ಇಂಡಸ್ ನದಿಯಿಂದ ಸುತ್ತುವರೆದಿರುವ ಸಂರಕ್ಷಿತ ಅರಣ್ಯಧಾಮ ಪ್ರವಾಸಿಗರಿಗೆ ಸಾಹಸ ಚಟುವಟಿಕೆಗಳಾದ ಚಾರಣ, ಶಿಬಿರ ಮತ್ತು ವನವಿಹಾರಗಳನ್ನು ಆಸ್ವಾದಿಸುವ ಅತ್ಯಮೂಲ್ಯ ಅವಕಾಶ ನೀಡುತ್ತದೆ. ಪರಿಶುದ್ದ ವಾತಾವರಣವಿರುವ ಈ ಕಾಡಿನಲ್ಲಿ ನಿಂತು ಜಮ್ಮು ಕಾಶ್ಮೀರದ ಫೀರ್ ಪಂಜಲ್ ಪರ್ವತಗಳನ್ನು ಕಣ್ತುಂಬಿಕೊಳ್ಳಬಹುದು.
ಈ ಪ್ರದೇಶದ ಅಪರೂಪದ ಪ್ರಾಣಿಗಳೆಂದರೆ - ಫೀಸಂಟ್ಸ್, ಚಿಕೋರ್ಸ್, ಹಿಮಾಲಯನ್ ಈಗಲ್ಸ್, ಪ್ಯಾಟ್ರಿಡ್ಜ್ ಮಂಗಗಳು, ಬಬೂನ್, ಜ್ಯಾಕಲ್ಸ್, ಕೂಗುವ ಜಿಂಕೆಗಳು ಮತ್ತು ಚಿರತೆಗಳು. ಶಿಮ್ಲಾ ಸಂರಕ್ಷಿತ ಅಭಯಾರಣ್ಯದಲ್ಲಿ ಅಪರೂಪದ ಹಸಿರು ರಾಶಿಗಳಾದ ಓಕ್, ಪೈನ್, ಮ್ಯಾಪಲ್, ಚೆಸ್ಟ್ ನಟ್ ಮತ್ತು ಸೀಡರ್ ಗಳ ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳಬಹುದು.