ಕಾಲ ಹಾಗೂ ಸಮಯಕ್ಕೆ ಹೆಸರಾದ ಹಿಂದೂ ದೇವತೆ ಕಾಳಿಗೆ ಮೀಸಲಾದ ಮಹಾಮಾಯ ದೇವಸ್ಥಾನ ಹಿಮಾಚಲ ಪ್ರದೇಶದ ಕಚೀರಿಯ ಹೆಸರಾಂತ ಪ್ರವಾಸಿ ತಾಣವಾಗಿದೆ. ಇಲ್ಲಿನ ಸುಂದರನಗರ್ ರಾಜ ತನ್ನ ಅರಮನೆಯಲ್ಲಿ ನಿರ್ಮಿಸಿರುವ ಈ ದೇವಸ್ಥಾನ ಕೋಟೆಯ ಮಾದರಿಯ ವಾಸ್ತುಶಿಲ್ಪವನ್ನು ಹೊಂದಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1810 ಮೀ.ಎತ್ತರದಲ್ಲಿದೆ. ಈ ದೇವಸ್ಥಾನದ ಪ್ರವೇಶ ದ್ವಾರವು ಬೆಳ್ಳಿ, ಮರ ಹಾಗೂ ಅಲ್ಯೂಮಿನಿಯಂ ತಗಡುಗಳಿಂದ ಮಾಡಲ್ಪಟ್ಟಿದೆ. ದೇವಸ್ಥಾನ ಇರುವ ಸ್ಥಳ ಧ್ಯಾನ ಹಾಗೂ ವಿಶ್ರಾಂತಿಗೆ ಹೇಳಿ ಮಾಡಿಸಿದಂತಿದೆ.