Search
  • Follow NativePlanet
Share
ಮುಖಪುಟ » ಸ್ಥಳಗಳು» ಸಲೋಗ್ರಾ

ಸಲೋಗ್ರಾ - ಚಾರಣಿಗರ ಸ್ವರ್ಗ!

4

ಭಾರತದಲ್ಲಿ ವರ್ಷವಿಡಿ ಪ್ರಯಾಣ ಮಾಡಬಹುದಾದಂತಹ, ಮನಸ್ಸಿಗೆ ಸಂತೋಷವನ್ನುಂಟು ಮಾಡುವಂತಹ ಸ್ಥಳಗಳು ಹತ್ತು ಹಲವಾರಿವೆ. ಒಮ್ಮೆ ಭೇಟಿ ನೀಡಿದರೆ ಮತ್ತೆ ಮತ್ತೆ ಪ್ರಯಾಣ ಮಾಡಬೇಕೆನ್ನುವಂತಹ ಅಭಿಲಾಷೆಯನ್ನು ಹುಟ್ಟು ಹಾಕುವಂತಹ ಸ್ಥಳಗಳಿಗೂ ಇಲ್ಲಿ ಕೊರತೆಯಿಲ್ಲ! ಅದರಲ್ಲೂ ಹಿಮಾಚ್ಛಾದಿದ ಹಿಮಾಚಲ ಪ್ರದೇಶವನ್ನಂತೂ ನೋಡದೇ ಇರಲು ಸಾಧ್ಯವೇ ಇಲ್ಲ.

ಹಿಮಾಚಲ ಪ್ರದೇಶದ ಪ್ರತಿಯೊಂದು ಮೂಲೆ ಮೂಲೆಯ ಪ್ರದೇಶಗಳೂ ಒಂದೊಂದು ಆಕರ್ಷಣೆಗಳನ್ನು ಹೊಂದಿವೆ. ಅವುಗಳಲ್ಲಿ ಸಲೋಗ್ರಾ ಪ್ರವಾಸಿ ತಾಣವೂ ಕೂಡಾ ಒಂದು. ಇಲ್ಲಿ ಚಾರಣ ಮಾಡುವುದಕ್ಕೆಂದೇ ಬರುವ ಪ್ರವಾಸಿಗರ ಸಂಖ್ಯೆ ಅಪಾರ. ಅದರಲ್ಲೂ ಶಿಮ್ಲಾ ಅತ್ಯಂತ ಹತ್ತಿರದಲ್ಲಿಯೇ ಇರುವುದರಿಂದ ಇಲ್ಲಿಗೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇಂತಹ ಸುಂದರವಾದ ಸ್ಥಳದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಸಲೋಗ್ರಾ, ಹಿಮಾಚಲ ಪ್ರದೇಶ ರಾಜ್ಯದ ಶಿಮ್ಲಾ ಜಿಲ್ಲೆಯ ಸೋಲನ್ ನಿಂದ 5.3 ಕಿ. ಮೀ ದೂರದಲ್ಲಿ ನೆಲೆಗೊಂಡಿರುವ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ಅನೇಕ ಚಿತ್ರಸದೃಶ ಹಳ್ಳಿಗಳಿದ್ದು, ಅವುಗಳೆಂದರೆ, ಟಾಪ್ ಕಿ-ಬೆರ್ಹ್, ಮಾಹಿ, ಬಾಸಲ್ ಮತ್ತು ಮಶಿವಾರ್ ಮೊದಲಾದವು ಈ ಸ್ಥಳಕ್ಕೆ ಹತ್ತಿರದ ಸುತ್ತಮುತ್ತಲ ಪ್ರದೇಶದಲ್ಲಿ ನೆಲೆಗೊಂಡಿವೆ. ಈ ತಾಣಕ್ಕೆ ಇತರ ನಿಕಟವರ್ತಿಯಾದ ಪಟ್ಟಣಗಳೆಂದರೆ ಕಂದಘಾಟ್, ಸೋಲನ್, ಧರಂಪುರ್ ಮತ್ತು ಕುಣಿಹಾರ್ ಮೊದಲಾದವುಗಳು.

