Search
  • Follow NativePlanet
Share

ಮನಾಲಿ: ಭೂಮಿಯ ಮೇಲಿನ ನೈಸರ್ಗಿಕ ಸ್ವರ್ಗ

71

ಸಮುದ್ರ ಮಟ್ಟದಿಂದ 1950 ಮೀಟರ್‌ ಎತ್ತರದಲ್ಲಿದೆ ಗಿರಿ ಶಿಖರ ಮನಾಲಿ. ಹಿಮಾಚಲ ಪ್ರದೇಶ ರಾಜ್ಯದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಎಂಬ ಹೆಗ್ಗಳಿಕೆ ಹೊಂದಿರುವ ತಾಣ ಇದಾಗಿದೆ. ರಾಜ್ಯದ ರಾಜಧಾನಿ ಶಿಮ್ಲಾದಿಂದ 250 ಕಿ.ಮೀ. ದೂರದಲ್ಲಿರುವ ಈ ಪ್ರದೇಶ ಕುಲ್ಲು ಜಿಲ್ಲೆಯ ಒಂದು ಭಾಗ.

ಹಿಂದೂ ಸಂಪ್ರದಾಯದ ಪ್ರಕಾರ, ಮನಾಲಿಗೆ ಈ ಹೆಸರು ಬಂದಿದ್ದು ಮನುವಿನಿಂದಾಗಿ. ಈತ ಭಾರತದ ಮೇಲಿನ ಪ್ರೀತಿಗೆ ಬ್ರಹ್ಮ ಸೃಷ್ಟಿಸಿ ಕಳುಹಿಸಿದ್ದ ದೈವಾಂಶ ಸಂಭೂತನಾಗಿದ್ದ. ಹಿಂದೂ ಸಂಪ್ರದಾಯದ ನಂಬಿಕೆಯಂತೆ ಮನುವು ಇಲ್ಲಿಗೆ ಬಂದಿದ್ದು ಏಳು ತಲೆಮಾರುಗಳ ಹುಟ್ಟು ಹಾಗೂ ಸಾವಿನ ನಂತರ. ಮನಾಲಿ ಕೂಡ, ಆಚರಣೆ ದೃಷ್ಟಿಯಿಂದ ಜನಪ್ರಿಯವಾಗಿರುವುದು ಏಳು ನದಿಗಳನ್ನು ದಾಟಿ ಬರಬೇಕಾಗಿರುವುದರಿಂದ. ಹಿಂದೂಗಳ ನಂಬಿಕೆಯ ಕೇಂದ್ರವಾಗಿದೆ.

ನಿಸರ್ಗದತ್ತ ಸೌಂದರ್ಯ ಈ ತಾಣವನ್ನು ಇಷ್ಟೊಂದು ಜನಪ್ರಿಯವಾಗಿಸಿದೆ. ಹೂವಿನ ತೋಟ, ಹಿಮಾಚ್ಛಾದಿತ ಬೆಟ್ಟಗಳು, ಕೆಂಪು ಹಾಗೂ ಹಸಿರು ಸೇಬು ಹಣ್ಣಿನ ತೋಟಗಳಿಂದಾಗಿ ಪ್ರಸಿದ್ಧಿ ಹೊಂದಿದೆ. ಮನಾಲಿಗೆ ಪ್ರವಾಸಕ್ಕೆ ತೆರಳಿದವರು ಇಲ್ಲಿನ ಗ್ರೇಟ್‌ ಹಿಮಾಲಯನ್‌ ನ್ಯಾಷನಲ್‌ ಪಾರ್ಕ್, ಹಡಿಂಬಾ ದೇಗುಲ, ಸೋಲಾಂಗ್‌ ಕಣಿವೆ, ಸುಂದರ ಕೆರೆಗಳಾದ ಬಿಯಸ್‌ ಕುಂಡ ಹಾಗೂ ರೊಹತಂಗ್‌ ಪಾಸ್‌ ವಿಶೇಷ ಗಮನ ಸೆಳೆಯುವ ತಾಣಗಳು. ಪಂಡೋಹ ಆಣೆಕಟ್ಟು, ಚಂದ್ರಖನಿ ಪಾಸ್‌, ರಘುನಾಥ ದೇವಾಲಯ, ಜಗನ್ನಾಥಿ ದೇವಿ ದೇಗುಲ ಸೇರಿದಂತೆ ಹಲವು ಖಾಯಂ ಆಕರ್ಷಣೆಗಳು ಇಲ್ಲಿವೆ. ಹಡಿಂಬಾ ದೇಗುಲವು 1533 ರಲ್ಲಿ ನಿರ್ಮಿಸಿದ್ದಾಗಿದೆ. ಹಿಂದೂ ದೈವ ಹಡಿಂಬನ ಸಹೋದರಿ ಹಡಿಂಬಾ ದೇವಿಗೆ ಮೀಸಲಾಗಿದೆ. ಸ್ಥಳೀಯ ನಂಬಿಕೆ ಪ್ರಕಾರ, ಈ ದೇವಾಲಯವನ್ನು ನಿರ್ಮಿಸಿದ ಅರಸು ಇದರ ಶಿಲ್ಪಿಯ ಬಲಗೈಯನ್ನು ಕಡೆದಿದ್ದ ಎಂದು ಹೇಳುತ್ತಾರೆ. ಇದೇ ಮಾದರಿಯ ಇನ್ನಷ್ಟು ದೇವಾಲಯ ನಿರ್ಮಾಣ ಆಗದಿರಲಿ ಎಂಬ ಉದ್ದೇಶದಿಂದ ಹೀಗೆ ಕೈ ಕತ್ತರಿಸಿದ್ದ ಎಂದು ಹೇಳಲಾಗುತ್ತದೆ. ಸೋಲಾಂಗ್‌ ಕಣಿವೆ ಎಂಬುದು ಮನಾಲಿಯ ಇನ್ನೊಂದು ಆಕರ್ಷಕ ಹಾಗೂ ರಮಣೀಯ ತಾಣ. 300 ಮೀಟರ್‌ ಎತ್ತರದಲ್ಲಿರುವ  ಆಕಾಶಗಂಗೆಗೆ ಹೆಸರುವಾಸಿಯಾಗಿದೆ. ಪ್ರವಾಸಿಗರನ್ನು ಸೆಳೆಯಲು, ಪ್ರವಾಸ ಆಯೋಜಕರು ಚಳಿಗಾಲದ ಸಮಯದಂದು ಈ ಕಣಿವೆಯ ಪ್ರದೇಶದಲ್ಲಿ ನಾನಾ ಕಸರತ್ತನ್ನು ಆಯೋಜಿಸುತ್ತಾರೆ. ಇನ್ನು ಬೆಟ್ಟವೇರುವ ಸಾಹಸಿಗಳಿಗೆ ರೊಹತಂಗ್‌ ಪಾಸ್‌ ನೆಚ್ಚಿನ ತಾಣ. ಇದನ್ನು ಜನರು ಪಿಕ್‌ನಿಕ್‌ ಸ್ಥಳವಾಗಿ ಪರಿಗಣಿಸಿದ್ದು, ಬೃಹತ್‌ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇಲ್ಲಿ ಪ್ರವಾಸಿಗರಿಗೆ ಪ್ಯಾರಾಗ್ಲೈಡಿಂಗ್‌, ಬೆಟ್ಟ ಹತ್ತುವುದು, ಸ್ಕೀಯಿಂಗ್‌ ಸೇರಿದಂತೆ ಹಲವು ಅವಕಾಶಗಳು ತೆರೆದುಕೊಂಡಿವೆ. ಇನ್ನು ರೊಹತಂಗ್‌ ಪಾಸ್‌ಗೆ ಬಂದವರಿಗೆ ಇಲ್ಲಿನ ಅತ್ಯಾಕರ್ಷಕ ನೋಟ, ಭೂಪ್ರದೇಶ, ಬೆಟ್ಟ, ಗುಡ್ಡಗಳು, ಆಕರ್ಷಕ ವೀಕ್ಷಣಾ ತಾಣ ಅಪಾರವಾಗಿ ಸೆಳೆಯುತ್ತದೆ.

ಮನಾಲಿಯಲ್ಲಿದ್ದ ಸಂದರ್ಭದಲ್ಲಿ ಬಿಯಸ್ ಕುಂಡ್‌ ನೋಡಲು ಮರೆಯದಿರಿ. ಋಷಿ ವ್ಯಾಸರು ಸ್ನಾನ ಮಾಡುತ್ತಿದ್ದ ಸ್ಥಳ ಎಂಬ ಕೀರ್ತಿ ಇದಕ್ಕಿದೆ. ವ್ಯಾಸರು ಭಾರತೀಯ ಮಹಾಗ್ರಂಥ ಮಹಾಭಾರತದ ಕತೃ. ಸ್ಥಳೀಯರ ಪ್ರಕಾರ, ಈ ಬಿಯಸ್ ಕುಂಡ್‌ ನದಿಯ ನೀರಲ್ಲಿ ಮುಳುಗು ಹಾಕಿದರೆ ಯಾವುದೇ ವಿಧದ ಚರ್ಮರೋಗವಿದ್ದರೂ ವಾಸಿಯಾಗುತ್ತದೆ ಎನ್ನುತ್ತಾರೆ.

ಇಲ್ಲಿರುವ ವಶಿಷ್ಟ ಎಂಬ ಹಳ್ಳಿ ಇನ್ನೊಂದು ಆಕರ್ಷಣೆಯ ಕೇಂದ್ರ. ಕಲ್ಲಿನಿಂದಲೇ ನಿರ್ಮಿಸಿದ ದೇವಾಲಯದಿಂದ ಇದು ಪ್ರಸಿದ್ಧಿ ಹೊಂದಿದೆ. ಇಲ್ಲಿ ನೈಸರ್ಗಿಕ ಬಿಸಿ ನೀರಿನ ಬುಗ್ಗೆಗಳಿವೆ. ಇಲ್ಲಿನ ಸ್ಥಳೀಯ ಪುರಾಣದ ಪ್ರಕಾರ, ದೇವ ಶ್ರೀರಾಮಚಂದ್ರನ ಸಹೋದರ ಲಕ್ಷ್ಮಣನು ವಶಿಷ್ಟದಲ್ಲಿ ಬಿಸಿನೀರ ಬುಗ್ಗೆಯನ್ನು ನಿರ್ಮಿಸಿದ್ದ. ಇಲ್ಲಿಂದು ಕಾಲ ಗುರು ಹಾಗೂ ಶ್ರೀರಾಮ ಮಂದಿರ ಇದೆ.

ವನ್ಯಜೀವಿ ವೀಕ್ಷಿಸುವ ಆಸಕ್ತಿ ಇರುವ ಪ್ರವಾಸಿಗರಿಗೆ ಗ್ರೇಟ್‌ ಹಿಮಾಲಯನ್‌ ನ್ಯಾಷನಲ್‌ ಪಾರ್ಕ್ ಸೂಕ್ತ ತಾಣ. ಪಶ್ಚಿಮ ಭಾಗದ ಸಾಕಷ್ಟು ವಿಧದ ಪಕ್ಷಿ ಸಂಕುಲ ಇಲ್ಲಿದೆ. ಇಲ್ಲಿ ಒಟ್ಟು 300 ವಿಧದ ಪಕ್ಷಿ ಹಾಗೂ 30 ಬಗೆಯ ಪ್ರಾಣಿಗಳು ವಾಸವಾಗಿವೆ.

ಜಗನ್ನಾಥಿ ದೇವಿ ದೇವಾಲಯ ನಿರ್ಮಾಣವಾಗಿ ಆಗಲೇ 1500 ವರ್ಷ ಸಂದಿದೆ. ಮನಾಲಿಯ ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರ. ಈ ದೇವಾಲಯವು ಭುವನೇಶ್ವರಿ ತಾಯಿಗೆ ಮೀಸಲಾಗಿದೆ. ಈ ದೇವತೆಯು ಹಿಂದು ದೇವರಾದ ವಿಷ್ಣುವಿನ ಸಹೋದರಿ. ರಘುನಾಥ ದೇಗುಲ ಸಂದರ್ಶಿಸಲೇಬೇಕಾದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಇದು ರಘುನಾಥ ಜೀಗೆ ಮುಡಿಪಾಗಿದೆ. ಹಿಮಾಲಯದ ತಪ್ಪಲಿನಲ್ಲಿ ಜೀವಿಸುವ ಜನಾಂಗದ ಸಮೂಹದ ದೇವಾಲಯ ನಿರ್ಮಾಣ ಮಾದರಿಯಾದ ಪಹಾರಿ ಹಾಗೂ ಪ್ಯಾರಮಂಡಲ ಶೈಲಿಯ ವಾಸ್ತುಶಿಲ್ಪದ ಮಿಶ್ರಣದ ರೂಪ ಹೊಂದಿ ಈ ದೇಗುಲ ನಿರ್ಮಾಣವಾಗಿದೆ. ಇವೆಲ್ಲವುಗಳ ಜತೆ ಸಾಕಷ್ಟು ಆಧುನಿಕ ಹಾಗೂ ಆಕರ್ಷಕ ಕ್ರೀಡಾ ಹಾಗೂ ಸಾಹಸಿ ಚಟುವಟಿಕೆಗೆ ಮನಾಲಿ ಹೇಳಿ ಮಾಡಿಸಿದ ತಾಣ. ಬೆಟ್ಟ ಏರುವುದು, ಜಲಕ್ರೀಡೆ, ಟ್ರೆಕ್ಕಿಂಗ್‌, ಜೋರ್ಬಿಂಗ್‌, ಬಂಡೆ ಏರುವ ಸಾಹಸಕ್ಕೆ ವಿಶಿಷ್ಟ ಅವಕಾಶ ಇಲ್ಲಿ ದೊರೆಯುತ್ತದೆ. ಟ್ರೆಕ್ಕಿಂಗ್‌ ಹಾಗೂ ಇತರೆ ಸಾಹಸಕ್ಕೆ ಇಲ್ಲಿನ ಡಿಯೋ ಟಿಬ್ಬಾ, ಬಾಸೆ ಕ್ಯಾಂಪ್‌, ಪಿನ್‌ ಪಾರ್ವತಿ ಪಾಸ್‌, ಬಿಯಸ್ ಕುಂಡ, ಎಸ್‌ಎಆರ್‌ ಪಾಸ್‌, ಚಂದ್ರಖಾನಿ, ಬಾರಾಶಿಲಾ ಹಾಗೂ ಬಾಲ್‌ ತಾಲ್‌ ಕೆರೆ ಪ್ರಮುಖವಾಗಿ ಲಭಿಸುತ್ತವೆ.

ಇಲ್ಲಿನ ರೊಹತಂಗ್ ಪಾಸ್‌, ಲಡಾಕ್‌, ಲಾಹೌಲ್‌ ಮಾತು ಸ್ಪಿತಿ ಮನಾಲಿಯಲ್ಲಿ ಬೆಟ್ಟ ಹತ್ತುವ ಹಾಗೂ ಇತರೆ ಸಾಹಸ ಕ್ರಿಯೆಗೆ ಅನುವು ಮಾಡಿಕೊಡುತ್ತವೆ. ಇಲ್ಲಿನ ಬೆಟ್ಟ ಮಾರ್ಗಗಳು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಹಿಮಮುಕ್ತವಾಗಿರುತ್ತವೆ. ಈ ಸಂದರ್ಭದವನ್ನೇ ಟ್ರೆಕ್ಕಿಂಗ್‌, ಗುಡ್ಡವೇರುವುದು, ಕಲ್ಲು ಬಂಡೆ ಹತ್ತುವುದು, ಬೆಟ್ಟ ಮೇಲೇರುವ ಸಾಹಸಕ್ಕೆ ಪ್ರಶಸ್ತ ಸಮಯ ಎಂದು ನಿಗದಿಪಡಿಸಲಾಗಿದೆ.

ಮನಾಲಿ ತಲುಪುವುದು ಪ್ರವಾಸಿಗರಿಗೆ ಕಷ್ಟಸಾಧ್ಯವೆನಲ್ಲ. ಏಕೆಂದರೆ ರಸ್ತೆ, ರೈಲು ಹಾಗೂ ವಾಯು ಸಂಪರ್ಕ ಉತ್ತಮವಾಗಿದೆ. ಮನಾಲಿಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಭುಂತರ್ ವಿಮಾನ ನಿಲ್ದಾಣವಿದೆ. ಇದು ಡೊಮೆಸ್ಟಿಕ್‌ ವಿಮಾನ ನಿಲ್ದಾಣವಾಗಿದ್ದರೂ ದೇಶದ ಪ್ರಮುಖ ನಗರಗಳಾದ  ಹೊಸದಿಲ್ಲಿ, ಚಂಡಿಘಡ, ಧರ್ಮಶಾಲಾ, ಶಿಮ್ಲಾ, ಪಠಾನ್‌ಕೋಟ್‌ ಮತ್ತಿತರ ಕಡೆಗಳಿಂದ ಸಂಪರ್ಕ ಸೌಲಭ್ಯ ಹೊಂದಿದೆ. ಇದಕ್ಕೆ ಸಮೀಪದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೆಹಲಿಯಲ್ಲಿದೆ. ಈ ನಿಲ್ದಾಣವು ಅನ್ಯ ದೇಶದ ಪ್ರವಾಸಿಗರನ್ನೂ ಸಂಪರ್ಕಿಸುವ ವ್ಯವಸ್ಥೆ ಹೊಂದಿದೆ.

ಜೋಗಿಂದರ್‌ನಗರ್‌ ರೈಲು ನಿಲ್ದಾಣ ಮನಾಲಿಗೆ ಅತ್ಯಂತ ಸಮೀಪದ ರೈಲು ನಿಲ್ದಾಣವಾಗಿದೆ. ಇದು ಮನಾಲಿಯಿಂದ 165 ಕಿ.ಮೀ. ದೂರದಲ್ಲಿದೆ. ಇದು ದೇಶದ ಇತರೆ ಭಾಗದಿಂದ ಉತ್ತಮ ಸಂಪರ್ಕ ಹೊಂದಿದೆ. ಚಂಡಿಗಡ, ಶಿಮ್ಲಾ, ದಿಲ್ಲಿ ಹಾಗೂ ಪಠಾನ್‌ಕೋಟ್‌ನಿಂದ ಸಾಕಷ್ಟು ರೈಲುಗಳು ಇಲ್ಲಿಗೆ ನಿರಂತರವಾಗಿ ಸಂಪರ್ಕ ಹೊಂದಿವೆ. ಮನಾಲಿಯ ವಾತಾವರಣ ಸಾಮಾನ್ಯವಾಗಿದೆ. ವರ್ಷದ ಎಲ್ಲಾ ದಿನವೂ ಸಹನೀಯವಾಗಿರುತ್ತದೆ. ಆದಾಗ್ಯೂ ಮಾರ್ಚ್ ಮತ್ತು ಜೂನ್‌ ತಿಂಗಳು ಭೇಟಿಗೆ ಉತ್ತಮ ಸಮಯ.

