Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರಾಗ್ಪೂರ್ » ಆಕರ್ಷಣೆಗಳು » ಮಹಾ ರಾಣಾ ಪ್ರತಾಪ್ ಸಾಗರ್ ಡ್ಯಾಮ್

ಮಹಾ ರಾಣಾ ಪ್ರತಾಪ್ ಸಾಗರ್ ಡ್ಯಾಮ್, ಪ್ರಾಗ್ಪೂರ್

2

ಬಿಯಸ್ ನದಿಗೆ ಪ್ರಾಗ್ಫೂರ್ ನಲ್ಲಿ ನಿರ್ಮಿಸಿರುವ ಮಹಾ ರಾಣಾ ಪ್ರತಾಪ್ ಸಾಗರ್ ಆಣೆಕಟ್ಟು ಇಲ್ಲಿನ ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿದೆ. ಇದು 450 ಮೀಟರ್ ಎತ್ತರವಿದ್ದು, ಆಣೆಕಟ್ಟೆ ಸುಮಾರು 45000 ಹೆಕ್ಟೇರ್ ವ್ಯವಸಾಯ ಭೂಮಿಗೆ ನೀರುಣಿಸುತ್ತದೆ. ಅತಿ ಹೆಚ್ಚು ಹೆಕ್ಟೇರ್ ವ್ಯವಸಾಯ ಭೂಮಿಯನ್ನು ಹೊಂದಿರುವ ಭಾರತದ 25 ದೊಡ್ಡ ಆಣೆಕಟ್ಟುಗಳಲ್ಲಿ ಇದೂ ಒಂದಾಗಿದೆ. ಭಾರತದ ಜನಪ್ರಿಯ ಯುದ್ದ ವೀರನಾದ ರಾಣಾ ಪ್ರತಾಪ ಸಿಂಹನ ಹೆಸರನ್ನೇ ಈ ಆಣೆಕಟ್ಟಿಗೆ ನಾಮಕರಣ ಮಾಡಲಾಗಿದೆ. ಇದನ್ನು ಪೋಂಗ್ ಡ್ಯಾಮ್ ಅಥವಾ ಪೋಂಗ್ ಜಲಾಶಯ ಎಂಬುದಾಗಿಯೂ ಕರೆಯುತ್ತಾರೆ. ಇದು 1975 ರಲ್ಲಿ ಸ್ಥಾಪನೆಗೊಂಡು ನಂತರ ಈ ಪ್ರದೇಶಕ್ಕೆ ಅನೇಕ ವಿಧವಾದ ಪಕ್ಷಿಗಳು ವಲಸೆ ಬರಲು ಆರಂಭಿಸಿದ್ದರಿಂದ ಇದನ್ನು ವನ್ಯ ಜೀವಿ ಸಂರಕ್ಷಣಾ ಕೇಂದ್ರವನ್ನಾಗಿ ಪರಿವರ್ತಿಸಲಾಯಿತು.

ಸೈಬೀರಿಯಾ ಹಾಗೂ ಏಶಿಯಾದ ಕೇಂದ್ರ ಭಾಗದಿಂದ ಇಲ್ಲಿಗೆ ಸುಮಾರು 220 ವಿವಿಧ ಜಾತಿಯ ಪಕ್ಷಿಗಳು ಬರುತ್ತವೆ. ಅವುಗಳಲ್ಲಿ ಸುರ್ಕಾಬ್, ಕ್ರೇನಿಸ್ ಹಾಗೂ ಪಿಂಟೇಲ್ಸ್ ಜಾತಿಗೆ ಸೇರಿದ ಪಕ್ಷಿಗಳು ಅತ್ಯಂತ ಜನಪ್ರಿಯವಾದವುಗಳು.ವನ್ಯಪ್ರಾಣಿಗಳಾದ ಸಾಂಬಾರ್, ಬಾರ್ಕಿಂಗ್ ಡೀರ್, ಕಾಡುಹಂದಿ ಹಾಗೂ ಚಿರತೆಗಳನ್ನು ಇಲ್ಲಿ ಅಧಿಕವಾಗಿ ಕಾಣಬಹುದು. ಈ ರಾಜ್ಯದ ಮೀನುಗಾರಿಕೆಗೆ ಪೋಂಗ್ ಜಲಾಶಯವು ಪ್ರಮುಖವಾದದ್ದಾಗಿದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu