Search
  • Follow NativePlanet
Share
ಮುಖಪುಟ » ಸ್ಥಳಗಳು» ಮಶೋಬ್ರಾ

ಮಶೋಬ್ರಾ - ರಾಜವೈಭವದ ಸ್ವಾಗತ

14

ಮಶೋಬ್ರ ಶಿಮ್ಲಾ ಜಿಲ್ಲೆಯಲ್ಲಿರುವ ಪ್ರಸಿದ್ದ ಪ್ರವಾಸಿ ತಾಣ. ಬೆಟ್ಟಗಳ ನಡುವಿನ ಪಟ್ಟಣವಾಗಿರುವ ಮಶೋಬ್ರ ಇಲ್ಲಿನ ಮನಮೋಹಕ ಸೌಂದರ್ಯ ಮತ್ತು ತಂಪಾದ ವಾತಾವರಣದಿಂದಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ಸಮುದ್ರ ಮಟ್ಟದಿಂದ 2500 ಮೀಟರ್ ಎತ್ತರದಲ್ಲಿರುವ ಮಶೋಬ್ರ ಇಂಡಸ್ ಮತ್ತು ಗಂಗಾ ನದಿಯ ದಡದಲ್ಲಿ ನೆಲೆ ನಿಂತಿದ್ದು ಏಷಿಯಾದ ಅತಿ ದೊಡ್ಡ ನೀರಾವರಿ ಪ್ರದೇಶ ಎನಿಸಿದೆ. ಲೇಡಿ ಮೌಂಟ್ ಬ್ಯಾಟನ್ ಮತ್ತು ಲೇಡಿ ಎಡ್ವಿನಾ ಅವರ ಜೀವನ ಚರಿತ್ರೆಗಳ ಪ್ರಕಾರ, ಮಶೋಬ್ರಾವನ್ನು ಮೊದಲು ಹುಡುಕಿದ್ದು 18 ನೇ ಶತಮಾನದಲ್ಲಿ ಲಾರ್ಡ್ ಡಾಲ್ ಹೌಸಿ. ಮಶೋಬ್ರಾ ಪಟ್ಟಣದ ಒಂದು ವಿಶೇಷವೆಂದರೆ ಹಣ್ಣುಗಳು. ಶಿಮ್ಲಾ ನಗರಕ್ಕೆ ಹಣ್ಣು ಮತ್ತು ತರಕಾರಿ ಪೂರೈಸುವ ಮುಖ್ಯ ನಗರವೆಂದರೆ ಅದು ಮಶೋಬ್ರಾ.

ಮಶೋಬ್ರ ಪಟ್ಟಣ ಶಿಮ್ಲಾದ ಸಾನ್ನಿಧ್ಯದಲ್ಲಿರುವುದರಿಂದ ಬಹಳಷ್ಟು ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ಸಂರಕ್ಷಿತ ಅರಣ್ಯ ಧಾಮ ಮತ್ತು ಮಹಸು ದೇವತಾ ದೇವಸ್ಥಾನ. ಮಹಸು ದೇವತೆ ಅಥವಾ ಸ್ಥಳೀಯ ಭಾಷೆಯಲ್ಲಿ ಶಿವನ ದೇವಸ್ಥಾನ ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ಮಶೋಬ್ರಾವನ್ನು ಭೇಟಿ ಮಾಡಲು ಬರುವ ಪ್ರವಾಸಿಗರು ಸಂರಕ್ಷಿತ ಅರಣ್ಯ ಧಾಮವನ್ನೂ ನೋಡಲೇಬೇಕು. ಈ ಅರಣ್ಯದಲ್ಲಿ ಅಪರೂಪದ ವನರಾಶಿಗಳನ್ನು ಪಶುಪಕ್ಷಿಗಳನ್ನು ನೋಡಬಹುದು.

ಚಾರಣ, ಶಿಬಿರ, ವನವಿಹಾರ ಮುಂತಾದವುಗಳನ್ನು ಇಲ್ಲಿ ಪ್ರವಾಸಿಗರು ಆಸ್ವಾದಿಸುತ್ತಾರೆ. ಇದೆಲ್ಲವುಗಳ ಹೊರತಾಗಿ ಶಿಮ್ಲಾ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದ್ದು ಮಶೋಬ್ರಾದಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿದೆ. ಪರ್ವತಗಳ ರಾಣಿ ಎಂದೇ ಹೆಸರು ಪಡೆದಿರುವ ಈ ಸ್ಥಳ ಪ್ರವಾಸಿಗರಿಗೆ ಹಿಮಾಚಲ ರಾಜ್ಯ ಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು ನೋಡುವ ಸೌಭಾಗ್ಯವನ್ನೂ ನೀಡುತ್ತದೆ.

ನಾಲ್ದೇರಾ, ವೈಲ್ಡ್ ಫ್ಲಾವರ್ ಹಾಲ್ ಮತ್ತು ಕಾರಿಗ್ನಾನೋಗಳು ಮಶೋಬ್ರಾದ ಮತ್ತಷ್ಟು ಆಕರ್ಷಣೆಗಳಾಗಿದ್ದು ಪ್ರತಿದಿನ ಪ್ರವಾಸಿಗರಿಗೆ ಕೈಬಿಸಿ ಕರೆಯುತ್ತವೆ. ಇದರೊಂದಿಗೆ, ಮಹಸು ಜಾತ್ರೆ ಈ ಪ್ರದೇಶದ ಪ್ರಮುಖ ಹಬ್ಬ. ಗ್ರಾಮದ ಅಧಿದೇವತೆಯಾದ ಮಹಸು ದೇವತೆಯ ಹೆಸರಿನಲ್ಲಿ ನಡೆಯುವ ಈ ಹಬ್ಬ ಮಹಸು ಜಾತ್ರೆ ಎಂದೇ ಪ್ರಸಿದ್ದಿ ಪಡೆದಿದೆ. ಇದು ಎರಡು ದಿನಗಳ ಉತ್ಸವವಾಗಿದ್ದು ಪ್ರತಿ ವರ್ಷ ಮೇ ತಿಂಗಳ ಮೂರನೇ ಮಂಗಳವಾರ ದುರ್ಗಾ ದೇವಿಯ ಮುಂದೆ ನೆರವೇರುತ್ತದೆ.

ಮಶೋಬ್ರಾ ಪ್ರಸಿದ್ಧವಾಗಿದೆ

ಮಶೋಬ್ರಾ ಹವಾಮಾನ

ಉತ್ತಮ ಸಮಯ ಮಶೋಬ್ರಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಶೋಬ್ರಾ

  • ರಸ್ತೆಯ ಮೂಲಕ
    ಶಿಮ್ಲಾದಿಂದ ಮಶೋಬ್ರಾ 10 ಕಿಲೋ ಮೀಟರ್ ದೂರದಲ್ಲಿದ್ದು, ಬಸ್ ಮೂಲಕವೂ ಇಲ್ಲಿಗೆ ಬರಬಹುದು. ಶಿಮ್ಲಾದ ಲಕ್ಕರ್ ಬಝಾರ್ ನಿಂದ ಮಶೋಬ್ರಾಕ್ಕೆ ನಿರಂತರ ಸರ್ಕಾರಿ ಮತ್ತು ಖಾಸಗಿ ಬಸ್ ಸೌಕರ್ಯಗಳಿವೆ. ಶಿಮ್ಲಾದಿಂದ ಮಶೋಬ್ರಾಕ್ಕೆ ಟ್ಯಾಕ್ಸಿ ಸೌಲಭ್ಯಗಳೂ ಇವೆ. ದೆಹಲಿ ಮತ್ತು ಛಂಡೀಘಡ್ ದಂತಹ ನಗರಗಳಿಗೆ ಸೂಕ್ತ ಬಸ್ ಸೌಲಭ್ಯಗಳಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಲ್ಕ ರೈಲ್ವೇ ನಿಲ್ದಾಣ ಮಶೋಬ್ರಾದಿಂದ 103 ಕಿಲೋ ಮೀಟರ್ ದೂರದಲ್ಲಿದೆ. ಚಂಡೀಘಡ ರೈಲ್ವೇ ನಿಲ್ದಾಣ ಇಲ್ಲಿಂದ 130 ಕಿಲೋ ಮೀಟರ್ ದೂರದಲ್ಲಿದೆ. ರೈಲ್ವೇ ನಿಲ್ದಾಣದಿಂದ ಮಶೋಬ್ರಾಕ್ಕೆ ಕ್ಯಾಬ್ ಸೌಲಭ್ಯಗಳಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಶಿಮ್ಲಾದಲ್ಲಿರುವ ಜುಬ್ಬರಹಟ್ಟಿ ವಿಮಾನ ನಿಲ್ದಾಣ ಮಶೋಬ್ರಾದಿಂದ 35 ಕಿಲೋ ಮೀಟರ್ ದೂರದಲ್ಲಿದೆ. ದೆಹಲಿ, ಮುಂಬೈ, ಚಂಡೀಘರ್ ನಂತಹ ಮುಂತಾದ ಪ್ರಮುಖ ನಗರಗಳಿಗೆ ಇಲ್ಲಿಂದ ವೈಮಾನಿಕ ಸಂಪರ್ಕವಿದೆ. ಕ್ಯಾಬ್ಸ್ ಗಳು ಇಲ್ಲಿಂದ ಮಶೋಬ್ರಾಕ್ಕೆ ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri