Search
  • Follow NativePlanet
Share
ಮುಖಪುಟ » ಸ್ಥಳಗಳು» ನಾಲ್ದೇರಾ

ನಾಲ್ದೇರಾ - ಗಾಲ್ಫ್ ಕ್ರೀಡೆಗೆ ಸೂಪರ್!

13

ನಾಲ್ದೇರಾವು ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಸುಂದರವಾದ ಬೆಟ್ಟ ಪ್ರದೇಶ. ಸಮುದ್ರ ಮಟ್ಟದಿಂದ ಸುಮಾರು 2044 ಮೀ. ಎತ್ತರದಲ್ಲಿದೆ. ಈ ಹೆಸರು ಎರಡು ಶಬ್ದಗಳ ಸಂಗಮ. ನಾಗ್‌ ಮತ್ತು ದೇಹ್ರಾ ಎಂದರೆ ನಾಗ ರಾಜನ ವಸಾಹತು ಎಂದರ್ಥ, ಮಹುನಾಗ್ ದೇವಸ್ಥಾನವೊಂದನ್ನು ನಾಗನಿಗೆ ಅರ್ಪಿಸಲಾಗಿದ್ದು, ಈ ಪ್ರದೇಶದ ಪ್ರಮುಖ ಪ್ರವಾಸಿ ತಾಣವಾಗಿ ಬಿಂಬಿತವಾಗಿದೆ.

ಐತಿಹಾಸಿಕ ದಾಖಲೆಗಳ ಪ್ರಕಾರ, ಬ್ರಿಟಿಷ್‌ ವೈಸ್‌ರಾಯ್‌ ಲಾರ್ಡ್‌ ಕರ್ಜನ್‌, ಈ ಸುಂದರವಾದ ಗುಡ್ಡ ಪ್ರದೇಶವನ್ನು ಕಂಡುಹಿಡಿದವನು. ಇಲ್ಲಿನ ಪರಿಸರವನ್ನು ನೋಡಿ ಮೋಹಗೊಂಡು ಇಲ್ಲೊಂದು ಗಾಲ್ಫ್‌ ಕೋರ್ಸ್‌‌ನ್ನು ನಿರ್ಮಿಸಬೇಕೆಂದು ಆಶಿಸಿದ್ದ. ಇಂಗ್ಲಿಷ್‌ ಭಾಷೆಯ ಹೊರತಾಗಿ ಇಲ್ಲಿ ಇತರ ಭಾರತೀಯ ಭಾಷೆಗಳಾದ ಹಿಂದಿ, ಬೆಂಗಾಳಿ, ಗೊರ್ಖಾ, ನೇಪಾಳಿ ಮತ್ತು ಟಿಬೆಟನ್‌ ಭಾಷೆಯನ್ನೂ ಇಲ್ಲಿನ ಜನ ಆಡುತ್ತಾರೆ.

ಈ ಗುಡ್ಡ ಪ್ರದೇಶವು ಗಾಲ್ಫ್‌ ಕೋಸ್‌ನಿಂದಾಗಿ ಪ್ರಸಿದ್ಧ. ದೇಶದ ಅತಿ ಪುರಾತನ ಗಾಲ್ಪ್‌ ಕೋರ್ಸ್‌ ಎಂದು ಇದನ್ನು ಪರಿಗಣಿಸಲಾಗಿದೆ. 18 ರಂಧ್ರದ ಗಾಲ್ಫ್‌ ಕೋರ್ಸ್‌ನ ಹೊರತಾಗಿ ಈ ಪ್ರದೇಶವು ಇಲ್ಲಿನ ಹಬ್ಬಳಿಗೆ ಜನಪ್ರಿಯವಾಗಿದೆ. ಅವುಗಳಲ್ಲಿ ಪ್ರಮುಖವಾದದ್ದು ಸಿಪಿ ಹಬ್ಬ. ಇದನ್ನು ಪ್ರತಿವರ್ಷ ಜೂ‌ನ್‌ನಲ್ಲಿ ಆಚರಿಸಲಾಗುತ್ತದೆ. ಇನ್ನೊಂದು ಜನಪ್ರಿಯ ಹಬ್ಬವೆಂದರೆ ಜೊಟ್ಟೋನ್‌ ಕಾ ಮೇಲಾ. ಇದು ಗೂಳು ಕಾಳಗಕ್ಕೆ ಜನಪ್ರಿಯ. ಪ್ರತಿ ವರ್ಷ ಅಕ್ಟೋಬರಿನಲ್ಲಿ ನಡೆಯುತ್ತದೆ. ಇತರೆ ಪ್ರಮುಖ ಆಕರ್ಷಣೆಗಳೆಂದರೆ ಚಬ್ಬಾ, ತತ್ತಪಾನಿ, ಶೈಲಿ ಪೀಕ್‌, ಮಹಾಕಾಳಿ ದೇವಸ್ಥಾನ ಮತ್ತು ಕೋಗಿ ಮಠ ದೇವಸ್ಥಾನಗಳು.

ನಾಲ್ದೇರಾವು ದೇಶದ ಇತರ ಪ್ರಮುಖ ನಗರಗಳಿಗೆ ಸೂಕ್ತ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ವಿಮಾನ ನಿಲ್ದಾಣಗಳಲ್ಲಿ ಜುಬ್ಬರಹಟ್ಟಿ ವಿಮಾನ ನಿಲ್ದಾಣವು ಸಮೀಪದ್ದು. ದೆಹಲಿ ಮತ್ತು ಮುಂಬೈನಂತಹ ದೇಶದ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಕೂಡಾ ಇಲ್ಲಿಗೆ ಸಮೀಪದಲ್ಲಿದೆ.

ಸಮೀಪದ ರೈಲ್ವೆ ನಿಲ್ದಾಣವು ಕಲ್ಕಾದಲ್ಲಿದೆ. ಇದು 112 ಕಿ.ಮೀ ದೂರದಲ್ಲಿದೆ. ಮುಂಬೈ ಮತ್ತು ನವದೆಹಲಿಯಂತಹ ನಗರಗಳಿಗೆ ಇಲ್ಲಿಂದ ಸಂಪರ್ಕವಿದೆ. ಪ್ರವಾಸಿಗರು ನಾಲ್ದೆರಾ ಶಿಮ್ಲಾ ಮತ್ತು ಮಶೋಬ್ರಾದಿಂದ ಬಸ್‌ ಮೂಲಕವೂ ತಲುಪಬಹುದು.

ನಾಲ್ದೇರಾ ಪ್ರಸಿದ್ಧವಾಗಿದೆ

ನಾಲ್ದೇರಾ ಹವಾಮಾನ

ಉತ್ತಮ ಸಮಯ ನಾಲ್ದೇರಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನಾಲ್ದೇರಾ

  • ರಸ್ತೆಯ ಮೂಲಕ
    ಶಿಮ್ಲಾ, ಮಶೋಬ್ರಾದಂಥ ನಗರದಿಂದ ನಾಲ್ದೇರಾಗೆ ಸೂಕ್ತ ಬಸ್‌ ಸೌಲಭ್ಯಗಳಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಲ್ಕಾ ರೈಲ್ವೆ ನಿಲ್ದಾಣವು ನಾಲ್ದೇರಾದಿಂದ ಸುಮಾರು 112 ಕಿ.ಮೀ ದೂರದಲ್ಲಿದೆ. ಕೋಲ್ಕತಾ, ಮುಂಬೈ, ದೆಹಲಿ ಮತ್ತು ಅಮೃತಸರದಂತಹ ಭಾರತದ ಪ್ರಮುಖ ನಗರಗಳಿಂದ ಇಲ್ಲಿಗೆ ರೈಲಿನ ಸಂಪರ್ಕವಿದೆ. ಪ್ರವಾಸಿಗರು ಟ್ಯಾಕ್ಸಿಗಳನ್ನು ರೈಲ್ವೆ ನಿಲ್ದಾಣದಿಂದ ಬಾಡಿಗೆಗೆ ಪಡೆದು ನಾಲ್ದೇರಾ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜುಬ್ಬರಹಟ್ಟಿ ವಿಮಾನ ನಿಲ್ದಾಣವು ನಾಲ್ದೇರಾಗೆ ಸಮೀಪದ ವಿಮಾನ ನಿಲ್ದಾಣ. ಇದು ಶಿಮ್ಲಾದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ದೆಹಲಿ, ಮುಂಬೈ, ಚಂಡೀಗಢ ಮತ್ತು ಶ್ರೀನಗರದಿಂದ ಸೂಕ್ತ ಸಂಪರ್ಕವನ್ನು ಹೊಂದಿದೆ. ನಗರದ ಕೇಂದ್ರವನ್ನು ತಲುಪಲು ಪ್ರವಾಸಿಗರು ವಿಮಾನ ನಿಲ್ದಾಣದ ಹೊರಭಾಗದಿಂದ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬಹುದು. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಾಲ್ದೇರಾಗೆ ಸಮೀಪದಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri