Search
  • Follow NativePlanet
Share

ನರಕಂದ - ಸ್ಕೀ ಆಟಗಾರರ ಸ್ವರ್ಗ!

17

ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಅತ್ಯಂತ ಸುಂದರ ಪ್ರವಾಸಿ ತಾಣ ನರಕಂದ. ಹಿಮವನ್ನು ಹೊದ್ದುಕೊಂಡಿರುವ ಶಿಖರದ ಮೇಲ್ಭಾಗ ಹಾಗೂ ತಳಭಾಗದ ಹಚ್ಚ ಹಸಿರಾದ ಹಿಮಾಲಯ ಬೆಟ್ಟಗಳ ಶ್ರೇಣಿ ಅತ್ಯಂತ ರೋಮಾಂಚಕವಾಗಿ ಕಂಗೊಳಿಸುತ್ತದೆ. ಭಾರತದ ಶಿಖರ ಪ್ರದೇಶಗಳಲ್ಲೇ ಇದು ಹೆಸರಾಂತ ಪ್ರದೇಶವಾಗಿದ್ದು ಹಿಂದೂಸ್ಥಾನ್-ಟಿಬೇಟ್ ರಸ್ತೆಯಲ್ಲಿ ಸುಮಾರು 2708 ಮೀ.ಎತ್ತರವಾಗಿ ಎದೆ ಚಾಚಿಕೊಂಡು ನಿಂತಿದೆ.

ನರಕಂದದ ಎಲ್ಲಾ ಪ್ರವಾಸಿ ತಾಣಗಳಿಗಿಂತಲೂ ಹಾತು ಪೀಕ್ ತುಂಬಾ ಹೆಸರುವಾಸಿಯಾದದ್ದು, ಅಲ್ಲಿರುವ ಶಿಖರಗಳಲ್ಲೆಲ್ಲಾ ಇದೇ ಎತ್ತರವಾದದ್ದು. ಸ್ಥಳೀಯರ ಅತ್ಯಂತ ಪವಿತ್ರವಾದ ಹಾತು ಮಾತಾ ದೇವಸ್ಥಾನ ಕೂಡ ಈ ಬೆಟ್ಟದ ತುದಿಯಲ್ಲಿದೆ.

ಕಾಲ ಹಾಗೂ ಸಮಯಕ್ಕೆ ಹೆಸರಾದ ಹಿಂದೂ ದೇವತೆ ಕಾಳಿಗೆ ಮೀಸಲಾದ ಮಹಾಮಾಯ ದೇವಸ್ಥಾನ ನರಕಂದದಲ್ಲಿದೆ. ನರಕಂದದ ಥಾನೇದಾರ್ ನಲ್ಲಿರುವ ಸ್ಟ್ರೋಕ್ಸ್ ಫಾರ್ಮ ವಿಶೇಷವಾದ ಆರ್ಕಿಡ್ ಗಳಿಂದಾಗಿ ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ. 18 ನೇ ಶತಮಾನದಲ್ಲಿ ಅಮೆರಿಕಾದ ಸ್ಯಾಮುವೆಲ್ ಸ್ಟ್ರೋಕ್ಸ್ ಎಂಬಾತನು ಆರಂಭಿಸಿದ ಈ ಫಾರ್ಮ್ ಗೆ ಆತನ ಹೆಸರನ್ನೆ ಇಡಲಾಗಿದೆ. ನರಕಂದಾದಿಂದ 17 ಕಿ.ಮೀ.ದೂರದಲ್ಲಿರುವ ಸಟ್ಲೇಜ್ ನದಿಯ ದಡದಲ್ಲಿರುವ ಕೋಟ್ ಘರ್ ಎಂಬ ಸುಂದರವಾದ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಗ್ರಾಮಕ್ಕೆ ಪ್ರವಾಸಿಗರು ಭೇಟಿ ನೀಡ ಬಹುದು. ಇಂಗ್ಲೀಷ್ ಅಕ್ಷರ 'ಯೂ' ಆಕಾರದಲ್ಲಿರುವ ಕಣಿವೆ ಪ್ರದೇಶದಲ್ಲಿದೆ.

ಕೋಟ್ ಘರ್ ನಿಂದ ಸ್ವಲ್ಪ ದೂರದಲ್ಲೇ ಇರುವ ಕುಲ್ಲು ಕಣಿವೆ, ಝಿಗ್ ಝ್ಯಾಗ್ ರಸ್ತೆಗಳು ಹಾಗೂ ಹಾಲಿನಂತಹ ಹಿಮವನ್ನು ಹೊದ್ದುಕೊಂಡಿರುವ ಅಕರ್ಷಕ ರುದ್ರರಮಣೀಯ ನೈಸರ್ಗಿಕ ಸೌಂದರ್ಯಮಯ ದೃಶ್ಯಗಳು ಪ್ರವಾಸಿಗರಿಗೆ ಖುಷಿ ಕೊಡುತ್ತದೆ.