ಕ್ರೋಲ್ ಕಾ ಟಿಬ್ಬಾ, ಸೌಮ್ಯ ಚಿತ್ರದೃಶ್ಯ ಪ್ರದೇಶಗಳು ಮತ್ತು ಶ್ರೀಮಂತವಾದ ಒಂದು ಸುಂದರವಾದ ಪರ್ವತ. ಇದು ಸಲೋಗ್ರಾ ಪ್ರದೇಶದಲ್ಲಿರುವ ಗಮನಾರ್ಹ ಪ್ರವಾಸಿ ತಾಣವಾಗಿದೆ. ಸಮೃದ್ಧ ಹಸಿರು ಪೈನ್ ಮತ್ತು ದೇವದಾರು ಕಾಡುಗಳಿಂದ ಆವೃತವಾಗಿರುವ, ಸಲೋಗ್ರ, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರಾಚೀನ ನೈಸರ್ಗಿಕ ಸೌಂದರ್ಯವನ್ನು ಅನುಭವಿಸುವ ಅವಕಾಶ ನೀಡುತ್ತದೆ. ಸಲೋಗ್ರಾದಲ್ಲಿನ ಹಿಮಭರಿತ ತಪ್ಪಲಿನಲ್ಲಿನ ಚಾರಣ ಇಲ್ಲಿನ ಇನ್ನೊಂದು ಆಕರ್ಷಣೆಯಾಗಿದೆ. ಹಿಂದೂ ದೇವರು, ದುಷ್ಟ ವಿನಾಶಕ ಶಿವನಿಗೆ ಸಮರ್ಪಿಸಲಾದ ಪ್ರಸಿದ್ಧ ದೇವಸ್ಥಾನ, 1 ಕಿ. ಮೀ ದೂರದಲ್ಲಿರುವ ಬಾರೋಗ್ ನಲ್ಲಿರುವ ಈ ದೇವಾಲಯವು ಹಲವಾರು ಪ್ರವಾಸಿಗರನ್ನು ಆಕರ್ಷಿಸುವ ಇನ್ನೊಂದು ಪ್ರಮುಖ ಸ್ಥಳ.

ಸಲೋಗ್ರಾಕ್ಕೆ ಭೇಟಿ ನೀಡುವ ಪ್ರಯಾಣಿಕರು ಇಲ್ಲಿಂದ ಕೇವಲ 41 ಕಿ. ಮೀ ದೂರದಲ್ಲಿರುವ ಶಿಮ್ಲಾಗೂ ಕೂಡ ಪ್ರವಾಸ ಹೋಗಲು ಯೋಜಿಸಬಹುದು. ಈ ಸ್ಥಳವು ಕಲ್ಕಾ ರೈಲು ನಿಲ್ದಾಣಕ್ಕೆ ಅತ್ಯಂತ ಉತ್ತಮ ಸಂಪರ್ಕವನ್ನು ಹೊಂದಿದ್ದು, ಇಲ್ಲಿಂದ ಹಿಮಾಚಲ ಪ್ರದೇಶದ ಇತರೆ ಪ್ರವಾಸಿ ಸ್ಥಳಗಳಿಗೆ ಸ್ಥಳಗಳಿಗೆ ಉತ್ತಮ ಸಂಪರ್ಕ ಹೊಂದಿದೆ.

ಸಲೋಗ್ರಾ ಪ್ರದೇಶವನ್ನು ಪ್ರಮುಖ ಸಾರಿಗೆ ಸಂಪರ್ಕಗಳಾದ ರಸ್ತೆ, ವಿಮಾನ ಮತ್ತು ರೈಲ್ವೆ ಮಾರ್ಗಗಳ ಮೂಲಕ ತಲುಪಬಹುದು. ಈ ತಾಣಗಳಿಗೆ ಭೇಟಿ ನೀಡಲು ಏಪ್ರಿಲ್ ತಿಂಗಳಿನಿಂದ ಜೂನ್ ತಿಂಗಳುಗಳ ಅವಧಿಯಲ್ಲಿ ಯೋಜಿಸುವುದು ಉತ್ತಮ. ಆದಾಗ್ಯೂ, ಪ್ರವಾಸಿಗರು ಚಳಿಗಾಲದ ಸಮಯದಲ್ಲಿ ಇಲ್ಲಿ ಭಾರಿ ಹಿಮಪಾತವಿದ್ದರೂ ಚಾರಣ ಮಾಡಲು ಬಯಸಿದ್ದಲ್ಲಿ ಮುಂಜಾಗುರುಕತೆಯನ್ನು ವಹಿಸಿಕೊಂಡು ಭೇಟಿ ನೀಡಬಹುದು.

