Search
  • Follow NativePlanet
Share
ಮುಖಪುಟ » ಸ್ಥಳಗಳು » ಮಶೋಬ್ರಾ » ಹವಾಮಾನ

ಮಶೋಬ್ರಾ ಹವಾಮಾನ

ಮಶೋಬ್ರಾದ ಸೌಂದರ್ಯ ಕಣ್ತುಂಬಿಕೊಳ್ಳಲು ಇಚ್ಚಿಸುವ ಪ್ರವಾಸಿಗರು ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ನಿಂದ ಜೂನ್ ತಿಂಗಳ ನಡುವಿನಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಮಳೆಗಾಲದಲ್ಲಿಯೂ ಹಿತಕರವಾದ ವಾತಾವರಣವಿದ್ದು ಸಾಧಾರಣ ಮಳೆಯಿರುತ್ತದೆ.

ಬೇಸಿಗೆಗಾಲ

(ಏಪ್ರಿಲ್-ಜೂನ್): ಏಪ್ರಿಲ್ ನಲ್ಲಿ ಇಲ್ಲಿ ಬೇಸಿಗೆ ಶುರುವಾಗಿ ಜೂನ್ ತಿಂಗಳಲ್ಲಿ ಅಂತ್ಯ ಕಾಣುತ್ತದೆ. ಗರಿಷ್ಠ 30 ಡಿಗ್ರಿ ಮತ್ತು ಕನಿಷ್ಠ 8 ಡಿಗ್ರಿ ತಾಪಮಾನವಿರುವ ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಬಿಸಿಯನ್ನು ಹೊಡೆದೋಡಿಸಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಮಳೆಗಾಲ

(ಜುಲೈ-ಸೆಪ್ಟೆಂಬರ್): ಜುಲೈನಲ್ಲಿ ಸಾಧಾರಣ ಮಳೆ ಶುರುವಾಗಿ ಸೆಪ್ಟೆಂಬರ್ ನಲ್ಲಿ ಅಂತ್ಯ ಕಾಣುತ್ತದೆ.

ಚಳಿಗಾಲ

(ಅಕ್ಟೋಬರ್-ಜನವರಿ): ಅಕ್ಟೋಬರ್ ನಲ್ಲಿ ಚಳಿಗಾಲ ಶುರುವಾಗಿ ಜನವರಿ ತಿಂಗಳಲ್ಲಿ ಅಂತ್ಯವಾಗುತ್ತದೆ. 10 ಡಿಗ್ರಿಯಿಂದ -10 ಡಿಗ್ರಿಯವರೆಗೆ ಉಷ್ಣಾಂಶ ಏರಿಳಿತ ಕಾಣುತ್ತದೆ. ಅತಿಯಾದ ಚಳಿ ಮತ್ತು ಹಿಮಪಾತವಿರುವುದರಿಂದ ಈ ಸಮಯದಲ್ಲಿ ಮಶೋಬ್ರಾಕ್ಕೆ ಭೇಟಿ ನೀಡುವುದು ಅಷ್ಟೊಂದು ಸೂಕ್ತವಲ್ಲ.