Search
 • Follow NativePlanet
Share

ನಹಾನ್‌ : ಶಿವಾಲಿಕ್‌ ಪರ್ವತದ ರತ್ನ

26

ಹಿಮಾವೃತ ಪರ್ವತ ಶ್ರೇಣಿಗಳು ಮತ್ತು ದಟ್ಟ ಹಸಿರು ಪರ್ವತಗಳಿಂದ ಆವೃತವಾದ ರಮಣೀಯ ಪ್ರವಾಸಿ ತಾಣ ನಹಾನ್‌. ಹಿಮಾಚಲ ಪ್ರದೇಶದ ಶಿವಾಲಿಕ್‌ ಪರ್ವತದ ತುದಿಯಲ್ಲಿದೆ. ರಾಜ ಕರಣ್‌ ಪ್ರಕಾಶ್‌ರವರು 1621ರಲ್ಲಿ ನಹಾನ್‌ ಅನ್ನು ಕಂಡುಹಿಡಿದರು. ರಕ್ಷಾಬಂಧನ ಹಬ್ಬದಲ್ಲಿ ಇಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವನ್ನು ಇವರು ಆರಂಭಿಸಿದರು. ಈ ಸಂಪ್ರದಾಯವನ್ನು ಇಂದಿಗೂ ಇಲ್ಲಿ ಆಚರಿಸಲಾಗುತ್ತಿದೆ. ಈಗ ನಹಾನ್‌ ಎಂದು ಕರೆಯಲ್ಪಡುವ ಈ ಪ್ರದೇಶದಲ್ಲೇ ನಹಾರ್ ಎಂಬ ಸಂಗಾತಿಯನ್ನು ಹೊಂದಿದ್ದ ಸಂತರೊಬ್ಬರು ಇಲ್ಲಿ ವಾಸವಾಗಿದ್ದರಂತೆ. ನಹಾರ್ ಎಂದರೆ ಕೊಲಬೇಡ ಎಂದರ್ಥ. ಐತಿಹಾಸಿಕ ಘಟನೆಯೊಂದರ ಆಧಾರದ ಮೇಲೆ ಈ ಪ್ರದೇಶಕ್ಕೆ ಈ ಹೆಸರು ಬಂದಿದೆ. ಒಬ್ಬ ರಾಜ ಸಿಂಹವನ್ನು ಕೊಲ್ಲಲು ಬಂದಾಗ ಸಂತ ನಹಾರ್ ಎಂದರಂತೆ. ಅಂದರೆ ಕೊಲಬೇಡ ಎಂದು ಹೇಳಿದರಂತೆ. ಆ ಸಂತರ ಹೆಸರು ಬಾಬಾ ಭಂವರಿ ದಾಸ್‌.

ಸಮುದ್ರ ಮಟ್ಟದಿಂದ 932 ಮೀಟರು ಎತ್ತರದಲ್ಲಿರುವ ನಹಾನ್‌ ಪ್ರಮುಖ ಪ್ರವಾಸಿ ತಾಣ. ಇಲ್ಲಿ ಸುಕೇತಿ ಫಾಸಿಲ್‌ ಪಾರ್ಕ್‌, ಸಿಂಬಲವಾರ ವನ್ಯಧಾಮ ಮತ್ತು ರೇಣುಕಾ ವನ್ಯಧಾಮವಿದೆ, ನಹಾನ್‌ನಲ್ಲಿ ಹಲವು ಕೋಟೆಗಳು, ದೇವಸ್ಥಾನಗಳು ಮತ್ತು ಕೆರೆಗಳಿವೆ. ರೇಣುಕಾ ಕೆರೆಯು ಹಿಮಾಚಲ ಪ್ರದೇಶದ ಕೆರೆಗಳಲ್ಲೇ ಅತ್ಯಂತ ದೊಡ್ಡದಾಗಿದ್ದು ಸುಮಾರು 3214 ಮೀ. ವಿಸ್ತಾರವಾಗಿದೆ. ಐತಿಹ್ಯಗಳ ಪ್ರಕಾರ, ಋಷಿಮುನಿ ಜಮದಗ್ನಿ ಮತ್ತು ಅವರ ಪುತ್ರ ಪರಶುರಾಮರಿಗೂ ಈ ಪ್ರದೇಶಕ್ಕೂ ಸಂಬಂಧವಿದೆ.

ನಹಾನ್‌ನ ದಿನನಿತ್ಯದ ಚಟುವಟಿಕೆಗೆ ಚೌಗನ್‌, ಬಿಕ್ರಮ್‌ ಸಿಂಗ್‌, ಖದರ್-ಕಾ-ಬಾಗ್‌ ಪ್ರದೇಶಗಳು ಪ್ರಮುಖ ಸ್ಥಳಗಳು. ಸ್ಥಳೀಯ ದೇವಸ್ಥಾನಗಳು, ಉಡುಗೊರೆ ಅಂಗಡಿಗಳು, ರಾಸಿನ್‌ & ಟರ್ಪಂಟೈನ್‌ ಫ್ಯಾಕ್ಟರಿಗಳು ಇಲ್ಲಿನ ಇತರ ಪ್ರಮುಖ ಆಕರ್ಷಕ ಸ್ಥಳಗಳು. ನಹಾನ್‌ನ ಮಧ್ಯದಲ್ಲಿರುವುದು ರಾಣಿ ತಾಲ್‌, ಇಲ್ಲಿ ವಿಶಾಲವಾದ ದೇವಸ್ಥಾನ ಮತ್ತು ಕೊಳವಿದೆ. ರಾಣಿ ತಾಲ್‌ ಅನ್ನು ರಾಣಿಯ ಕೆರೆ ಎಂದೂ ಕರೆಯಲಾಗುತ್ತದೆ. ನಹಾನ್‌ ಆಳುತ್ತಿದ್ದ ರಾಜರ ಕುಟುಂಬ ಬಳಸುತ್ತಿದ್ದ ಕೆರೆ ಇದಾಗಿತ್ತು. ಇತ್ತೀಚೆಗೆ ಈ ಪ್ರದೇಶವನ್ನು ಸಾರ್ವಜನಿಕ ಪಿಕ್‌ನಿಕ್‌ ತಾಣ ಎಂದು ಪರಿಗಣಿಸಲಾಗಿದೆ. ರಾಣಿ ತಾಲ್ ಕೆರೆಯಲ್ಲಿ ಚೆಂದವಾಗಿ ಸಾಗುವ ಬಾತುಕೋಳಿಗಳು ಮತ್ತು ರಾಣಿ ತಾಲ್‌ ಉದ್ಯಾನವು ಇಲ್ಲಿನ ಮೆರುಗನ್ನು ಹೆಚ್ಚಿಸಿದೆ. ಯುವಕರಿಗೆ ಮಾಲ್ ರಸ್ತೆಯು ಇನ್ನೊಂದು ಆಕರ್ಷಕ ತಾಣವಾಗಿದೆ.

ನಹಾನ್‌ನಲ್ಲಿರುವ ಅತ್ಯಂತ ಪುರಾತನ ಕೋಟೆಗಳಲ್ಲಿ ಜೈತಕ್‌ ಕೂಡಾ ಒಂದು. ಇದನ್ನು ಗೂರ್ಖಾ ಮುಖ್ಯಸ್ಥ ರಂಜೋರ್ ಸಿಂಗ್‌ ಥಾಪಾ ಮತ್ತು ಆತನ ಬೆಂಬಲಿಗರು ನಿರ್ಮಿಸಿದ್ದರು. ನಹಾನ್‌ ಕೋಟೆಗೆ ದಾಳಿ ಮಾಡಿ ಜೈತಕ್‌ ಕೋಟೆಯನ್ನು ಜೈತಕ್‌ ಗುಡ್ಡದ ಮೇಲೆ ನಿರ್ಮಿಸಿದರು. ನಹಾನ್‌ ಕೋಟೆಯನ್ನು ನಾಶ ಮಾಡಿದ ಸಾಮಗ್ರಿಗಳಿಂದಲೇ ಹೊಸ ಕೋಟೆಯನ್ನು ಅವರು ಕಟ್ಟಿದರು. ಇನ್ನು ಜಗನ್ನಾಥ ದೇವಸ್ಥಾನ, ರೇಣುಕಾ ದೇವಸ್ಥಾನ ಮತ್ತು ತ್ರಿಲೋಕಪುರ ದೇವಸ್ಥಾನಗಳು ಇಲ್ಲಿನ ಪ್ರಮುಖ ಆಕರ್ಷಕ ತಾಣಗಳು. ರಂಜೋನ್‌ ಅರಮನೆ ಮತ್ತು ಪಕ್ಕಾ ತಲಾಬ್‌ಗಳು ನಹಾನ್‌ನ ಐತಿಹಾಸಿಕ ಮಹತ್ವವುಳ್ಳ ಸ್ಥಳಗಳು. ಚಾರಣ ಮತ್ತು ಪರ್ವತಾರೋಹಣಕ್ಕೆ ಸೂಕ್ತ ತಾಣಗಳೆಂದರೆ ಜಮು ಪೀಕ್‌ ಮತ್ತು ಚೂರಧಾರ್ ಪೀಕ್‌.

ಪ್ರವಾಸಿಗರು ನಹಾನ್‌ಗೆ ಹೋಗಲು ವಿಮಾನ, ರಸ್ತೆ ಮತ್ತು ರೈಲಿನ ಸಹಾಯ ಪಡೆಯಬಹುದು. ನಹಾನ್‌ಗೆ ವರ್ಷದ ಯಾವುದೇ ದಿನವೂ ಹೋಗಬಹುದು. ಬೇಸಿಗೆಗಾಲವು ಮಾರ್ಚ್‌ನಲ್ಲಿ ಆರಂಭವಾಗಿ ಜೂನ್‌ ತನಕ ಇರುತ್ತದೆ. ಮಾಗಿಕಾಲದಲ್ಲಿ ಚಾರಣ ಮತ್ತು ಸುತ್ತಲಿನ ಪ್ರದೇಶ ನೋಡಲು ಅತ್ಯುತ್ತಮ ವಾತಾವರಣವಿರುತ್ತದೆ. ಚಳಿಗಾಲ ವಿಪರೀತ ಶೀತ ಮತ್ತು ಮಂಜಿನಿಂದಾವೃತವಾಗಿರುತ್ತದೆ.

ನಹಾನ್ ಪ್ರಸಿದ್ಧವಾಗಿದೆ

ನಹಾನ್ ಹವಾಮಾನ

ನಹಾನ್
28oC / 83oF
 • Sunny
 • Wind: N 5 km/h

ಉತ್ತಮ ಸಮಯ ನಹಾನ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ನಹಾನ್

 • ರಸ್ತೆಯ ಮೂಲಕ
  ಪ್ರವಾಸಿಗರು ನಹಾನ್‌ಗೆ ಬಸ್‌ನಲ್ಲಿ ಹೋಗಬಹುದು. ಹಲವು ವಿಧದ ಐಷಾರಾಮಿ ಬಸ್‌ಗಳ ಸೇವೆ ನಹಾನ್‌ಗೆ ಲಬ್ಯವಿದೆ. ದೆಹಲಿ, ಶಿಮ್ಲಾ ಮತ್ತು ಕುಲ್ಲುಗೆ ಇಲ್ಲಿಂದ ನೇರ ಸಂಪರ್ಕವಿದೆ. ಸರ್ಕಾರಿ ಬಸ್‌ ಸೇವೆಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಲಭ್ಯ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ನಹಾನ್‌ನಿಂದ 100 ಕಿ.ಮೀ ದೂರದಲ್ಲಿರುವ ಅಂಬಾಲಾ ರೈಲ್ವೆ ನಿಲ್ದಾಣ ಅತ್ಯಂತ ಸಮೀಪದ್ದು. ರೈಲ್ವೆ ಸ್ಟೇಷನ್‌ಗೆ ಮುಂಬೈ, ನವದೆಹಲಿ, ಪುಣೆ, ಡೆಹ್ರಾಡೂನ್ ಮತ್ತು ಚಂಢೀಗಢದಂತಹ ನಗರಗಳಿಂದ ಸಂಪರ್ಕವಿದೆ. ಅಂಬಾಲಾ ರೈಲ್ವೆ ನಿಲ್ದಾಣದಿಂದ ನಹಾನ್‌ಗೆ ಟ್ಯಾಕ್ಸಿ ಅಥವಾ ಬಸ್‌ ಪಡೆದು ಪ್ರಯಾಣಿಸಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಡೆಹ್ರಾಡೂನ್‌ ಮತ್ತು ಚಂಡೀಗಢ ವಿಮಾನ ನಿಲ್ದಾಣಗಳು ನಾಹಾನ್‌ನಿಂದ ಕೇವಲ 100 ಕಿ.ಮೀ ದೂರದಲ್ಲಿವೆ. ಈ ವಿಮಾನ ನಿಲ್ದಾಣಗಳು ಭಾರತದ ಪ್ರಮುಖ ವಿಮಾನ ನಿಲ್ದಾಣಗಳಾದ ನವ ದೆಹಲಿ, ಮುಂಬೈ, ಶಿಮ್ಲಾ, ಲೇಹ್‌ ಮತ್ತು ಅಮೃತಸರಕ್ಕೆ ಸಂಪರ್ಕವನ್ನು ಹೊಂದಿವೆ. ಬಸ್‌ಗಳು ಮತ್ತು ಟ್ಯಾಕ್ಸಿಗಳನ್ನು ವಿಮಾನ ನಿಲ್ದಾಣದ ಹೊರಗೆ ಬಾಡಿಗೆಗೆ ಪಡೆದು ನಹಾನ್‌ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
14 Dec,Sat
Return On
15 Dec,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Dec,Sat
Check Out
15 Dec,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Dec,Sat
Return On
15 Dec,Sun
 • Today
  Nahan
  28 OC
  83 OF
  UV Index: 8
  Sunny
 • Tomorrow
  Nahan
  23 OC
  74 OF
  UV Index: 8
  Sunny
 • Day After
  Nahan
  24 OC
  76 OF
  UV Index: 8
  Partly cloudy