Search
  • Follow NativePlanet
Share
ಮುಖಪುಟ » ಸ್ಥಳಗಳು » ನರಕಂದ » ಆಕರ್ಷಣೆಗಳು » ಕೋಟ್ ಘರ್ ಮತ್ತು ಥಾನೇದಾರ್

ಕೋಟ್ ಘರ್ ಮತ್ತು ಥಾನೇದಾರ್, ನರಕಂದ

1

ನರಕಂದ ಪಟ್ಟಣದಿಂದ 17 ಕಿ.ಮೀ.ದೂರದಲ್ಲಿರುವ ಕೋಟ್ ಘರ್ ಹಾಗೂ ಥಾನೇದಾರ್ ಸಮುದ್ರ ಮಟ್ಟದಿಂದ ಸುಮಾರು 1830 ಮೀ.ಎತ್ತರದಲ್ಲಿದೆ. ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಲ್ಲಿ ಇವೆರಡೂ ಬಹಳ ಪ್ರಮುಖವಾದ ಸ್ಥಳಗಳಾಗಿವೆ. ಇಂಗ್ಲೀಷ್ ಅಕ್ಷರ 'ಯೂ' ಆಕಾರದ ಕಣಿವೆ ಪ್ರದೇಶವನ್ನು ಹೊಂದಿರುವ ಸಟ್ಲೇಜ್ ನದಿಯ ಎಡ ಭಾಗದಲ್ಲಿರುವ ಕೋಟ್ ಘರ್ ಅತ್ಯಂತ ಸುಂದರ ಪ್ರಾಕೃತಿಕ ದೃಶ್ಯಗಳಿಗೆ ಹೆಸರುವಾಸಿಯಾಗಿದ್ದರೆ,  ಥಾನೇದಾರ್ ಸೇಬು ಹಣ್ಣಿನ ತೋಟಕ್ಕೆ ಜನಪ್ರಿಯವಾಗಿದೆ.

ಕೋಟ್ ಘರ್ ಕಣಿವೆಯಿಂದ ಕಾಣುವ ರಮಣೀಯವಾದ ಕುಲ್ಲು ಕಣಿವೆ ಹಾಗೂ ಹಾಲು ಬಣ್ಣದ ಹಿಮವನ್ನು ಹೊದ್ದುಕೊಂಡಿರುವ ಹಿಮಾಲಯದ ಸುಂದರ ಬೆಟ್ಟಗಳು ಪ್ರವಾಸಿಗರನ್ನು ತಮ್ಮ ಸೌಂದರ್ಯದಿಂದ ಮಂತ್ರ ಮುಗ್ದರನ್ನಾಗಿಸುತ್ತದೆ. ಖ್ಯಾತ ಬರಹಗಾರ ರುಡ್ಯಾರ್ಡ್ ಕಿಪ್ಲಿಂಗ್ ತಾನು ಬರೆದ 'ಲಿಸ್ಪೀಥ್' ಎಂಬ ಸಣ್ಣ ಕಥೆಯೊಂದರಲ್ಲಿ ಕೋಟ್ ಘರ್ ಅನ್ನು 'ಉತ್ತರ ಪರ್ವತ ಶ್ರೇಣಿಗಳ ಉಪ ಪತ್ನಿ' ಎಂದು ಕರೆದಿದ್ದಾನೆ.

ಈ ಎರಡೂ ಪ್ರದೇಶಗಳೂ ತಮ್ಮಲ್ಲಿರುವ ವಿಶಾಲವಾದ ಸೇಬಿನ ತೋಟಗಳಿಂದಾಗಿ ಸದಾ ಹೆಚ್ಚು ಹಸಿರಾಗಿರುವ ಕಣಿವೆಗಳೆಂದು ಕರೆಯಲ್ಪಟ್ಟಿವೆ. ಭಾರತೀಯ ತತ್ವಶಾಸ್ತ್ರದಿಂದ ಪ್ರಭಾವಿತನಾಗಿ 1904 ರಲ್ಲಿ ಭಾರತಕ್ಕೆ ಬಂದ ಸ್ಯಾಮುವೆಲ್ ಸ್ಟ್ರೋಕ್ಸ್ ಎಂಬುವರು ನಿರ್ಮಿಸಿದ ಸ್ಟ್ರೋಕ್ಸ್ ಫಾರ್ಮ್ ಕೂಡ ಥಾನೇದಾರ್ ನಲ್ಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆ ಹೊಂದಿರುವ ಇಲ್ಲಿನ ರೆಡ್ ಡಿಲೀಷಿಯಸ್, ಗೋಲ್ಡನ್ ಡಿಲೀಷಿಯಸ್ ಹಾಗೂ ರಾಯಲ್ ಡಿಲೀಷಿಯಸ್ ಸೇಬುಗಳನ್ನು ಇಲ್ಲಿ ಬೆಳೆಯಲಾಗುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue