Search
 • Follow NativePlanet
Share
ಮುಖಪುಟ » ಸ್ಥಳಗಳು» ಪ್ರಾಗ್ಪೂರ್

ಪ್ರಾಗ್ಪೂರ್ - ಗ್ರಾಮ ಪ್ರವಾಸೋದ್ಯಮಕ್ಕೆ ಹೆಸರುವಾಸಿ

20

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಪ್ರಾಗ್ಪೂರ್ ಪಟ್ಟಣ ಅತ್ಯಂತ ಪ್ರಮುಖವಾದ ಪ್ರವಾಸಿ ತಾಣಗಳಲ್ಲೊಂದಾಗಿದ್ದು ಸಮುದ್ರ ಮಟ್ಟದಿಂದ ಸುಮಾರು 1800 ಅಡಿ ಎತ್ತರದಲ್ಲಿದೆ. ಹಿಮಾಚಲ ಪ್ರದೇಶ್ ಸರ್ಕಾರವು 1997ರಲ್ಲಿ ಈ ಪ್ರದೇಶವನ್ನು ಪಾರಂಪರಿಕ ಗ್ರಾಮವೆಂದು ಪ್ರಕಟಿಸಿತು. ನಂತರ 2002 ರಲ್ಲಿ ಗಾರ್ಲಿ-ಪ್ರಾಗ್ಪೂರ್ ಎರಡೂ ಪಟ್ಟಣಗಳನ್ನು ಪಾರಂಪರಿಕ ಪಟ್ಟಣವೆಂದು ಗುರುತಿಸಲಾಯಿತು. ಯಾಕೆಂದರೆ ಪ್ರಾಗ್ಪೂರದಲ್ಲಿ ಅನೇಕ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರಗಳು ಇವೆ.

ಇಡೀ ಗ್ರಾಮದ ಪ್ರಮುಖ ಆಕರ್ಷಣೆಯಾಗಿರುವ 'ತಾಲ್',ಇದು ಗ್ರಾಮದ ಹೃದಯ ಭಾಗದಲ್ಲಿದೆ, ಈ ಸರೋವರದ ಸುತ್ತಲೂ ಇಡಿ ಗ್ರಾಮ ಅಭಿವೃದ್ಧಿ ಪಡಿಸಲಾಗಿದೆ. ಸರೋವರದ ಎದುರಿನಲ್ಲಿಯೇ ಇರುವ ಇಲ್ಲಿನ ಪಾರಂಪರಿಕ ಕಟ್ಟಡಗಳಾದ ರಾಧಾ ಕೃಷ್ಣ ಮಂದಿರ, ನೆಹರು ಭವನ ಮತ್ತು ನೌವ್ನ ಗಳನ್ನು ನೋಡಬಹುದಾಗಿದೆ. ನೂರು ವರ್ಷಕ್ಕೂ ಹೆಚ್ಚು ಹಳೆಯದಾದ ಭೂತಾಲ್ ನಿವಾಸ್ ಅನೇಕ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಇಂಡೋ-ಯೂರೋಪಿಯನ್ ಮಾದರಿಯ ವಾಸ್ತುಶಿಲ್ಪ ಹೊಂದಿರುವ ಜಡ್ಜ್ ಕೋರ್ಟ್ ಪ್ರಾಗ್ಫೂರ್ ಪಟ್ಟಣದ ಮತ್ತೊಂದು ಆಕರ್ಷಣೆಯಾಗಿದೆ. ಧೂನಿಚಂದ್ ಭರ್ದಿಯಲ್ ಸಾರೈ ಕೂಡ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇದಲ್ಲದೆ ಬಜ್ರೇಶ್ವರಿ, ಜ್ವಾಲಾಮುಖಿ ಮತ್ತು ಚಿಂತಪೂರನಿ ಇಲ್ಲಿನ ಪ್ರಮುಖ ದೇವಸ್ಥಾನಗಳಾಗಿದ್ದು ಅನೇಕ ಪ್ರವಾಸಿಗ/ಭಕ್ತರನ್ನು ಆಕರ್ಷಿಸುತ್ತದೆ.

ಲೋಹಿರ್, ಈ ಗ್ರಾಮದ ಜನಪ್ರಿಯ ಹಬ್ಬವಾಗಿದೆ, ಈ ಹಬ್ಬದಲ್ಲಿ ದಕ್ಷಿಣ ಗೋಲಾರ್ಧದಿಂದ ಉತ್ತರ ಗೋಲಾರ್ಧದ ಕಡೆಗೆ ಚಲಿಸುವ ಸೂರ್ಯನನ್ನು ಆರಾಧಿಸಲಾಗುತ್ತದೆ. ಪ್ರತಿ ವರ್ಷ ಈ ಹಬ್ಬಕ್ಕೆ ಅಸಂಖ್ಯಾತ ಪ್ರವಾಸಿಗರು ಆಕರ್ಷಿಸುಲ್ಪಡುತ್ತಾರೆ. ಸೆಪ್ಟೆಂಬರ್ ತಿಂಗಳಲ್ಲಿ ಪ್ರಾಗ್ಫೂರ್ ಪಟ್ಟಣದಲ್ಲಿ ನಡೆಯುವ ಮತ್ತೊಂದು ಹಬ್ಬವಾಗಿರುವ ಕುಸ್ತಿ ಹಬ್ಬ ಕೂಡ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಪ್ರಾಗ್ಫೂರ್ ನಗರಕ್ಕೆ ವಿಮಾನ, ರಸ್ತೆ ಹಾಗೂ ರೈಲು ಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದು. ಪ್ರಾಗ್ಫೂರದಲ್ಲಿ ವಿಮಾನ ನಿಲ್ದಾಣ ಇಲ್ಲದಿದ್ದರೂ ಶಿಮ್ಲಾದ ವಿಮಾನ ನಿಲ್ದಾಣ ಹತ್ತಿರವಾಗಿದೆ. ಈ ಪಾರಂಪರಿಕ ಗ್ರಾಮದಿಂದ ಸುಮಾರು 203 ಕಿ.ಮೀ.ದೂರದಲ್ಲಿರುವ ಶಿಮ್ಲಾದಲ್ಲಿ ಜುಬ್ಬರ್ ಹಟ್ಟಿ ವಿಮಾನ ನಿಲ್ದಾಣವಿದೆ. ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ ಹಾಗೂ ಕೊಲ್ಕೊತ್ತ ವಿಮಾನ ನಿಲ್ದಾಣಗಳಿಗೆ ಇಲ್ಲಿಂದ ಸಂಪರ್ಕವಿದೆ. ಈ ವಿಮಾನ ನಿಲ್ದಾಣದಿಂದ ಪ್ರಾಗ್ಫೂರ್ ಗೆ ಬರಲು ಟ್ಯಾಕ್ಸಿ ಹಾಗೂ ಕ್ಯಾಬ್ ಗಳು ಲಭ್ಯವಿದೆ. ಪಾರಂಪರಿಕ ಗ್ರಾಮದಿಂದ ಸುಮಾರು 67 ಕಿ.ಮೀ. ದೂರದಲ್ಲಿರುವ ಉನಾ ರೈಲು ನಿಲ್ದಾಣ, ಪ್ರಾಗ್ಫೂರ್ ಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ಭಾರತದ ಪ್ರಮುಖ ರೈಲು ನಿಲ್ದಾಣಗಳಿಗೆ ಉನಾ ರೈಲು ನಿಲ್ದಾಣ ಸಂಪರ್ಕ ಹೊಂದಿದೆ. ರಸ್ತೆ ಮೂಲಕ ಪ್ರಯಾಣ ಮಾಡ ಬಯಸುವ ಪ್ರವಾಸಿಗರಿಗೆ ಚಂಡೀಘಡ ಹಾಗೂ ಪಠಾನಕೋಟದಿಂದ ಅನೇಕ ಬಸ್ಸುಗಳು ಲಭ್ಯವಿದೆ. ಇದಲ್ಲದೆ ಪ್ರಾಗ್ಫೂರ್ ನಿಂದ 190 ಕಿ.ಮೀ.ದೂರದಲ್ಲಿರುವ ಅಮೃತಸರದಿಂದ ಅನೇಕ ಬಸ್ ಗಳು ಸಂಚರಿಸುತ್ತವೆ.

ವರ್ಷವಿಡಿ ಪ್ರಾಗ್ಫೂರ್ ನಗರದಲ್ಲಿ ತಾಪಮಾನ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಬೇಸಿಗೆಯಲ್ಲಿ ಸಮೀಪದ ನಗರಗಳಿಗಿಂತಲೂ ಪ್ರಾಗ್ಫೂರ್ ನಲ್ಲಿ ಸ್ವಲ್ಪ ಶೆಕೆ ಹೆಚ್ಚಾಗಿಯೇ ಇರುತ್ತದೆ. ಬೇಸಿಗೆಯಲ್ಲಿ ತಾಪಮಾನ ಗರಿಷ್ಠ 32 ಡಿಗ್ರಿ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಮಳೆಗಾಲದಲ್ಲಿ ಪ್ರಾಗ್ಫೂರ್ ನಗರದಲ್ಲಿ ಹೆಚ್ಚು ಮಳೆ ಬೀಳುತ್ತದೆ. ಈ ಕಾಲದಲ್ಲಿ ಪ್ರಾಗ್ಫೂರ್ ನಗರಕ್ಕೆ ಭೇಟಿ ನೀಡಬಯಸುವ ಪ್ರವಾಸಿಗರು ತಕ್ಕ ಸಿದ್ದತೆ ಮಾಡಿಕೊಂಡು ಹೋದರೆ ಉತ್ತಮ. ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳವರೆಗೆ ಪ್ರಾಗ್ಫೂರ್ ನಲ್ಲಿ ಚಳಿಗಾಲವಿರುತ್ತದೆ. ಸಾಮಾನ್ಯವಾಗಿ ಈ ಕಾಲದಲ್ಲಿ ಕನಿಷ್ಠ 16 ಡಿಗ್ರಿ ಹಾಗೂ ಗರಿಷ್ಠ 25 ಡಿಗ್ರಿ ಸೆಲ್ಶಿಯಸ್ ತಾಪಮಾನ ಕಂಡು ಬರುತ್ತದೆ. ಇಲ್ಲಿ ಭೇಟಿ ನೀಡಲು ಸೂಕ್ತ ಕಾಲವೆಂದರೆ ಬೇಸಿಗೆ ಹಾಗೂ ಮಳೆಗಾಲ. ಈ ಕಾಲದಲ್ಲಿ ತಾಪಮಾನ ಹಿತವಾಗಿರುತ್ತದೆ.

ಪ್ರಾಗ್ಪೂರ್ ಪ್ರಸಿದ್ಧವಾಗಿದೆ

ಪ್ರಾಗ್ಪೂರ್ ಹವಾಮಾನ

ಪ್ರಾಗ್ಪೂರ್
14oC / 57oF
 • Sunny
 • Wind: NE 9 km/h

ಉತ್ತಮ ಸಮಯ ಪ್ರಾಗ್ಪೂರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪ್ರಾಗ್ಪೂರ್

 • ರಸ್ತೆಯ ಮೂಲಕ
  ಚಂಡೀಘಡ ಹಾಗೂ ಪಠಾನಕೋಟದಿಂದ ಪ್ರಾಗ್ಫೂರ್ ಗೆ ಉತ್ತಮ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಸುಮಾರು 190 ಕಿ.ಮೀ. ದೂರದಲ್ಲಿರುವ ಅಮೃತಸರದಿಂದಲೂ ಖಾಸಗಿ ಹಾಗೂ ರಾಜ್ಯ ಸರ್ಕಾರದ ಬಸ್ ಗಳು ಸಂಚರಿಸುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪ್ರಾಗ್ಫೂರ್ ನಿಂದ ಸುಮಾರು 67 ಕಿ.ಮೀ.ದೂರದಲ್ಲಿರುವ ಉನಾ ನಗರದಲ್ಲಿರುವ ರೈಲು ನಿಲ್ದಾಣ ಸಮೀಪದ ರೈಲು ನಿಲ್ದಾಣವಾಗಿದೆ. ಭಾರತದ ಪ್ರಮುಖ ನಗರಗಳಿಗೆ ಇಲ್ಲಿಂದ ಸಂಪರ್ಕ ಕಲ್ಪಿಸಲಾಗಿದೆ. ಪ್ರಯಾಣಿಕರು ಇಲ್ಲಿಂದ ಟ್ಯಾಕ್ಸಿ ಹಾಗೂ ಕ್ಯಾಬ್ ಗಳ ಮುಖಾಂತರ ಪ್ರಾಗ್ಫೂರ್ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಶಿಮ್ಲಾದ ಜಬ್ಬರ್ ಹಟ್ಟಿ ವಿಮಾನ ನಿಲ್ದಾಣ ಪ್ರಾಗ್ಫೂರ್ ಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ಸುಮಾರು 203 ಕಿ.ಮೀ.ದೂರದಲ್ಲಿದೆ. ಇಲ್ಲಿಂದ ದೆಹಲಿ, ಮುಂಬೈ ಹಾಗೂ ಕೊಲ್ಕೊತ್ತಾ ನಗರಗಳಿಗೆ ವಿಮಾನ ಸಂಪರ್ಕ ಇದೆ. ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ದೆಹಲಿಯಿಂದ ಶಿಮ್ಲಾಗೆ ವಿಮಾನ ಸಂಪರ್ಕ ಕಲ್ಪಿಸಲಾಗಿದೆ. ಈ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ-ಕ್ಯಾಬ್ಸ್ ಗಳ ಮೂಲಕ ಪ್ರಾಗ್ಫೂರ್ ನಗರ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Oct,Sun
Return On
21 Oct,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Oct,Sun
Check Out
21 Oct,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Oct,Sun
Return On
21 Oct,Mon
 • Today
  Pragpur
  14 OC
  57 OF
  UV Index: 5
  Sunny
 • Tomorrow
  Pragpur
  8 OC
  47 OF
  UV Index: 5
  Partly cloudy
 • Day After
  Pragpur
  10 OC
  49 OF
  UV Index: 5
  Partly cloudy