತೆಯ ಮೂಲಕ
    ರಸ್ತೆಯ ಮೂಲಕ ಪ್ರಯಾಣ ಮಾಡಲು ಬಯಸುವ ಪ್ರವಾಸಿಗರು ಸಮೀಪದ ನಗರಗಳಿಂದ ಬಸ್‌ ಸೌಲಭ್ಯವನ್ನು ಪಡೆಯಬಹುದು. ಶಿಮ್ಲಾದಿಂದ ರೋಹ್ರುವಿಗೆ ನಿರಂತರವಾಗಿ ಬಸ್‌ ಸೇವೆ ಇದೆ. ಪ್ರವಾಸಿಗರು ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ಬಸ್‌ಗಳನ್ನು ಮತ್ತು ಖಾಸಗಿ ಸೇವೆಯ ಬಸ್‌ಗಳನ್ನು ಪಡೆದು ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರೋಹ್ರುವಿಗೆ ಸಮೀಪದ ರೈಲು ನಿಲ್ದಾಣ ಕಲ್ಕಾದಲ್ಲಿದೆ. ಸುಮಾರು 165 ಕಿ.ಮೀ ದೂರದಲ್ಲಿರುವ ಈ ರೈಲು ನಿಲ್ದಾಣವೇ ರೋಹ್ರುವಿಗೆ ಅತ್ಯಂತ ಸಮೀಪದ್ದು. ಉತ್ತರ ಭಾರತದ ಎಲ್ಲಾ ಪ್ರಮುಖ ರೈಲು ನಿಲ್ದಾಣಗಳಿಗೂ ಇಲ್ಲಿಂದ ಸಂಪರ್ಕವಿದೆ. ಪ್ರವಾಸಿಗರು ಸುಲಭವಾಗಿ ಟ್ಯಾಕ್ಸಿ ಮತ್ತು ಕ್ಯಾಬ್‌ಗಳನ್ನು ರೈಲು ನಿಲ್ದಾಣದಿಂದ ರೋಹ್ರುವಿಗೆ ಬಾಡಿಗೆಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಶಿಮ್ಲಾದಲ್ಲಿರುವ ಜುಬ್ಬರಹಟ್ಟಿ ವಿಮಾನ ನಿಲ್ದಾಣವು ರೋಹ್ರುವಿಗೆ ಸಮೀಪದ್ದು. ಪ್ರವಾಸಿಗರು ನವದೆಹಲಿಯಿಂದ ಶಿಮ್ಲಾಗೆ ನಿರಂತರ ವಿಮಾನವನ್ನು ಇಲ್ಲಿಂದ ಪಡೆಯಬಹುದು. ಭಾರತದ ಇತರೆ ಪ್ರಮುಖ ನಗರಗಳಿಗೆ ಇಲ್ಲಿಂದ ವಿಮಾನ ಸಂಪರ್ಕವಿದೆ. ಅಂತಾರಾಷ್ಟ್ರೀಯ ಪ್ರವಾಸಿಗರು ನವದೆಹಲಿ ವಿಮಾನ ನಿಲ್ದಾಣದಿಂದ ಸಂಪರ್ಕಿತ ವಿಮಾನಗಳಲ್ಲಿ ಪ್ರಯಾಣ ಮಾಡಬಹುದು. ದೆಹಲಿ ವಿಮಾನ ನಿಲ್ದಾಣದಿಂದ ರೋಹ್ರುವಿಗೆ ಟ್ಯಾಕ್ಸಿ ಮತ್ತು ಕ್ಯಾಬ್‌ಗಳು ಲಭ್ಯವಿದೆ. ಅಲ್ಲಿಂದ ರೋಹ್ರುವಿಗೆ 443 ಕಿ.ಮೀ ದೂರವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu