ಸಂಗಮ - ನದಿಗಳು ಸೇರುವ ಸ್ಥಳ

ಮುಖಪುಟ » ಸ್ಥಳಗಳು » ಸಂಗಮ » ಮುನ್ನೋಟ

ಬೆಂಗಳೂರಿನಿಂದ 92 ಕಿಲೋಮೀಟರ್ ದೂರದಲ್ಲಿರುವ ಸಂಗಮ ಒಂದು ಅದ್ಭುತ ತಾಣವಾಗಿದೆ. ಈ ಸ್ಥಳವು ಅರ್ಕಾವತಿ ನದಿ ಕಾವೇರಿಯಲ್ಲಿ ವಿಲೀನವಾಗಿದ್ದನ್ನು ಪ್ರತಿನಿಧಿಸುತ್ತದೆ. ಬೆಂಗಳೂರಿನಿಂದ ಸುಮಾರು ಎರಡು ಗಂಟೆಗಳ ಕಾಲವನ್ನು ತೆಗೆದುಕೊಳ್ಳುವ ಈ ಪ್ರಯಾಣದ ಪ್ರಾಮುಖ್ಯತೆಯೇ ದಾರಿಯುದ್ದಕ್ಕೂ ಸಿಗುವ ಮಜಾ. ರಸ್ತೆಯಲ್ಲಿನ ಕೆಲವು ಅನಿರೀಕ್ಷಿತ ತಿರುವುಗಳು ಮತ್ತು ಹೊರಳುಗಳು ನಮ್ಮ ಪಯಣವನ್ನು ಆಸಕ್ತಿದಾಯಕವಾಗಿಸುವವಲ್ಲದೇ ನದಿಗಳ ಅಸಾಧಾರಣ ದೃಶ್ಯವನ್ನೂ ನೋಡಿ ನಾವು ಆನಂದಿಸಬಹುದು. ಸಂಗಮದಲ್ಲಿ ನದಿಗಳ ನೀರಿನ ಆಳ ಕಡಿಮೆ ಇದ್ದು, ನೀಮಗೆ ನೀರಿನಲ್ಲಿ ನಡೆಯುವ ಮತ್ತು ಒಂದು ಮುಳುಗು ಹಾಕುವ ಅವಕಾಶವು ಲಭಿಸುತ್ತದೆ.

 

ಮತ್ತು ಇನ್ನೂ ಹೆಚ್ಚೂ ಮಾಡಬಹುದು ..

ಸಂಗಮದ ಪ್ರಯಾಣವು, ಚಾರಣ, ಈಜು ಮತ್ತು ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಮೀನುಹಿಡಿಯುವುದು .. ಇಂತಹ ಚಟುವಟಿಕೆಗಳನ್ನೂ ಒಳಗೊಂಡಿದೆ. ನಿಮ್ಮ ಸಂಚಾರದಲ್ಲಿ ಸೇರಿಸಿಕೊಳ್ಳಬಹುದಾದ ಇನ್ನೊಂದು ತಾಣ ಸಂಗಮದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಮೇಕೆದಾಟು. ಮೇಕೆದಾಟುನಲ್ಲಿ, ಕಾವೇರಿ ಆಳವಾದ ಕಣಿವೆಯ ಮೂಲಕ ಹರಿಯುತ್ತಾಳೆ. ಮೇಕೆದಾಟು ಎಂಬ ಹೆಸರು ಮೇಕೆ ಯಿಂದ ವಿಕಾಸಗೊಂಡಿದ್ದು - ಮೇಕೆ ಎಂದರೆ ಆಡು ಎಂಬರ್ಥವಿದೆ. ಸ್ಥಳೀಯ ಪುರಾಣದ ಪ್ರಕಾರ ಹುಲಿಯೊಂದು ಮೇಕೆಯನ್ನು ಬೆನ್ನುಹತ್ತಿತ್ತು ಆಗ ಮೇಕೆ ಈ ಕಣಿವೆಯನ್ನು ದಾಟಿ ತಪ್ಪಿಸಿಕೊಂಡಿತು. ಈ ಕಣಿವೆಯಲ್ಲಿ ದೈವಿಕ ಶಕ್ತಿ ಇದೆ ಅದರಿಂದಲೇ ಮೇಕೆಗೆ ಇದನ್ನು ದಾಟಲು ಮತ್ತು ಹುಲಿಯಿಂದ ತಪ್ಪಿಸಿಕೊಳ್ಳಲು ಸಾದ್ಯವಾಯಿತೆಂದು ಸ್ಥಳೀಯರು ನಂಬುತ್ತಾರೆ. ನದಿಯು ಸಂಪೂರ್ಣ ಪ್ರಕೋಪದಿಂದ ಹರಿಯುವ ಮಳೆಗಾಲದ ನಂತರದ ಕಾಲವು ಮೇಕೆದಾಟು ಭೇಟಿಗೆ ಅತ್ಯುತ್ತಮ ಕಾಲ. ಕೇವಲ ರಸ್ತೆಯ ಮೂಲಕ ಮಾತ್ರ ಈ ಸ್ಥಳವನ್ನು ತಲುಪಬಹುದಾಗಿದ್ದು ಬೆಂಗಳೂರಿನಿಂದ ಮೇಕೆದಾಟುವಿನ ಹತ್ತಿರದ ಪಟ್ಟಣವಾದ ಕನಕಪುರಕ್ಕೆ ಅನೇಕ ಬಸ್ಗಳು ಲಭ್ಯವಿವೆ.

Please Wait while comments are loading...