ಸಲೋಗ್ರಾ ಪ್ರಸಿದ್ಧವಾಗಿದೆ

ಸಲೋಗ್ರಾ ಹವಾಮಾನ

ಉತ್ತಮ ಸಮಯ ಸಲೋಗ್ರಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಲೋಗ್ರಾ

  • ರಸ್ತೆಯ ಮೂಲಕ
    ಸಲೋಗ್ರಾವನ್ನು ಅನ್ವೇಷಿಸಲು ಆಸಕ್ತಿಯುಳ್ಳ ಪ್ರಯಾಣಿಕರು ಬಸ್ಸುಗಳ ಮೂಲಕ ಈ ತಾಣಕ್ಕೆ ಭೇಟಿ ನೀಡಬಹುದು. ರಾಷ್ಟ್ರೀಯ ಹೆದ್ದಾರಿ 22 ರಲ್ಲಿರುವ ಸಲೋಗ್ರಾವನ್ನು ತಲುಪಲು ಖಾಸಗಿ ಬಸ್ಸುಗಳು ಮತ್ತು ಸರ್ಕಾರದ ಸ್ವಾಮ್ಯದ ಬಸ್ಸುಗಳು ದೆಹಲಿ ಮತ್ತು ಚಂಡೀಘಡ ಪ್ರದೇಶದಿಂದ ಲಭ್ಯವಿದೆ. ಚಂಡೀಘಡ ದಿಂದ ಸಲೋಗ್ರಾಕ್ಕೆ ಸುಮಾರು 200 ರೂಪಾಯಿ ಶುಲ್ಕವನ್ನು ಭರಿಸಬೇಕು. ಆದರೆ ಸರ್ಕಾರಿ ಸ್ವಾಮ್ಯದ ಬಸ್ಸುಗಳು ಅಗ್ಗದ ದರವನ್ನು ಹೊಂದಿದವುಗಳಾಗಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಲ್ಕಾ ಮತ್ತು ಶಿಮ್ಲಾ ರೈಲು ನಿಲ್ದಾಣಗಳು ಸಲೋಗ್ರಾಕ್ಕೆ ಹತ್ತಿರದ ಮುಖ್ಯ ರೈಲು ಮಾರ್ಗವಾಗಿದೆ. ಪ್ರಯಾಣಿಕರು, ಕಲ್ಕಾ ಮತ್ತು ಶಿಮ್ಲಾದಿಂದ, ಮುಖ್ಯ ಮೂರು ರೈಲುಗಳಾದ ಹಿಮಾಲಯನ್ ಕ್ವೀನ್ ಎಕ್ಸ್ಪ್ರೆಸ್, ಕಲ್ಕಾ ಶಿಮ್ಲಾ ಪಾಸ್ ಮತ್ತು ಕಲ್ಕಾ ಶಿಮ್ಲಾ ಎಕ್ಸ್ಪ್ರೆಸ್ ಮೂಲಕ ಈ ಗಮ್ಯಸ್ಥಾನವನ್ನು ತಲುಪಲು ಸಾಧ್ಯ. ಸಲೋಗ್ರಾವನ್ನು ತಲುಪಲು ಎರಡನೇ ದರ್ಜೆಯ ಸೀಟುಗಳಿಗೆ ಸುಮಾರು ರೂಪಾಯಿ 36 ಹಾಗೂ ಮೊದಲ ದರ್ಜೆಯ ಸೀಟುಗಳಿಗೆ 228 ರೂಪಾಯಿಗಳನ್ನು ಭರಿಸಿ ಪ್ರಯಾಣ ಮಾಡಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸಲೋಗ್ರಾ ಪ್ರದೇಶಕ್ಕೆ ಸಮೀಪ ದೂರದಲ್ಲಿರುವ ವಿಮಾನ ನಿಲ್ದಾಣವೆಂದರೆ ಚಂಡೀಘಢ ವಾಯುನೆಲೆಯಾಗಿದೆ. ಈ ವಿಮಾನ ನಿಲ್ದಾಣವು ಇದಲ್ಲದೆ ದೆಹಲಿ, ಮುಂಬೈ, ಜೈಪುರ ಮತ್ತು ಶ್ರೀನಗರದಂತಹ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮತ್ತು ಕ್ಯಾಬ್ ಸೇವೆಗಳು ರೂಪಾಯಿ 1000 ಬೆಲೆಗೆ ಲಭ್ಯವಿದ್ದು ಈ ಮೂಲಕ ಸುಲಭವಾಗಿ ಸಲೋಗ್ರಾವನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu