ಕುಫ್ರಿ : ಕ್ರೀಡಾ ವಿಹಾರಕ್ಕೆ ಸೂಕ್ತ ತಾಣ

ಸಾಹಸ ಕ್ರೀಡೆಗಳಲ್ಲಿ ಪಾಲ್ಗೋಳ್ಳುವುದು ಎಂದರೆ ಹಲವರಿಗೆ ಇಷ್ಟ. ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಎಲ್ಲರೂ ಕ್ರೀಡೆಗಳನ್ನು ಆಡಲು ಹಪಹಪಿಸುತ್ತಾರೆ. ಇಂತಹ ಉತ್ಸಾಹಿಗಳಿಗೆ ಸುಲಭವಾಗಿ ಹಾಗೂ ಅದ್ಭುತ ಅನುಭವವನ್ನು ನೀಡುವಂತಹ ಕ್ರೀಡಾ ವಿಹಾರವನ್ನು ಹೊಂದಿರುವ ಸ್ಥಳವೆಂದರೆ ಹಿಮಾಚಲ ಪ್ರದೇಶದ ಕುಫ್ರಿ.

ಕುಫ್ರಿ ಪಟ್ಟಣ ಅತ್ಯಂತ ಸಣ್ಣ ಪಟ್ಟಣವಾಗಿದ್ದರೂ ಇಲ್ಲಿನ ನೋಟಗಳು ಮಾತ್ರ ಅಗಣ್ಯ! ಪ್ರತಿ ವರ್ಷ ಇಲ್ಲಿ ಆಯೋಜಿಸಲಾಗುವ ವಿವಿಧ ಕ್ರೀಡೆಗಳು ಹಾಗೂ ಚಾರಣ ಸ್ಥಳಗಳು ಪ್ರವಾಸಿಗರನ್ನು ಅಚ್ಚರಿಗೊಳಿಸುವುದರಲ್ಲಿ ಸಂಶಯವಿಲ್ಲ. 2743 ಮೀಟರ್ ಎತ್ತರದಲ್ಲಿರುವ ಕುಫ್ರಿ, ಶಿಮ್ಲಾದಿಂದ 13 ಕೀ. ಮಿ ದೂರದಲ್ಲಿರುವ ಒಂದು ಸಣ್ಣ ಪಟ್ಟಣ. ಈ ಸ್ಥಳವನ್ನು ಸ್ಥಳೀಯ ಭಾಷೆಯಲ್ಲಿ ’ಕುಫ್ರ್’ ಪದದ ಅರ್ಥ 'ಸರೋವರ', ಇದರಿಂದ ಕುಫ್ರಿ ಎಂಬ ಹೆಸರನ್ನು ಪಡೆದುಕೊಂಡಿದೆ. ಈ ಪ್ರದೇಶಕ್ಕೆ ಹೊಂದಿಕೊಂಡಿರುವ ಅನೇಕ ಆಕರ್ಷಣೆಗಳು ವರ್ಷವಿಡಿ ಈ ಸ್ಥಳಕ್ಕೆ ಬರುವ ಪ್ರವಾಸಿಗರಿಗೆ ಸಾಕ್ಷಿ ಒದಗಿಸುತ್ತದೆ.

ಮಹಾಶು ಶಿಖರ, ಗ್ರೇಟ್ ಹಿಮಾಲಯನ್ ನೇಚರ್ ಪಾರ್ಕ್ (ಹಿಮಾಲಯದ ಪ್ರಕೃತಿ ಉದ್ಯಾನ) ಮತ್ತು ಫಾಗು ಕುಫ್ರಿ ಪಟ್ಟಣದಲ್ಲಿ ಕಂಡುಬರುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕೆಲವು. ಗ್ರೇಟ್ ಹಿಮಾಲಯನ್ ನೇಚರ್ ಪಾರ್ಕ್ 180 ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು ಮತ್ತು ಪ್ರಾಣಿಗಳ ನೆಲೆಯಾಗಿದೆ. ಕುಫ್ರಿಯಿಂದ 6 ಕಿ. ಮೀ ದೂರದಲ್ಲಿರುವ ಫಾಗು, ಶಾಂತಿ ಪ್ರೀಯರ ನಡುವೆ ಒಂದು ಜನಪ್ರಿಯ ತಾಣವೆನಿಸಿದೆ. ಚಿತ್ತಾಕರ್ಷಕವಾದ ಪರ್ವತಗಳಿಂದ ಆವೃತವಾಗಿರುವ ಈ ಪ್ರವಾಸಿ ತಾಣ, ಜನಪ್ರಿಯ ಧಾರ್ಮಿಕ ಸ್ಥಳವೂ ಕೂಡಾ ಹೌದು. ಮರದ ಕೆತ್ತನೆಗಳಿಗೆ ಮೆಚ್ಚುಗೆ ಗಳಿಸಿದ ಕೆಲವು ದೇವಸ್ಥಾನಗಳು ಕೂಡಾ ಹತ್ತಿರದಲ್ಲಿಯೇ ಇವೆ. ಈ ಸ್ಥಳವು ಪಾದಯಾತ್ರೆ, ಕ್ಯಾಂಪಿಂಗ್ ಮತ್ತು ಚಾರಣ ಮಾಡುವಿಕೆ ಮುಂತಾದ ವಿವಿಧ ಸಾಹಸ ಚಟುವಟಿಕೆಗಳಿಗೂ ಸಹ ಪ್ರಸಿದ್ಧವಾಗಿದೆ.

ಸಾಹಸ ಉತ್ಸಾಹಿಗಳು, ಕುಫ್ರಿ ಪಟ್ಟಣದಲ್ಲಿ ತಂಗಿದ್ದಾಗ ಸ್ಕೀಯಿಂಗ್ (ಜಾರುವುದು), ಕುದುರೆ ಸವಾರಿ, ಜಾರುವಾಟ ಆಡುವುದು ಮತ್ತು ಗೋ-ಕಾರ್ಟಿಂಗ್ (ಕಾರ್ ರೇಸ್)ನಂತಹ ಮುಂತಾದ ವಿವಿಧ ಕ್ರೀಡೆಗಳನ್ನು ಆನಂದಿಸಬಹುದು. ಇವುಗಳ ಹೊರತಾಗಿ ಅನೇಕ ಇತರೆ ಸಾಹಸಮಯ ಚಟುವಟಿಕೆಗಳು ಇಲ್ಲಿದ್ದು ಪ್ರವಾಸಿಗರು ಕುದುರೆಗಳನ್ನು ಕೂಡ ಪ್ರಯಾಣಕ್ಕಾಗಿ ಬಳಸಬಹುದಾಗಿದೆ.

ಕುಫ್ರಿಯಿಂದ ಹತ್ತಿರದ ವಾಯುನೆಲೆ ಎಂದರೆ  22 ಕೀ. ಮಿ ದೂರದಲ್ಲಿರುವ ಶಿಮ್ಲಾದ ಜುಬ್ಬರ್ಹತ್ತಿ ವಿಮಾನ ನಿಲ್ದಾಣ. ನಿಯಮಿತವಾದ ವಿಮಾನಗಳ ಮೂಲಕ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಕುಫ್ರಿಯು ನ್ಯಾರೋ ಗೇಜ್ ರೈಲು ಮಾರ್ಗದ ಮೂಲಕ ಶಿಮ್ಲಾಗೆ ಸಂಪರ್ಕ ಹೊಂದಿದ್ದರೆ, ಕುಫ್ರಿಯಿಂದ 100 ಕಿ. ಮೀ ದೂರದಲ್ಲಿರುವ ಕಲ್ಕಾ, ಶಿಮ್ಲಾದೊಂದಿಗೆ ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕಿಸುತ್ತದೆ. ರಸ್ತೆಯ ಮೂಲಕ ಪ್ರಯಾಣ ಬಯಸುವ ಪ್ರವಾಸಿಗರು ಶಿಮ್ಲಾ, ನರ್ತಂಡಾ ಮತ್ತು ರನ್ ಪುರ್ ಗಳಿಂದ ನೇರ ಬಸ್ ಸೌಲಭ್ಯಗಳನ್ನು ಪಡೆಯಬಹುದು. ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ಡೀಲಕ್ಸ್ ಬಸ್ ಎರಡೂ ಸಾರಿಗೆಗಳೂ ಶಿಮ್ಲಾದಿಂದ ಕುಫ್ರಿ ಪಟ್ಟಣಕ್ಕೆ ತಲುಪಲು ಸುಲಭವಾಗಿ ಲಭ್ಯವಿವೆ.

ಕುಫ್ರಿಯು ಬೇಸಿಗೆ ಸಮಯದಲ್ಲಿ ಸಮಶೀತೋಷ್ಣ ಹವಾಮಾನವನ್ನು ಹೊಂದಿರುತ್ತದೆ. ಬೇಸಿಗೆಯು ಏಪ್ರಿಲ್ ತಿಂಗಳಿನಿಂದ ಪ್ರಾರಂಭವಾಗಿ ಜೂನ್ ತಿಂಗಳಿನವರೆಗೆ ವ್ಯಾಪಿಸಲ್ಪಟ್ಟಿರುತ್ತದೆ. ಈ ಸ್ಥಳದ ತಾಪಮಾನವು ಬೇಸಿಗೆ ಋತುವಿನಲ್ಲಿ 12  ಡಿ. ಸೆ ಮತ್ತು 19 ಡಿ. ಸೆ ನಡುವೆ ದಾಖಲಾಗುತ್ತದೆ. ಕುಫ್ರಿಯು ಮಳೆಗಾಲದ ಅವಧಿಯಲ್ಲಿ ಕಡಿಮೆ ಮಳೆ ಪಡೆಯುತ್ತದೆ ಮತ್ತು ತಾಪಮಾನ 10 ಡಿ. ಸೆ ನಷ್ಟು ಕಡಿಮೆಯಾಗುತ್ತದೆ. ಚಳಿಗಾಲವು ತೀರಾ ತಂಪಾಗಿದ್ದು ಮತ್ತು ತಾಪಮಾನ ಘನೀಕರಣ ಬಿಂದುವಿಗಿಂತ ಕಡಿಮೆ ಮಟ್ಟ ಮುಟ್ಟುತ್ತದೆ. ಮಾರ್ಚ್ ಮತ್ತು ನವೆಂಬರ್ ತಿಂಗಳ ಅವಧಿಯನ್ನು ಈ ಸ್ಥಳದ ಸಂದರ್ಶನಕ್ಕೆ ಸೂಕ್ತ ಸಮಯ ಎಂದು ಪರಿಗಣಿಸಲಾಗಿದೆ.

Please Wait while comments are loading...