ಮನಾಲಿ ಪ್ರಸಿದ್ಧವಾಗಿದೆ

ಮನಾಲಿ ಹವಾಮಾನ

ಉತ್ತಮ ಸಮಯ ಮನಾಲಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮನಾಲಿ

  • ರಸ್ತೆಯ ಮೂಲಕ
    ಹಿಮಾಚಲ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಚ್‌ಪಿಟಿಸಿ)ಯ ಉತ್ತಮ ಬಸ್‌ ಸಂಪರ್ಕ ಇಲ್ಲಿಗಿದೆ. ಇದಕ್ಕೆ ಸಮೀಪದಲ್ಲಿರುವ ಕುಲ್ಲುಗೆ ರಾಷ್ಟ್ರದ ಎಲ್ಲಾ ಭಾಗದಿಂದ ಬಸ್‌ ಸಂಪರ್ಕ ಇದೆ. ಪ್ರಯಾಣಿಕರು ಸರ್ಕಾರಿ ಡಿಲಕ್ಸ್‌ ಬಸ್‌ಗಳನ್ನು ಬಾಡಿಗೆಗೆ ಪಡೆದು ಕೂಡ ಇಲ್ಲಿಗೆ ತಲುಪಬಹುದು. ಇದಲ್ಲದೆ ಹೊಸದಿಲ್ಲಿ, ಚಂಡಿಗಡ, ಪಠಾನ್‌ಕೋಟ್‌, ಶಿಮ್ಲಾಗಳಿಂದಲೂ ಇಲ್ಲಿಗೆ ಸುಗಮವಾಗಿ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜೋಗಿಂದರ್‌ನಗರ್‌ ರೈಲು ನಿಲ್ದಾಣ ಮನಾಲಿಗೆ ಅತ್ಯಂತ ಸಮೀಪದ ರೈಲು ನಿಲ್ದಾಣವಾಗಿದೆ. ಇದು ಮನಾಲಿಯಿಂದ 165 ಕಿ.ಮೀ. ದೂರದಲ್ಲಿದೆ. ಇದು ದೇಶದ ಇತರೆ ಭಾಗದಿಂದ ಉತ್ತಮ ಸಂಪರ್ಕ ಹೊಂದಿದೆ. ಚಂಡಿಗಡ, ಶಿಮ್ಲಾ, ದಿಲ್ಲಿ ಹಾಗೂ ಪಠಾನ್‌ಕೋಟ್‌ನಿಂದ ಸಾಕಷ್ಟು ರೈಲುಗಳು ಇಲ್ಲಿಗೆ ನಿರಂತರವಾಗಿ ಸಂಪರ್ಕ ಹೊಂದಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮನಾಲಿಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಭುಂತರ್ ವಿಮಾನ ನಿಲ್ದಾಣವಿದೆ. ಇದನ್ನು ಕುಲು-ಮನಾಲಿ ವಿಮಾನ ನಿಲ್ದಾಣ ಅಥವಾ ಕುಲ್ಲು ಏರ್‌ಪೋರ್ಟ್ ಎಂದೂ ಕೂಡ ಕರೆಯಲಾಗುತ್ತದೆ. ಇದು ಡೊಮೆಸ್ಟಿಕ್‌ ವಿಮಾನ ನಿಲ್ದಾಣವಾಗಿದೆ. ಆದರೆ ಇದು ದೇಶದ ಪ್ರಮುಖ ನಗರಗಳಾದ ಹೊಸದಿಲ್ಲಿ, ಚಂಡಿಘಡ, ಧರ್ಮಶಾಲಾ, ಶಿಮ್ಲಾ, ಪಠಾನ್‌ಕೋಟ್‌ ಮತ್ತಿತರ ಕಡೆಗಳಿಂದ ಸಂಪರ್ಕ ಸೌಲಭ್ಯ ಹೊಂದಿದೆ. ಇದಕ್ಕೆ ಸಮೀಪದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಲ್ಲಿಯ ಇಂದಿರಾಗಾಂಧಿ ಇಂಟರ್‌ನ್ಯಾಷನಲ್‌ (ಐಜಿಐ) ವಿಮಾನ ನಿಲ್ದಾಣ ಆಗಿದೆ. ಈ ನಿಲ್ದಾಣವು ಅನ್ಯ ದೇಶದ ಪ್ರವಾಸಿಗರನ್ನೂ ಸಂಪರ್ಕಿಸುವ ವ್ಯವಸ್ಥೆ ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat