ಚಾರಣವು ನಹಾನ್ನಲ್ಲಿ ಅತ್ಯಂತ ಜನಪ್ರಿಯ ಚಟುವಟಿಕೆ. ಭಾರತದಲ್ಲೇ ಅತ್ಯಂತ ಉತ್ತಮ ಚಾರಣದ ಅನುಭವವಾಗುವುದು ನಹಾನ್ನಲ್ಲಿಯೇ. ಪ್ರವಾಸಿಗರು ಚೂರಧಾರ ಪೀಕ್ನಲ್ಲಿ ಚಾರಣ ಮಾಡಬಹುದು. ಇದು ಸಮುದ್ರ ಮಟ್ಟದಿಂದ ಸುಮಾರು 3650 ಮೀ. ಎತ್ತರದಲ್ಲಿದೆ. ಆರಂಭದ ಕೇಂದ್ರವನ್ನು ಗಮನದಲ್ಲಿರಿಸಿಕೊಂಡರೆ ಚಾರಣದ ದೂರವು 15 ರಿಂದ 40 ಕಿ.ಮೀ ತನಕವೂ ಇರಬಹುದು. ಪರ್ವತಾರೋಹಣ ಮತ್ತು ಚಾರಣಕ್ಕೆ ಇದು ಸೂಕ್ತ ತಾಣ. ನಾಥುರಾ, ಗಂಧೂರಿ, ಭವಾಯ್ ಮತ್ತು ದಡಾಹುಗೆ ಇಲ್ಲಿಂದ ಚಾರಣ ಮಾಡಬಹುದು.
ಚಾರಣಿಗರಿಗೆ ಅತ್ಯಂತ ಖುಷಿಕೊಡುವ ತಾಣ ಜಮು ಪೀಕ್. ಸಣ್ಣ ದಾರಿಯಲ್ಲಿ ನಡೆದುಹೋಗುವುದು ಚಾರಣಿಗರಿಗೆ ಇಲ್ಲಿ ಅತ್ಯಂತ ಹರ್ಷದಾಯಕ. ಸಮುದ್ರ ಮಟ್ಟದಿಂದ ಸುಮಾರು 932 ಮೀ. ಎತ್ತರದಲ್ಲಿದೆ. ಸುತ್ತಲಿನ ಪ್ರದೇಶದ ಸುಂದರ ದೃಶ್ಯವನ್ನು ನೋಡಬಹುದು.