Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಫ್ರಿ » ಹವಾಮಾನ

ಕುಫ್ರಿ ಹವಾಮಾನ

ಮಾರ್ಚ್ ಮತ್ತು ನವೆಂಬರ್ ತಿಂಗಳುಗಳ ನಡುವಿನ ಅವಧಿಯು ಕುಫ್ರಿ ಪಟ್ಟಣಕ್ಕೆ ಭೇಟಿ ನೀಡಲು ಸೂಕ್ತ ಸಮಯ. ಈ ಸಮಯದಲ್ಲಿ ಈ ಸ್ಥಳದ ಹವಾಮಾನ ಆಹ್ಲಾದಕರವಾಗಿರುವುದರಿಂದ ಇಲ್ಲಿನ ದೃಶ್ಯಗಳನ್ನು ಅನುಭವಿಸಲು, ವೀಕ್ಷಿಸಲು ಹಾಗೂ ಮನೋರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಶಸ್ತವಾಗಿದೆ.ಒಟ್ಟಿನಲ್ಲಿ ಹಿಮಾಚಲ ಪ್ರದೇಶದ ಪ್ರತಿಯೊಂದು ಭಾಗವೂ ನೋಡಲೇ ಬೇಕಾದಂತಹ ಸ್ಥಳಗಳಾಗಿವೆ. ಇಲ್ಲಿನ  ಪ್ರಕೃತಿಯ ಮಡಿಲಲ್ಲಿ ವಿರಮಿಸಿದವರೇ ಧನ್ಯ ! ನಿಮ್ಮ ರಜೆಯನ್ನು ನೆನಪಿನ ದಿನವನ್ನಾಗಿಸಲು ಹಿಮಾಚಲ ಪ್ರದೇಶದ ಕುಫ್ರಿ ಪಟ್ಟಣಕ್ಕೆ ಒಮ್ಮೆಯಾದರೂ ಬೇಟಿ ನೀಡಲೇ ಬೇಕು.

ಬೇಸಿಗೆಗಾಲ

(ಏಪ್ರೀಲ್ ನಿಂದ ಜೂನ್) : ಕುಫ್ರಿ ಪಟ್ಟಣದಲ್ಲಿ ಬೇಸಿಗೆ ಸಮಯದಲ್ಲಿ ಹವಾಮಾನ ಸಮಶೀತೋಷ್ಣ ವಾಗಿರುತ್ತದೆ. ಈ ಸಮಯದಲ್ಲಿ ತಾಪಮಾನ 12 ಡಿ. ಸೆ  ಮತ್ತು 19 ಡಿ. ಸೆ ನಡುವೆ ದಾಖಲಾಗುತ್ತದೆ. ಬೇಸಿಗೆ ಋತುವು ಇಲ್ಲಿನ ದೃಶ್ಯಗಳ ವೀಕ್ಷಣೆ ಮತ್ತು ಸಾಹಸ ಕ್ರೀಡೆಗಳಿಗೆ ಅನುಕೂಲಕರವಾಗಿರುತ್ತದೆ.

ಮಳೆಗಾಲ

(ಜುಲೈ ನಿಂದ ಸೆಪ್ಟಂಬರ್) : ಕುಫ್ರಿಯಲ್ಲಿ ಮಳೆಗಾಲವು ಜುಲೈ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳಿನ ವರೆಗೆ ವಿಸ್ತರಿಸುತ್ತದೆ. ಈ ಸ್ಥಳದಲ್ಲಿ ಮಳೆಗಾಲದಲ್ಲಿ ಕಡಿಮೆ ಮಳೆಯುಂಟಾಗುತ್ತದೆ. ಈ ಸಮಯದಲ್ಲಿ ತಾಪಮಾನವು ಸುಮಾರು 10 ಡಿ. ಸೆ ಗಿಂತ ಕೆಳಗೆ ಇಳಿಯುತ್ತದೆ.

ಚಳಿಗಾಲ

(ಅಕ್ಟೋಬರ್ ನಿಂದ ಮಾರ್ಚ್) : ಕುಫ್ರಿಯಲ್ಲಿ ಚಳಿಗಾಲದಲ್ಲಿ ತಾಪಮಾನವು ಘನೀಕರಣ ಬಿಂದುವಿಗಿಂತ ಕಡಿಮೆ ಮಟ್ಟದಲ್ಲಿ ದಾಖಲಾಗುತ್ತದೆ. ಈ ಸಮಯದಲ್ಲಿ ಇಲ್ಲಿ, ಭಾರಿ ಹಿಮಪಾತ ಉಂಟಾಗುತ್ತದೆ. ಚಳಿಗಾಲದಲ್ಲಿ ಅತ್ಯಂತ ಶೀತ ಹವಾಮಾನದಿಂದಾಗಿ ಪ್ರವಾಸಿಗರು ಸಾಮಾನ್ಯವಾಗಿ ಈ ಋತುವಿನಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬರುವುದಿಲ್ಲ. ಆದರೂ ಚಳಿಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಲು ಯೋಚಿಸುವ ಪ್ರವಾಸಿಗರು ಭಾರೀ ಉಣ್ಣೆಯ ಬಟ್ಟೆಗಳನ್ನು ಧರಿಸಬೇಕು.