ಹಿಮಾಲಯ ಪ್ರದೇಶಗಳಲ್ಲಿರುವ ಚಳಿಗಾಲದ ಕ್ರೀಡೆಗಳಾದ ಸ್ಕೀಯಿಂಗ್ ಹಾಗೂ ಟ್ರೆಕ್ಕಿಂಗ್ ಇಲ್ಲಿ ಹೆಚ್ಚು ಜನಪ್ರಿಯಗೊಂಡಿರುವುದು ಮಾತ್ರವಲ್ಲದೆ ಇವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಏಪ್ರಿಲ್ ನಿಂದ ಜೂನ್ ತಿಂಗಳವರೆಗೆ ಇರುವ ಬೇಸಿಗೆ ಕಾಲವು ಪ್ರವಾಸಕ್ಕೆ ಬಹಳ ಹಿತವಾಗಿರುತ್ತದೆ. ನರಕಂದಕ್ಕೆ ವಿಮಾನ ಮಾರ್ಗ, ರಸ್ತೆ ಹಾಗೂ ರೈಲು ಮಾರ್ಗಗಳ ಮೂಲಕ ಪ್ರವಾಸಿಗರು ಸುಲಭವಾಗಿ ಬಂದು ಸೇರಬಹುದು.

ನರಕಂದ ಪ್ರಸಿದ್ಧವಾಗಿದೆ

ನರಕಂದ ಹವಾಮಾನ

ಉತ್ತಮ ಸಮಯ ನರಕಂದ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನರಕಂದ

  • ರಸ್ತೆಯ ಮೂಲಕ
    ನವದೆಹಲಿ ಹಾಗೂ ಶಿಮ್ಲಾ ಹೊರತು ಪಡಿಸಿ ರಾಂಪುರ ಹಾಗೂ ಕಿನ್ನೌರ್ ಪಟ್ಟಣಗಳಿಂದ ನರಕಂದಕ್ಕೆ ಬಸ್ ಸಂಚಾರ ಉತ್ತಮವಾಗಿದೆ. ಚಿಕ್ಕ ಪಟ್ಟಣಗಳಾದ ಕೂಫಿ, ಮಟಿಯಾನ, ತಿಯೋಗ್ ಹಾಗೂ ಫಾಗು ಪಟ್ಟಣಗಳಿಂದ ನರಕಂದಾಗೆ ಸರ್ಕಾರಿ ಬಸ್ಸುಗಳು ಸಂಚರಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ನರಕಂದದಿಂದ ಸುಮಾರು 125 ಕಿ.ಮೀ.ದೂರದಲ್ಲಿರುವ ಕಲ್ಕಾ ರೈಲು ನಿಲ್ದಾಣವೆ ಇಲ್ಲಿಗೆ ಅತ್ಯಂತ ಸಮೀಪದ ರೈಲು ನಿಲ್ದಾಣವಾಗಿದೆ. ಈ ರೈಲು ಮಾರ್ಗವು ಚಂಡೀಘಡ ಹಾಗೂ ನವದೆಹಲಿಗೆ ಸಂಪರ್ಕವನ್ನು ಹೊಂದಿದೆ. ಟಾಯ್ ಟ್ರೇನ್ ನಲ್ಲೂ ಕೂಡ ಕಲ್ಕಾದಿಂದ ಶಿಮ್ಲಾಗೆ ಹೋಗಬಹುದು, ಟಿಕೇಟ್ ಶುಲ್ಕ ಹೆಚ್ಚಾಗಿ ಇರುವುದಿಲ್ಲ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸುಮಾರು 155 ಕಿ.ಮೀ.ದೂರದಲ್ಲಿರುವ ಜುಬ್ಬರಹಟ್ಟಿ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ನಿಲ್ದಾಣವಾಗಿದೆ. ಈ ನಿಲ್ದಾಣವು ನವದೆಹಲಿ, ಮುಂಬೈ ಹಾಗೂ ಶ್ರೀನಗರಗಳಿಗೆ ಸಂಪರ್ಕ ಹೊಂದಿದೆ. ನರಕಂದ ಹಾಗೂ ಶಿಮ್ಲಾಗೆ ಇಲ್ಲಿನ ವಿಮಾನ ನಿಲ್ದಾಣಗಳಿಂದ ಟ್ಯಾಕ್ಸಿ ಹಾಗೂ ಬಸ್ ವ್ಯವಸ್ಥೆಯಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat