Search
 • Follow NativePlanet
Share
ಮುಖಪುಟ » ಸ್ಥಳಗಳು» ಕೀಲಾಂಗ್

ಕೀಲಾಂಗ್ : ಕೇವಲ ದೇವತೆಗಳ ವಾಸಸ್ಥಾನ

24

ಸಾಹಸ ಪ್ರಿಯರು ಸದಾ ಹೊಸತನ್ನು ಹುಡುಕುತ್ತಿರುತ್ತಾರೆ. ಚಾರಣ ಮಾಡುವುದಕ್ಕೆ, ಸ್ಕಿಯಿಂಗ್ ಮೊದಲಾದ ಸಾಹಸ ಚಟುವಟಿಕೆಗಳಿಗೆ ಸದಾ ಮುನ್ನುಗ್ಗುತ್ತಾರೆ. ಪ್ರತೀ ರಜಾ ದಿನಗಳಲ್ಲೂ ಇಂತಹ ಚಟುವಟಿಕೆಗಳಿಗೆ ಸೂಕ್ತವಾದ ಸ್ಥಳಗಳಿಗೆ ಹೋಗುತ್ತಾರೆ. ಅಂತಹ ಸ್ಥಳಗಳಲ್ಲಿ ಒಂದು ಹಿಮಾಚಲ ಪ್ರದೇಶ.

ಹಿಮಾಚಲ ಪ್ರದೇಶದ ಕೀಲಾಂಗ್ ಇಂತಹ ಒಂದು ಸಾಹಸಿ ಚಟುವಟಿಕೆಗಳಿಗೆ ಸೂಕ್ತವಾದ ಸ್ಥಳ. ಇಲ್ಲಿಗೆ ಪ್ರತಿವರ್ಷ ಹಲವಾರು ಸಾಹಸಿಗಳು ಬರುತ್ತಾರೆ. ಅಲ್ಲದೆ ಈ ಪ್ರದೇಶವು ದೇವತೆಗಳ ಸ್ಥಳ ಎಂದೇ ಕರೆಯಲ್ಪಟ್ಟಿದ್ದು ಹಲವಾರು ಧಾರ್ಮಿಕ ಮಠಗಳನ್ನು ಹೊಂದಿದೆ. ಆದ್ದರಿಂದ ಈ ಸ್ಥಳಕ್ಕೆ ಭೇಟಿ ನೀಡಿದರೆ ಮರೆಯಲಾಗದ ಅನುಭವ ಉಂಟಾಗುತ್ತದೆ.

ಕೀಲಾಂಗ್, 'ಮಂದಿರಗಳ ನೆಲೆ/ಭೂಮಿ' ಎಂದೇ ಜನಪ್ರಿಯವಾಗಿದೆ. ಕೀಲಾಂಗ್, ಸಮುದ್ರ ಮಟ್ಟದಿಂದ 3350 ಮೀಟರ್ ಎತ್ತರದಲ್ಲಿರುವ ಹಿಮಾಚಲ ಪ್ರದೇಶದ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಕೀಲಾಂಗ್, ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಗಳ ಪ್ರಧಾನ ಪ್ರವಾಸಿ ಆಕರ್ಷಣೀಯ ಸ್ಥಳವಾಗಿದೆ. ಖ್ಯಾತ ಬರಹಗಾರ ರುಡ್ಯಾರ್ಡ್ ಕಿಪ್ಲಿಂಗ್ "ನಿಶ್ಚಿತವಾಗಿಯೂ ದೇವತೆಗಳು ಇಲ್ಲಿ ವಾಸಿಸುತ್ತಿದ್ದಾರೆ; ಇದು ಮನುಷ್ಯರು ವಾಸಿಸುವ ಸ್ಥಳವಲ್ಲ" ಎಂದು ಕೀಲಾಂಗ್ ಅನ್ನು  ಹಾಡಿ ಹೊಗಳಿದ್ದಾರೆ. ಈ ಸ್ಥಳವು ಸಮೃದ್ಧ ಹಸಿರು ಕಣಿವೆಗಳ ಜೊತೆಗೆ ಸರಳ ಮತ್ತು ವಿಸ್ತಾರವಾದ ಪುರಾತನ ಪರ್ವತಗಳನ್ನೂ ಹೊಂದಿದೆ.

ಕೀಲಾಂಗ್, ತನ್ನಲ್ಲಿರುವ ಅನನ್ಯ ವಾಸ್ತುಶಿಲ್ಪದ ವಿನ್ಯಾಸದಿಂದ ಮತ್ತು ಐತಿಹಾಸಿಕ ಪ್ರಸ್ತುತತೆಯಿಂದ ಹೆಸರುವಾಸಿಯಾಗಿರುವ ಅನೇಕ ಬೌದ್ಧ ಯಾತ್ರಾ ಕೇಂದ್ರಗಳಿಂದ ಹೆಸರುವಾಸಿಯಾಗಿದೆ. ಕರದಂಗ್ ಮಠ ಮತ್ತು ಶಸುರ್ ಮಠ ಈ ಪ್ರದೇಶದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಎರಡು ಮಠಗಳು. 900 ವರ್ಷಗಳ ಹಳೆಯ ಕರದಂಗ್ ಮಠ  ಸಮುದ್ರ ಮಟ್ಟದಿಂದ 3500 ಮೀಟರ್ ಎತ್ತರದಲ್ಲಿದೆ. ಶಸುರ್ ಮಠವನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.  ಶಸುರ್ ಮಠವು  ನಮ್ಗಾಯಲ್ ನಲ್ಲಿದ್ದ ಭೂತಾನ್ ಮಿಷನರಿ ರಾಜ ಬಳಗದವರಾದ ಜನಸ್ಕಾರ್ ನ ಲಾಮಾ ದೇವ  ಗಯತ್ಸೋ ನಿಂದ ನಿರ್ಮಾಣಗೊಂಡಿತು. ಈ ಪ್ರದೇಶದ ಇತರೆ ಜನಪ್ರಿಯ ಧಾರ್ಮಿಕ ಮಠಗಳೆಂದರೆ ಗುರು ಘಂಟಾಲ್ ಮಠ, ತಯುಲ್ ಮಠ ಮತ್ತು ಗೆಮುರ್ ಮಠ ಮೊದಲಾದವುಗಳು.

ಕೀಲಾಂಗ್ ನ ಇತರೆ ಹೆಸರಾಂತ ತಾಣಗಳಲ್ಲಿ ಕೆಲವು ಹೆಸರಿಸಬೇಕೆಂದರೆ, ತಂಡಿ, ಸಿಸ್ಸು ಮತ್ತು ಉದಯ್ ಪುರ ಮೊದಲಾದವು. ಸಿಸ್ಸು ಪ್ರಮುಖ ಗ್ರಾಮ ಮತ್ತು ಒಂದು ಜನಪ್ರಿಯ ಪ್ರವಾಸಿ ತಾಣವಾಗಿದ್ದು ಚಂದ್ರ ನದಿ ದಡದಲ್ಲಿದೆ. ಪ್ರವಾಸಿಗರು ಈ ಪ್ರದೇಶದಲ್ಲಿ ವಸಂತ ಮತ್ತು ಶರತ್ಕಾಲದ ಋತುಗಳಲ್ಲಿ ಕಾಡು ಹೆಬ್ಬಾತುಗಳು ಮತ್ತು ಬಾತುಕೋಳಿಗಳು ವಿಹರಿಸುತ್ತಿರುವುದನ್ನು ನೋಡಬಹುದು. ಉದಯಪುರ ಗ್ರಾಮದಲ್ಲಿರುವ ಎರಡು ಪ್ರಮುಖ ದೇವಾಲಯಗಳು, ತ್ರಿಲೋಕಿನಾಥ್ ದೇವಾಲಯ ಮತ್ತು ಮರ್ಕುಲಾ ದೇವಿ ದೇವಸ್ಥಾನ, ಇವು ಪ್ರಸಿದ್ಧವಾಗಿವೆ. ಕೀಲಾಂಗ್, ಚಾರಣ ಮಾಡುವಿಕೆ, ಮೀನುಗಾರಿಕೆ, ಜೀಪ್ ಸಫಾರಿ, ಪ್ಯಾರಾಗ್ಲೈಡಿಂಗ್, ಸ್ಕೀಯಿಂಗ್ (ಜಾರುವಿಕೆ) ಮತ್ತು ಕ್ಯಾಂಪಿಂಗ್ ಹೀಗೆ ವಿವಿಧ ಸಾಹಸ ಕ್ರೀಡೆಗಳಿಗೆ ಜನಪ್ರಿಯ ತಾಣವಾಗಿದೆ.

ಕೀಲಾಂಗ್ ಗೆ, ಪ್ರಯಾಣ ಬೆಳೆಸುವ ಪ್ರಯಾಣಿಕರು ಮೂರು ಪ್ರಮುಖ ಸಂಚಾರಿ ಮಾಧ್ಯಮಗಳಾದ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದು. ಭುಂತರ್ ವಿಮಾನ ನಿಲ್ದಾಣವು, ಕೀಲಾಂಗ್ ನಿಂದ 165 ಕಿಮೀ ದೂರದಲ್ಲಿದ್ದು ಹತ್ತಿರದ ವಾಯುನೆಲೆ ಯಾಗಿದೆ. ಈ ವಿಮಾನ ನಿಲ್ದಾಣವು ದೆಹಲಿ ಮತ್ತು ಮುಂಬೈ ಮೊದಲಾದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಕೀಲಾಂಗ್ ಹತ್ತಿರದ ರೈಲು ನಿಲ್ದಾಣ 280 ಕಿಮೀ ದೂರದಲ್ಲಿರುವ ಜೋಗಿಂದರ್ ನಗರ ರೈಲು ನಿಲ್ದಾಣವಾಗಿದೆ. ಪ್ರವಾಸಿಗರು ಕೀಲಾಂಗ್ ಗೆ ಮನಾಲಿಯಿಂದ ಸಂಚರಿಸುವ ಹಲವಾರು ಸರ್ಕಾರಿ ಮತ್ತು ಖಾಸಗಿ ಬಸ್ಸುಗಳ ಮೂಲಕ ಕೂಡಾ ಪ್ರಯಾಣ ಬೆಳೆಸಬಹುದು.

ಕೀಲಾಂಗ್ ಗೆ ಭೇಟಿ ನೀಡಲು ಸೂಕ್ತ ಸಮಯ ಮೇ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗುವ ಬೇಸಿಗೆ ಕಾಲವಾಗಿದೆ.

ಕೀಲಾಂಗ್ ಪ್ರಸಿದ್ಧವಾಗಿದೆ

ಕೀಲಾಂಗ್ ಹವಾಮಾನ

ಕೀಲಾಂಗ್
14oC / 57oF
 • Sunny
 • Wind: NE 9 km/h

ಉತ್ತಮ ಸಮಯ ಕೀಲಾಂಗ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕೀಲಾಂಗ್

 • ರಸ್ತೆಯ ಮೂಲಕ
  ಹಲವಾರು ರಾಜ್ಯ ಮತ್ತು ಖಾಸಗಿ ಬಸ್ ಗಳು ಮನಾಲಿಯಿಂದ ಕೀಲಾಂಗ್ ಗೆ ಲಭ್ಯವಿವೆ. ಈ ಎರಡು ಸ್ಥಳಗಳ ನಡುವೆ ಇರುವ ದೂರ 115 ಕಿ. ಮಿ ಮತ್ತು ಕೀಲಾಂಗ್ ಗೆ ಮನಾಲಿಯಿಂದ ನಿಯಮಿತವಾಗಿ ಬಸ್ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಜೋಗಿಂದರ್ ನಗರ ರೈಲ್ವೆ ನಿಲ್ದಾಣವು ಕೀಲಾಂಗ್ ನಿಂದ 280 ಕಿ. ಮಿ ದೂರದಲ್ಲಿರುವ ಹಾಗು ಹತ್ತಿರದ ರೈಲು ನಿಲ್ದಾಣವಾಗಿದೆ. ಈ ರೈಲ್ವೆ ಜಂಕ್ಷನ್, ಮುಂಬೈ, ದಹಲಿ ಮತ್ತು ಇತರೆ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಪ್ರವಾಸಿಗರು ಕೀಲಾಂಗ್ ಅನ್ನು ಸುಲಭವಾಗಿ ತಲುಪಲು, ಟ್ಯಾಕ್ಸಿಗಳನ್ನು ನೇಮಿಸಿಕೊಂಡು ಅಥವಾ ರೈಲ್ವೆ ಸ್ಟೇಷನ್ ಹೊರಗಿನ ಖಾಸಗಿ ಅಥವಾ ರಾಜ್ಯದ ಬಸ್ ಸೇವೆಗಳನ್ನು ಪಡೆಯಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಭುಂತರ್, ಕೀಲಾಂಗ್ ನಗರದ ಕೇಂದ್ರದಿಂದ ಸುಮಾರು 168 ಕಿ. ಮೀ ದೂರದಲ್ಲಿದ್ದು ಹತ್ತಿರದ ವಾಯುನೆಲೆಯಾಗಿದೆ. ಈ ವಿಮಾನ ನಿಲ್ದಾಣವು ದಹಲಿ, ಮುಂಬೈ ಮತ್ತು ಶ್ರೀನಗರದಂತಹ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಬಸ್ ಅಥವಾ ಟ್ಯಾಕ್ಸಿಗಳು ವಿಮಾನ ನಿಲ್ದಾಣದ ಹೊರಗಿನಿಂದ ಸುಲಭವಾಗಿ ಕೀಲಾಂಗ್ ತಲುಪಲು ಲಭ್ಯವಿರುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
14 Oct,Mon
Return On
15 Oct,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Oct,Mon
Check Out
15 Oct,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Oct,Mon
Return On
15 Oct,Tue
 • Today
  Keylong
  14 OC
  57 OF
  UV Index: 5
  Sunny
 • Tomorrow
  Keylong
  8 OC
  47 OF
  UV Index: 5
  Partly cloudy
 • Day After
  Keylong
  10 OC
  49 OF
  UV Index: 5
  Partly cloudy