Search
  • Follow NativePlanet
Share
ಮುಖಪುಟ » ಸ್ಥಳಗಳು » ನರಕಂದ » ಹವಾಮಾನ

ನರಕಂದ ಹವಾಮಾನ

ಇಲ್ಲಿನ ಎಲ್ಲಾ ಪ್ರವಾಸಿ ತಾಣಗಳನ್ನು ನೋಡಲೇ ಬೇಕೆಂದು ಬಯಸುವವರು ಬೇಸಿಗೆ ಕಾಲದಲ್ಲಿ ನರಕಂದಗೆ ಪ್ರವಾಸ ಹೊರಟರೆ ಸೂಕ್ತ. ಚಳಿಗಾಲದಲ್ಲಿ ಅತ್ಯಂತ ಕಡಿಮೆ ಟೆಂಪರೇಚರ್ ಇರುವುದರಿಂದ ಪ್ರವಾಸಿಗರು ಈ ಸಮಯದಲ್ಲಿ ಬರದಿದ್ದರೆ ಒಳ್ಳೆಯದು, ಆದರೆ ಸ್ಕೀಯಿಂಗ್ ನಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಸೂಕ್ತ ಕಾಲವಾಗಿದೆ.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್) : ನರಕಂದ ಪಟ್ಟಣದಲ್ಲಿ ಬೇಸಿಗೆಗಾಲವು ಏಪ್ರಿಲ್ ತಿಂಗಳಿನಿಂದ ಆರಂಭವಾಗಿ ಜೂನ್ ವರೆಗೂ ಇರುತ್ತದೆ. ಈ ಸಮಯದಲ್ಲಿ ಇಲ್ಲಿ ಹೆಚ್ಚು ಬಿಸಿಲು ಅಥವಾ ಶೆಕೆ ಇರುವುದಿಲ್ಲ. ಕನಿಷ್ಠ 10 ಡಿಗ್ರಿ ಹಾಗೂ ಗರಿಷ್ಠ 30 ಡಿಗ್ರಿ ಸೆಲ್ಶಿಯಸ್ ತಾಪಮಾನ ಕಂಡು ಬರುತ್ತದೆ. ಈ ಸಮಯದಲ್ಲಿ ಸೇಬಿನ ತೋಟದ ಗಿಡಗಳಲ್ಲಿ ಹೂಗಳು ಅರಳಿದ್ದು ಪ್ರವಾಸಿಗರ ಮನಕೆ ಮುದ ನೀಡುತ್ತದೆ.

ಮಳೆಗಾಲ

(ಜುಲೈ ನಿಂದ ಸೆಪ್ಟೆಂಬರ್) : ಜುಲೈ ತಿಂಗಳಿನಲ್ಲಿ ನರಕಂದ ಪಟ್ಟಣದಲ್ಲಿ ಆರಂಭವಾಗುವ ಮಳೆಗಾಲವು ಸೆಪ್ಟೆಂಬರ್ ವರೆಗೂ ಮುಂದುವರೆಯುತ್ತದೆ. ಈ ಕಾಲದಲ್ಲಿ ಇಲ್ಲಿ ಸಾಕಷ್ಟು ಮಳೆಯಾಗುವುದರಿಂದ ಎಲ್ಲಾ ಗಿಡಮರಗಳು ತಾಜಾತನ ಹೊಂದಿದ್ದು ಇಡಿ ನೈಸರ್ಗಿಕ ಸೌಂದರ್ಯವೆ ಆಕರ್ಷಕವಾಗಿರುತ್ತದೆ. ಈ ಕಾಲದಲ್ಲಿ ರಾತ್ರಿಯಲ್ಲಿ ತುಂಬಾ ಚಳಿ ಇರುತ್ತದೆ.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ) : ನರಕಂದ ಪಟ್ಟಣದಲ್ಲಿ ಚಳಿಗಾಲವು ಅಕ್ಟೋಬರ್ ತಿಂಗಳಿನಿಂದ ಆರಂಭವಾಗಿ ಫೆಬ್ರವರಿ ವರೆಗೂ ಇರುತ್ತದೆ. ಈ ದಿನಗಳಲ್ಲಿ ತಾಪಮಾನವು ಗರಿಷ್ಠ 15 ಡಿಗ್ರಿ ಹಾಗೂ ಕನಿಷ್ಠ 10 ಡಿಗ್ರಿ ಸೆಲ್ಶಿಯಸ್ ಇದ್ದು ಈ ಸಮಯದಲ್ಲಿ ಹೆಚ್ಚಾಗಿ ಹಿಮ ಸುರಿಯುತ್ತದೆ.