Search
 • Follow NativePlanet
Share

ಕಲ್ಪಾ - ಸೇಬುಗಳ ಬುಟ್ಟಿ!

24

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿರುವ ಪುಟ್ಟ ಹಳ್ಳಿ ಕಲ್ಪಾ. ಸಮುದ್ರ ಮಟ್ಟದಿಂದ ಸುಮಾರು 2758 ಮೀಟರ್ ಎತ್ತರದಲ್ಲಿರುವ ಕಲ್ಪಾ, ಹಿಂದೊಮ್ಮೆ ಕಿನ್ನೌರ್ ಪ್ರದೇಶದ ರಾಜಧಾನಿಯಾಗಿತ್ತು. ಆ ನಂತರ ಅದು ರಿಕಾಂಗ್ ಪಿಯೋ ಪಟ್ಟಣದಿಂದ ಬದಲಾಯಿಸಲ್ಪಟ್ಟಿತು. ಇಲ್ಲಿ, ಪ್ರವಾಸಿಗರಿಗೆ ಹಿಮಾಲಯದಿಂದ ಹರಿದು ಬರುವ ಸಟ್ಲೇಜ್ ನದಿ ಕಿನ್ನೌರ್ ನ ಕಲ್ಲು ಬಂಡೆಗಳ ಮೂಲಕ ಹಾದು ಹೋಗುವ ಮನಮೋಹಕ ದೃಶ್ಯ ಕಣ್ಣಿಗೆ ಕಟ್ಟುತ್ತದೆ.

ದಾಖಲೆಗಳ ಪ್ರಕಾರ, ಕಲ್ಪಾ ಪ್ರದೇಶ ಮಗಧ ರಾಜವಂಶಸ್ಥರ ಅಧೀನದಲ್ಲಿತ್ತು. 6 ನೇ ಶತಮಾನದಲ್ಲಿ ಮೌರ್ಯ ಸಾಮ್ರಾಜ್ಯದವರೂ ಕೂಡ ಕಲ್ಪಾವನ್ನು ಆಳಿದ ದಾಖಲೆಯಿದೆ. ಹಾಗೆಯೇ, ಕಿನ್ನೌರ್ ಪ್ರದೇಶವನ್ನು  9 ರಿಂದ 12 ನೇ ಶತಮಾನದವರೆಗೆ ಟಿಬೇಟಿನ ಗೂಗೆ ರಾಜವಂಶವದರು ಆಳಿದ್ದರು. ನಂತರ, ಅಕ್ಬರ್ ದೊರೆ ಕಲ್ಪಾವನ್ನು ಬಲವಂತದಿಂದ ಮೊಘಲ್ ಸಾಮ್ರಾಜ್ಯದ ಅಧೀನಕ್ಕೆ ತಂದ.

ಕಲ್ಪಾದ ಪ್ರಮುಖ ಆಕರ್ಷಣೆಗಳಲ್ಲೊಂದು ಕಿನ್ನೌರ್ ಕೈಲಾಸ್ ಪರ್ವತ. ಸ್ಥಳೀಯ ಪ್ರಾದೇಶೀಕ ಭಾಷೆಯಲ್ಲಿ ಇದನ್ನು ಕಿನ್ನರ್ ಕೈಲಾಶ್ ಪರ್ವತ ಎಂದೂ ಕರೆಯುತ್ತಾರೆ. ಈ ಪ್ರದೇಶದ ಸ್ಥಳೀಯ ಜನರಿಂದ ಇದನ್ನು ಪವಿತ್ರಗೊಳಿಸಲಾಗಿದೆ ಎಂದು ನಂಬಲಾಗುತ್ತದೆ. ಈ ಬೆಟ್ಟದ ತುದಿಯಲ್ಲಿ ಕೂರಿಸಲಾಗಿರುವ 70 ಮೀಟರ್ ಎತ್ತರದ ಶಿವಲಿಂಗ ಪ್ರತಿವರ್ಷ ಸಾವಿರಾರು ಭಕ್ತರನ್ನು- ಪ್ರವಾಸಿಗರನ್ನು ಸೆಳೆಯುತ್ತದೆ. ಬಸ್ಪ ನದಿಯ ದಂಡೆಯ ಮೇಲಿರುವ ಸಾಂಗ್ಲಾ ಕಣಿವೆ ಸಮುದ್ರ ಮಟ್ಟದಿಂದ ಸುಮಾರು 8900 ಅಡಿ ಎತ್ತರದಲ್ಲಿದ್ದು ಇಲ್ಲಿನ ಮತ್ತೊಂದು ಅತ್ಯಾಕರ್ಷಣೆ.

ವಾಸ್ತುಶಿಲ್ಪ ರಚನೆಗಳಲ್ಲಿ ಆಸಕ್ತಿಯುಳ್ಳ ಪ್ರವಾಸಿಗರು ವಾಸ್ತುಶಿಲ್ಪ ರಚನೆಗಳಿಂದ ಗಮನ ಸೆಳೆಯುವ ಕಮ್ರು ಕೋಟೆ, ನಾಗಾ ದೇವಸ್ಥಾನಗಳನ್ನು ಭೇಟಿ ಮಾಡಬಹುದು. ಸಂಪಧ್ಬರಿತ ಸಂಸ್ಕೃತಿ ಮತ್ತು ಆಚರಣೆಗಳಿಗೆ ಹೆಸರುವಾಸಿಯಾದ ಚೈನಿ ಗ್ರಾಮವನ್ನೂ ಕೂಡ ಪ್ರವಾಸಿಗರು ಸಂದರ್ಶಿಸಬಹುದು. ಸಮುದ್ರಮಟ್ಟದಿಂದ 2290 ಮೀಟರ್ ಎತ್ತರದಲ್ಲಿರುವ ರೇಕಾಂಗ್ ಪಿಯೋ ನಗರಕ್ಕೆ ಭೇಟಿ ನೀಡಿದರೆ ಕಿನ್ನೌರ್ ಕೈಲಾಶ್ ಪರ್ವತದ ವಿಹಂಗಮ ನೋಟವನ್ನು ಕಾಣಬಹುದು. ಆತ್ಮಹತ್ಯಾ ಪಾಯಿಂಟ್ ಕೂಡ ಮತ್ತೊಂದು ಸೂಕ್ತ ತಾಣವಾಗಿದ್ದು ಇದು ಆಪಲ್ ಆರ್ಚರ್ಡ್ಸ್ ನಿಂದ ಕೇವಲ 10 ನಿಮಿಷ ಅಂತರದಲ್ಲಿದೆ. ಸಾಹಸ ಆಸಕ್ತರು ಕೂಡ ಈ ಪ್ರದೇಶದಲ್ಲಿ ಟ್ರೆಕ್ಕಿಂಗ್ ಮಾಡುತ್ತ ಈ ಸ್ಥಳದ ಮೋಹಕತೆಯನ್ನು ಕಣ್ತುಂಬಿಕೊಳ್ಳಬಹುದು.

ಇಲ್ಲಿನ ಬಹುತೇಕ ಸ್ಥಳೀಯರು ಜೀವನಾದಾಯಾವನ್ನು ಸಂಪಾದಿಸುವುದು ಸುಂದರವಾಗಿ ನೇಯ್ಗೆ ಮಾಡಿದ ಶಾಲ್ ಮತ್ತು ಕಿನ್ನೌರಿ ಟೊಪ್ಪಿಗೆಗಳನ್ನು ಮಾರಾಟ ಮಾಡಿ. ಹಿಂದೂ ಮತ್ತು ಬೌದ್ದ ಸಂಸ್ಕೃತಿಗಳು ಕಲ್ಪಾದಲ್ಲಿ ಸಮ್ಮಿಳಿತಗೊಂಡಿದ್ದು ಸಂಸ್ಕೃತಿಯ ಪ್ರತಿಬಿಂಬ ನೋಡುವುದಕ್ಕೆ ಸುಂದರವಾಗಿರುತ್ತದೆ.

ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣಿಕರು ಕಲ್ಪಾವನ್ನು ಸುಲಭವಾಗಿ ತಲುಪಬಹುದು. ವಿಮಾನಯಾನಕ್ಕೆ ಶಿಮ್ಲಾ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ಕಲ್ಪಾ ಹಳ್ಳಿಯಿಂದ ಇದು ಕೇವಲ 276 ಕಿಲೋ ಮೀಟರ್ ಅಂತರದಲ್ಲಿದೆ. ಮುಖ್ಯ ನಗರಗಳಾದ ದೆಹಲಿ, ಮುಂಬೈ ಮತ್ತು ಕುಲ್ಲುಗಳಿಗೆ ಇಲ್ಲಿಂದ ಸಂಪರ್ಕವಿದೆ. ಪ್ರಯಾಣಿಕರು ಶಿಮ್ಲಾ ವಿಮಾನ ನಿಲ್ದಾಣದಿಂದ ಕಲ್ಪಾಕ್ಕೆ ಟ್ಯಾಕ್ಸಿ ಮತ್ತು ಕ್ಯಾಬ್ ಗಳನ್ನು ಪಡೆಯಬಹುದು.

ಕಲ್ಪಾಕ್ಕೆ ಹತ್ತಿರದಲ್ಲಿರುವ ರೈಲ್ವೇ ನಿಲ್ದಾಣವಿರುವುದು 244 ಕಿಲೋ ಮೀಟರ್ ದೂರದ ಶಿಮ್ಲಾದಲ್ಲಿ. ಪ್ರಮುಖ ನಗರಗಳನ್ನು ಸಂಪರ್ಕಿಸುವ ಈ ರೈಲ್ವೇ ನಿಲ್ದಾಣದಲ್ಲಿ ಕಲ್ಪಾವನ್ನು ತಲುಪಲು ಟ್ಯಾಕ್ಸಿ ಮತ್ತು ಬಸ್ ಸೌಲಭ್ಯಗಳಿವೆ. ರಾಷ್ಟ್ರೀಯ ಹೆದ್ದಾರಿ 22 ರ ಮೂಲಕ (ಹಿಂದೂಸ್ಥಾನ್ ಟಿಬೇಟ್ ರಸ್ತೆ) ಕಲ್ಪಾ ತಲುಪಬಹುದು. ಪೊವರಿಯಿಂದ ಕಲ್ಪಾಕ್ಕೆ ಈ ರಸ್ತೆ ತಿರುವು ಪಡೆದುಕೊಳ್ಳುತ್ತದೆ. ಹತ್ತಿರದ ನಗರಗಳಾದ ಶಿಮ್ಲಾ ಮತ್ತು ರಾಂಪುರದಿಂದ ಕಲ್ಪಾಕ್ಕೆ ಸರ್ಕಾರಿ ಅಥವಾ ಖಾಸಗಿ ಬಸ್ ನಲ್ಲಿ ಹೋಗಬಹುದು. ಇದರ ಜೊತೆಗೆ ಬೇಸಿಗೆ ಸೀಸನ್ ನಲ್ಲಿ ರೋತಂಗ್ ಪಾಸ್ ಬಸ್ಸುಗಳಲ್ಲಿ ಸಂಚರಿಸಬಹುದು.

ಕಲ್ಪಾವನ್ನು ಭೇಟಿ ಮಾಡಲು ಬೇಸಿಗೆಯ ಕಾಲಮಾನ ಪ್ರಸಕ್ತವಾದ್ದು - ಕಾರಣ ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶ ಏರಿಳಿತಗಳಿಲ್ಲದೇ ಒಂದೇ ತೆರನಾಗಿರುತ್ತದೆ. ಬೇಸಿಗೆಯ ದಿನಗಳಲ್ಲಿ ದಾಖಲಾದ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಶಿಯಸ್. ಮಾನ್ಸೂನ್ ಸಮಯದಲ್ಲಿ ಇಲ್ಲಿ ಹೇಳತೀರಲಾರದಷ್ಟು ಮಳೆ ಸುರಿಯುವುದರಿಂದ ಮಳೆಗಾಲದಲ್ಲಿ ಕಲ್ಪಾಕ್ಕೆ ಬರುವ ಪ್ರವಾಸಿಗರು ಕೊಡೆ ಅಥವಾ ರೇನ್ ಕೋಟ್ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು. ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶ -10 ಡಿಗ್ರಿ ಸೆಲ್ಶಿಯಸ್ ಗಿಂತಲೂ ಕಡಿಮೆ ಇರುವುದರಿಂದ ಚಳಿಗಾಲದಲ್ಲಿ  ಮಾತ್ರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದು ಸೂಕ್ತವಲ್ಲ.

ಕಲ್ಪಾ ಪ್ರಸಿದ್ಧವಾಗಿದೆ

ಕಲ್ಪಾ ಹವಾಮಾನ

ಕಲ್ಪಾ
1oC / 33oF
 • Sunny
 • Wind: ENE 12 km/h

ಉತ್ತಮ ಸಮಯ ಕಲ್ಪಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಲ್ಪಾ

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ 22 ರ ಮೂಲಕ (ಹಿಂದೂಸ್ಥಾನ್ ಟಿಬೇಟ್ ರಸ್ತೆ) ಕಲ್ಪಾ ತಲುಪಬಹುದು. ಪೊವರಿಯಿಂದ ಕಲ್ಪಾಕ್ಕೆ ಈ ರಸ್ತೆ ತಿರುವು ಪಡೆದುಕೊಳ್ಳುತ್ತದೆ. ಹತ್ತಿರದ ನಗರಗಳಾದ ಶಿಮ್ಲಾ ಮತ್ತು ರಾಂಪುರದಿಂದ ಕಲ್ಪಾಕ್ಕೆ ಸರ್ಕಾರಿ ಅಥವಾ ಖಾಸಗಿ ಬಸ್ ನಲ್ಲಿ ಹೋಗಬಹುದು. ಇದರ ಜೊತೆಗೆ ಬೇಸಿಗೆ ಸೀಸನ್ ನಲ್ಲಿ ರೋತಂಗ್ ಪಾಸ್ ಬಸ್ಸುಗಳಲ್ಲಿ ಸಂಚರಿಸಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕಲ್ಪಾಕ್ಕೆ ಹತ್ತಿರದಲ್ಲಿರುವ ರೈಲ್ವೇ ನಿಲ್ದಾಣವಿರುವುದು 244 ಕಿಲೋ ಮೀಟರ್ ದೂರದ ಶಿಮ್ಲಾದಲ್ಲಿ. ಪ್ರಮುಖ ನಗರಗಳನ್ನು ಸಂಪರ್ಕಿಸುವ ಈ ರೈಲ್ವೇ ನಿಲ್ದಾಣದಲ್ಲಿ ಕಲ್ಪಾವನ್ನು ತಲುಪಲು ಟ್ಯಾಕ್ಸಿ ಮತ್ತು ಬಸ್ ಸೌಲಭ್ಯಗಳಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಶಿಮ್ಲಾ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ಕಲ್ಪಾ ಹಳ್ಳಿಯಿಂದ ಇದು ಕೇವಲ 276 ಕಿಲೋ ಮೀಟರ್ ಅಂತರದಲ್ಲಿದೆ. ಮುಖ್ಯ ನಗರಗಳಾದ ದೆಹಲಿ, ಮುಂಬೈ ಮತ್ತು ಕುಲ್ಲುಗಳಿಗೆ ಇಲ್ಲಿಂದ ಸಂಪರ್ಕವಿದೆ. ಪ್ರಯಾಣಿಕರು ಶಿಮ್ಲಾ ವಿಮಾನ ನಿಲ್ದಾಣದಿಂದ ಕಲ್ಪಾಕ್ಕೆ ಟ್ಯಾಕ್ಸಿ ಮತ್ತು ಕ್ಯಾಬ್ ಗಳನ್ನು ಪಡೆಯಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Kalpa
  1 OC
  33 OF
  UV Index: 2
  Sunny
 • Tomorrow
  Kalpa
  -2 OC
  28 OF
  UV Index: 2
  Partly cloudy
 • Day After
  Kalpa
  -1 OC
  30 OF
  UV Index: 2
  Partly cloudy