Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಪಾ » ಹವಾಮಾನ

ಕಲ್ಪಾ ಹವಾಮಾನ

ಕಲ್ಪಾಕ್ಕೆ ಏಪ್ರಿಲ್ ನಿಂದ ಜೂನ್ ತಿಂಗಳ ಮಧ್ಯ ಭಾಗದಲ್ಲಿ ಬೇಸಿಗೆಯ ಸಮಯದಲ್ಲಿ ಭೇಟಿ ನೀಡುವುದೇ ಉತ್ತಮ. ಈ ಕಾಲದಲ್ಲಿ ವಾತಾವರಣ ಹಿತಕರವಾಗಿದ್ದು ಪ್ರವಾಸಿಗರು ನಿಸರ್ಗದ ಸೌಂದರ್ಯವನ್ನು ಸವಿಯಲು ಅಡ್ಡಾಡಬಹುದು.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್ ವರೆಗೆ): ಕಲ್ಪಾದಲ್ಲಿ ಬೇಸಿಗೆಯ ದಿನಗಳಿರುವುದು ಏಪ್ರಿಲ್ ಮತ್ತು ಜೂನ್ ತಿಂಗಳ ಮಧ್ಯದಲ್ಲಿ. ಈ ಕಾಲದಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಮತ್ತು ಕನಿಷ್ಠ ಉಷ್ಣಾಂಶ 8 ಡಿಗ್ರಿಗೆ ತಲುಪುತ್ತದೆ. ಬೇಸಿಗೆಯ ದಿನಗಳಲ್ಲಿ ಸಂಚರಿಸುವ ಪ್ರವಾಸಿಗರು ಹಗುರವಾದ ಉಣ್ಣೆಯ ಬಟ್ಟೆಗಳನ್ನು ಕೊಂಡೊಯ್ಯುವುದು ಲೇಸು.

ಮಳೆಗಾಲ

(ಜುಲೈ- ಸೆಪ್ಟೆಂಬರ್): ಮಾನ್ಸೂನ್ ಸಮಯದಲ್ಲಿ ಲೆಕ್ಕಕ್ಕೆ ಸಿಗದಷ್ಟು ಮಳೆಯಾಗುತ್ತದೆ. ಈ ಸಮಯದಲ್ಲಿ ಉಷ್ಣಾಂಶ ಏರಿಳಿತ ಕಾಣುತ್ತದೆ. ಮಳೆಗಾಲದಲ್ಲಿ ಕಲ್ಪಾಕ್ಕೆ ಬರುವ ಪ್ರವಾಸಿಗರು ಮಳೆಯನ್ನು ತಡೆದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.

ಚಳಿಗಾಲ

(ಅಕ್ಟೋಬರ್-ಮಾರ್ಚ್): ಚಳಿಯ ದಿನಗಳಲ್ಲಿ ಅತಿ ಕಡಿಮೆ ಉಷ್ಣಾಂಶವಿದ್ದು ಸಹಿಸಲು ಅಸಾಧ್ಯವಾದ ಚಳಿ ಇರುತ್ತದೆ. ಈ ಸಮಯದಲ್ಲಿ ಉಷ್ಣಾಂಶ -10 ಡಿಗ್ರಿ ಸೆಲ್ಶಿಯಸ್ ಗಿಂತಲೂ ಕಡಿಮೆಯಾಗುವುದರಿಂದ ಚಳಿಗಾಲದಲ್ಲಿ ಕಲ್ಪಾಕ್ಕೆ ಭೇಟಿ ನೀಡದಿರುವುದೇ ಒಳ್ಳೆಯದು.