Search
  • Follow NativePlanet
Share
ಮುಖಪುಟ » ಸ್ಥಳಗಳು » ಸಲೋಗ್ರಾ » ಹವಾಮಾನ

ಸಲೋಗ್ರಾ ಹವಾಮಾನ

ಸಲೋಗ್ರಾವನ್ನು ಅನ್ವೇಷಿಸಲು, ಸುತ್ತಾಡಲು ಆಸಕ್ತಿ ಹೊಂದಿರುವ ಪ್ರವಾಸಿಗರು ಏಪ್ರಿಲ್ ತಿಂಗಳಿನಿಂದ ಜೂನ್ ತಿಂಗಳುಗಳ ನಡುವೆ ಈ ಸ್ಥಳಕ್ಕೆ ಭೇಟಿ ನೀಡುವುದು ಒಳಿತು. ಆದಾಗ್ಯೂ ಪ್ರವಾಸಿಗರು ಚಳಿಗಾಲದಲ್ಲಿ ಸಲೋಗ್ರದಲ್ಲಿ ಚಾರಣಕ್ಕೆ ಹವಾಮಾನವು ಅನುಕೂಲಕರವಾಗಿದ್ದು ಈ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಬಹುದು.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ) ಸಲೋಗ್ರಾ ಪ್ರದೇಶದಲ್ಲಿ ಬೇಸಿಗೆ ಕಾಲವು ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗುತ್ತದೆ ಮತ್ತು ಜೂನ್ ತಿಂಗಳ ತನಕ ಮುಂದುವರಿಯುತ್ತದೆ. ಬೇಸಿಗೆ ಸಮಯದಲ್ಲಿ  ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ಕ್ರಮವಾಗಿ 35 ಡಿ. ಸೆ 15 ಡಿ. ಸೆ ನಷ್ಟು ದಾಖಲಾಗುತ್ತದೆ. ಮೇ ತಿಂಗಳನ್ನು ಇಲ್ಲಿನ ವರ್ಷದ ಅತ್ಯಂತ ಉಷ್ಣಾಂಶ ಹೊಂದಿರುವ ಅವಧಿ ಎಂದು ಪರಿಗಣಿಸಲಾಗಿದೆ. ಸೂರ್ಯಾಸ್ತದ ನಂತರ ಇಲ್ಲಿ ರಾತ್ರಿ ಉಷ್ಣಾಂಶ ಕಡಿಮೆ ಇದ್ದು, ವಾತಾವರಣ ತುಲನಾತ್ಮಕವಾಗಿ ತಣ್ಣಗಿರುತ್ತದೆ.

ಮಳೆಗಾಲ

(ಜೂನ್ ನಿಂದ ಸಪ್ಟೆಂಬರ್) : ಮಳೆಗಾಲ ಜೂನ್ ತಿಂಗಳಿನಲ್ಲಿ ಪ್ರಾರಂಭವಾಗಿ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುತ್ತದೆ. ಸಲೋಗ್ರಾದಲ್ಲಿ ನೈಋತ್ಯ ಮಾನ್ಸೂನ್ ನಿಂದಾಗಿ ಇಲ್ಲಿ ಗರಿಷ್ಠ ಮಳೆ ಬೀಳುತ್ತದೆ. ಪ್ರವಾಸಿಗರು ಈ ಋತುವಿನಲ್ಲಿ ಇಲ್ಲಿನ ಹಸಿರು ಸೌಂದರ್ಯ ಆನಂದಿಸಲು ಈ ಸ್ಥಳಕ್ಕೆ ಭೇಟಿ ಮಾಡಬಹುದು.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ) : ಇಲ್ಲಿ ಚಳಿಗಾಲವು ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಿ ಫೆಬ್ರವರಿ ತಿಂಗಳ ತನಕ ಮುಂದುವರೆಯುತ್ತದೆ. ಚಳಿಗಾಲದಲ್ಲಿ ಈ ಪ್ರದೇಶದಲ್ಲಿ ದಾಖಲಾಗುವ ಗರಿಷ್ಠ ತಾಪಮಾನವು 15 ಡಿ.ಸೆ ಹಾಗು ಕನಿಷ್ಠ  -2 ಡಿ. ಸೆ. ಚಳಿಗಾಲದ ಸಮಯದಲ್ಲಿ ಭಾರೀ ಹಿಮಪಾತವು ಉಂಟಾಗುತ್ತಿದ್ದು, ಈ ಸಂದರ್ಭದಲ್ಲಿ ಹವಾಮಾನವು ಚಾರಣಕ್ಕೆ ಅನುಕೂಲಕರವಾಗಿರುತ್ತದೆ.