Search
 • Follow NativePlanet
Share
ಮುಖಪುಟ » ಸ್ಥಳಗಳು» ಡಾಲ್ ಹೌಸಿ

ಡಾಲ್‌ಹೌಸಿ: ಸುಂದರ ಬೆಟ್ಟ, ಗುಡ್ಡಗಳ ಮನಮೋಹಕ ತಾಣ

71

ಹಿಮಾಚಲ ಪ್ರದೇಶ ರಾಜ್ಯದ ದೌಲಾಧರ್‌ ಭಾಗದಲ್ಲಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಡಾಲ್‌ಹೌಸಿ. 1854 ರಲ್ಲಿ ಈ ಪಟ್ಟಣ ಆವಿಷ್ಕರಿಸಿತು. ಬ್ರಿಟಿಷ್‌ ಗವರ್ನರ್‌ ಜನರಲ್‌ ಆಗಿದ್ದ ಲಾರ್ಡ್ ಡಾಲ್‌ಹೌಸಿ ಅವರ ಹೆಸರನ್ನೇ ಪಟ್ಟಣಕ್ಕೆ ಇಡಲಾಗಿದೆ. ಲಾರ್ಡ್ ಡಾಲ್‌ಹೌಸಿ ತನ್ನ ಬೇಸಿಗೆ ದಿನಗಳನ್ನು ಕಳೆಯಲು ಈ ತಾಣವನ್ನು ಆಶ್ರಯಿಸಿದ್ದ. ಅಲ್ಲದೇ ಈ ಪ್ರದೇಶವು ಅತ್ಯಂತ ಜನಪ್ರಿಯ ಛಂಬಲ್‌ ಅರಣ್ಯ ಪ್ರದೇಶದ ಪ್ರವೇಶದ್ವಾರ ಕೂಡ ಹೌದು.

ಇಲ್ಲಿನ ಐದು ಬೆಟ್ಟಗಳು ಅತ್ಯಂತ ಜನಪ್ರಿಯ, ಅವುಗಳೆಂದರೆ ಕತ್ಲೋಗ್‌, ಪೋರ್ಟರೇಯನ್‌, ತೆಹ್ರಾ, ಬಕ್ರೋಟಾ ಹಾಗೂ ಬಾಲುನ್‌. ಇವೂ ಸೇರಿದಂತೆ ಹಲವು ಪರ್ವತಗಳಿಂದ ಆವೃತ್ತವಾದ 13 ಚದರ್‌ ಕಿ.ಮೀ. ವ್ಯಾಪ್ತಿಯ ಪ್ರದೇಶ ಅರಣ್ಯವನ್ನು ಇದು ಹೊಂದಿದೆ. ತಮ್ಮ ಸಮೂದಾಯದವರ ವಸತಿಗಾಗಿ ದಾಲೋದರ್‌ ವಲಯ ಪ್ರದೇಶವನ್ನು ಬ್ರಿಟಿಷರು ಆಯ್ಕೆ ಮಾಡಿಕೊಂಡಿದ್ದರು. ಅಂದು, ಬ್ರಿಟಿಷ್‌ ಸೇನೆಯ ಚಕ್ರಾಧಿಪತಿ ಲಾರ್ಡ್ ನೇಪಿಯರ್‌ ಕೂಡ ಈ ಪರ್ವತಗಳ ಇಳಿಜಾರಿನಿಂದ ಕೂಡಿದ ಭಾಗದಲ್ಲಿ ಆಸ್ಪತ್ರೆ ನಿರ್ಮಿಸುವ ಪ್ರಸ್ತಾವ ಇರಿಸಿದ್ದ. ಈ ಆಸ್ಪತ್ರೆಯಿಂದ ಛಂಬಾ ಭಾಗದಲ್ಲಿ ಕಾಣಿಸಿಕೊಂಡಿದ್ದ ರೋಗಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ಆತನ ಉದ್ದೇಶವಾಗಿತ್ತು.

ಈ ಭಾಗ ಹಲವು ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಅದರಲ್ಲಿ ಸಂದರ್ಶಿಸಬಹುದಾದ ಪ್ರಮುಖ ಚರ್ಚ್ ಎಂದರೆ ಬಾಲೂನ್‌ನಲ್ಲಿರುವ ಸೇಂಟ್‌ ಆಂಡ್ರ್ಯೂಸ್‌ ಹಾಗೂ ಸೇಂಟ್‌ ಪ್ರ್ಯಾಟ್ರಿಕ್ಸ್‌ ಚರ್ಚ್. ಈ ಸೇಂಟ್‌ ಪ್ಯಾಟ್ರಿಕ್‌ ಚರ್ಚ್  ಇರುವುದು ಸುಭಾಷ್‌ ಚೌಕ್‌ನಲ್ಲಿ. ಹಾಗೂ ಸೇಂಟ್‌ ಜಾನ್ಸ್‌ ಚರ್ಚ್ ಇರುವುದು ಗಾಂಧಿ ಚೌಕ್‌ನಲ್ಲಿ. ಇಲ್ಲಿನ ವಾಸ್ತುಶಿಲ್ಪ ವೈಭವ ನೋಡಬೇಕೆಂದರೆ ಇಲ್ಲಿನ ಜಂದ್ರಿಘಾಟ್‌ನಲ್ಲಿರುವ ಛಂಬ್ರಾ ಅರಸರ ಪ್ಯಾಲೇಸ್‌ಗೆ ತೆರಳಬೇಕು. ಇದು ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ. ಪಂಚಪುಲಾ ಹಾಗೂ ಸುಭಾಷ್‌ ಬಾವೋಲಿ ತಾಣಗಳು ಭಾರತೀಯ ಸ್ವಾತಂತ್ರ್ಯ ಹೋರಾಟದ ನೆನಪನ್ನು ತರುತ್ತವೆ.

ಸ್ವಾತಂತ್ರ್ಯ ಹೋರಾಟಗಾರರಾದ ಅಜಿತ್‌ ಸಿಂಗ್‌, ಸುಭಾಷ್‌ಚಂದ್ರ ಬೋಸ್‌ ಅವರ ತವರಾಗಿದೆ. ಅಲ್ಲದೇ ಇದೊಂದು ವೀಕ್ಷಣಾ ಯೋಗ್ಯ ತಾಣವು ಕೂಡ ಹೌದು. ಇದು ವೀಕ್ಷಣೆಗೆ ಯೋಗ್ಯವಾದ ಪ್ರವಾಸಿ ತಾಣ ಮಾತ್ರವಲ್ಲ, ಜನರನ್ನು ರಂಚಿಸುವ ಪ್ರಕೃತಿಯ ಜತೆಗೆ ಸಾಹಸ ಕ್ರೀಡೆ ಅಥವಾ ಸಾಹಸಿಗಳಿಗೂ ಇದು ಹೇಳಿ ಮಾಡಿಸಿದ ತಾಣ. ತ್ರಿಯೂಂಡ್‌, ಧರ್ಮಶಾಲಾ, ದೈನಕುಂಡ, ಖಾಜ್ಜೀರ್‌, ಛಂಬಾ, ಪಾಲಂಪುರ್‌, ಬಿಜನಾಥ, ಬೀರ್‌ ಹಾಗೂ ಬಿಲ್ಲಿಂಗ್‌ ಮುಂತಾದವು  ಗುರುತರವಾದ ಇಲ್ಲಿಗೆ ಹತ್ತಿರದಲ್ಲಿರುವ ಇನ್ನಿತರ ಕೆಲ ಪ್ರದೇಶಗಳು. ಛೋಬಿಯಾ ಪಾಸ್‌, ಗಾಂಧಿ ಚೌಕ್, ಭಾರಮೂರ್‌, ಛಂಬಾ ಎಚ್‌ಪಿ, ಗರಮ್‌ ಸಡಕ್‌, ಅಲೀಹಾ ವಾಟರ್‌ ಟ್ಯಾಂಕ್‌, ಗಂಜಿ ಪಹಾರಿ ಹಾಗೂ ಬಜ್ರೇಶ್ವರಿ ದೇವಿ ದೇವಾಲಯಗಳನ್ನೂ ಕೂಡ ಕಾಣಬಹುದು. ಡಾಲ್‌ಹೌಸಿ ಸಮೀಪ ಇರುವ ಖಾಯಂ ಪ್ರವಾಸಿ ತಾಣವೆಂದರೆ ಅದು ಛಂಬಾ ಎಚ್‌ಪಿ.

ದಿ ಭೂರಿ ಸಿಂಗ್‌ ಮ್ಯೂಸಿಯಂ ಇಲ್ಲಿನ ಅತ್ಯಂತ ಪ್ರಮುಖ ಆಕರ್ಷಣೆಯ ಕೇಂದ್ರಗಳಲ್ಲಿ ಒಂದು. 1908 ರಲ್ಲಿ ಇದರ ನಿರ್ಮಾಣವಾಗಿದೆ. ಕಲಾ ಪ್ರೇಮಿಗಳಿಗೆ ಇದು ಸ್ವರ್ಗ. ಇಷ್ಟದ ಚಿತ್ರಕಲೆಯನ್ನು ವೀಕ್ಷಿಸಲು ಉತ್ತಮ ತಾಣ. ಈ ಮ್ಯೂಸಿಯಂನ್ನು ಅರಸುವಂಶಸ್ಥ ರಾಜಾ ಬಾವುರಿ ದಾನವಾಗಿ ನೀಡಿದ್ದಾನೆ. ಇಲ್ಲಿ ಅತ್ಯಂತ ಮಹತ್ವಪೂರ್ಣ ಶಿಲಾ ಶಾಸನವೊಂದಿದೆ. ಇದನ್ನು ಸರದಾ ಲಿಪಿಯಲ್ಲಿ ಕೆತ್ತಲಾಗಿದೆ. ಇದರಲ್ಲಿ ಛಂಬ್ರಾದ ಎಲ್ಲಾ ಐತಿಹಾಸಿಕ ಹಿನ್ನೆಲೆಯನ್ನೂ ಅರಿಯಬಹುದಾಗಿದೆ. ಇದಲ್ಲದೇ ಇಲ್ಲೊಂದು ರಂಗ ಮಹಲ್‌ ಇದೆ. ಇದನ್ನು ರಾಜಾ ಉಮದ್‌ ಸಿಂಗ್‌ ನಿರ್ಮಿಸಿದ್ದು, ಇದಕ್ಕಾಗಿ ಅವನು ಮುಘಲ್‌ ಹಾಗೂ ಬ್ರಿಟಿಷ್‌ ವಾಸ್ತುಶಿಲ್ಪವನ್ನು ಬಳಸಿದ್ದ. ಈ ಮ್ಯೂಸಿಯಂನ ವಿಶೇಷ ಆಕರ್ಷಣೆ ಪಂಜಾಬ್‌ ಶೈಲಿಯ ಪೇಂಟಿಂಗ್‌ಗಳು. ಇವೆಲ್ಲವೂ ಶ್ರೀಕೃಷ್ಣನ ಕುರಿತಾದ ಪೇಂಟಿಂಗ್‌ಗಳು ಎನ್ನುವುದು ವಿಶೇಷ. ಇದಲ್ಲದೇ ಪ್ರವಾಸಿಗರು ಇಲ್ಲಿ ಹಿಮಾಚಲ ಎಂಪೋರಿಯಂನಿಂದ ಸಿದ್ಧಗೊಂಡ ಕೈ ಕಸೂತಿಯಿಂದ ಸಿದ್ಧಪಡಿಸಲಾದ ರುಮಾಲು ಅಥವಾ ಕರ್ಚಿಪ್‌  ಕೊಳ್ಳಬಹುದು. ಮರದ ನಾರಿನಿಂದ ಸಿದ್ಧಪಡಿಸಿದ ಶಾಲು, ಚಪ್ಪಲಿ ಕೊಳ್ಳಬಹುದು. ಇದು ಕೂಡ ಮ್ಯೂಸಿಯಂ ಆವರಣದಲ್ಲಿಯೇ ಸಿಗುತ್ತದೆ.

ಡಾಲಹೌಸಿಯ ವಾತಾವರಣ ವರ್ಷದ ಎಲ್ಲಾ ಸಮಯದಲ್ಲೂ ಸಹನೀಯವಾಗಿರುತ್ತದೆ. ಮಾರ್ಚ್ ನಿಂದ ಮೇ ಡಾಲಹೌಸಿಯಲ್ಲಿ ಬೇಸಿಗೆ. ತಾಪಮಾನ ಈ ಸಂದರ್ಭದಲ್ಲಿ 15.5 ಡಿಗ್ರಿ ಸೆಂಟಿಗ್ರೇಡ್‌ನಿಂದ 25.5 ಡಿಗ್ರಿ ಸೆಂಟಿಗ್ರೇಡ್‌ವರೆಗೆ ಇರುತ್ತದೆ. ಪ್ರವಾಸಿಗರಿಗೆ ನೀಡುವ ಸೂಚನೆಯೆಂದರೆ ಇತ್ತ ಬರಲು ಇದು ಸಕಾಲ. ನಿಸರ್ಗ ಸೌಂದರ್ಯವನ್ನು ಇಚ್ಛಾನುಸಾರ ಅನುಭವಿಸಬಹುದು. ಗುಡ್ಡ ಬೆಟ್ಟಗಳಿಂದ ಆವೃತ್ತವಾಗಿರುವ ಡಾಲ್‌ಹೌಸಿಯಲ್ಲಿ ಮಳೆಯೂ ಹೆಚ್ಚು. ಜೂನ್‌ನಲ್ಲಿ ಮಳೆಗಾಲ ಆರಂಭವಾದರೆ ಇದು ಸೆಪ್ಟೆಂಬರ್‌ವರೆಗೂ ಮುಂದುವರಿಯುತ್ತದೆ. ಚಳಿಗಾಲದಲ್ಲಿ ಇಲ್ಲಿನ ತಾಪಮಾನ ಅತ್ಯಂತ ಕಡಿಮೆ ಇರುತ್ತದೆ. 10 ಡಿಗ್ರಿ ಸೆಲ್ಶಿಯಸ್‌ನಿಂದ  1 ಡಿಗ್ರಿ ಸೆಲ್ಶಿಯಸ್‌ವರೆಗೂ ಇರುತ್ತದೆ. ಸಮುದ್ರ ಮಟ್ಟದಿಂದ 2700 ಅಡಿ ಎತ್ತರದಲ್ಲಿರುವುದರಿಂದ ಇಲ್ಲಿ ಚಳಿಗಾಲದಲ್ಲಿ ಹಿಮಪಾತ ಕೂಡ ಆಗುತ್ತದೆ.

ಡಾಲ್‌ಹೌಸಿಯು ದೇಶದ ರಾಜಧಾನಿ ದಿಲ್ಲಿಯಿಂದ 563 ಕಿ.ಮೀ. ದೂರದಲ್ಲಿದೆ. ಅಮೃತಸರದಿಂದ 191 ಕಿ.ಮೀ., ಛಂಬ್ರಾದಿಂದ 56 ಕಿ.ಮೀ. ಹಾಗೂ ಚಂಡಿಘಡದಿಂದ 300 ಕಿ.ಮೀ. ದೂರದಲ್ಲಿದೆ. ಡಾಲ್‌ಹೌಸಿಗೆ ಸಮೀಪದ ವಿಮಾನ ನಿಲ್ದಾಣ ಪಠಾನ್‌ಕೋಟ್‌ ಆಗಿದೆ. ಇಲ್ಲಿಂದ 80 ಕಿ.ಮೀ. ದೂರದಲ್ಲಿದೆ. ಪಠಾನ್‌ಕೋಟ್‌ಗೆ ದಿಲ್ಲಿಯಿಂದ ಮಾತ್ರ ವೈಮಾನಿಕ ಸಂಪರ್ಕ ವ್ಯವಸ್ಥೆ ಇದೆ. ಇದನ್ನು ಹೊರತುಪಡಿಸಿದರೆ ಹತ್ತಿರದ ನಿಲ್ದಾಣ ಜಮ್ಮು. ಡಾಲ್‌ಹೌಸಿಯಿಂದ ಇದು 180 ಕಿ.ಮೀ. ದೂರದಲ್ಲಿದೆ. ಇದಾದ ಮೇಲೆ ಸಿಗುವುದು ದಿಲ್ಲಿ ವಿಮಾನ ನಿಲ್ದಾಣ. ದಿಲ್ಲಿಯು ಉತ್ತರ ಭಾರತದ ಎಲ್ಲೆಡೆಯಿಂದ ಹಾಗೂ ವಿದೇಶಗಳಿಂದಲೂ ಅತ್ಯುತ್ತಮ ಸಂಪರ್ಕ ಹೊಂದಿದೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಐಜಿಐ ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಡಾಲ್‌ಹೌಸಿಗೆ ನೀಡುತ್ತದೆ. ಡಾಲ್‌ಹೌಸಿಗೆ ಹತ್ತಿರದ ರೈಲು ನಿಲ್ದಾಣ ಪಠಾನ್‌ಕೋಟ್‌. ಇದು ಇಲ್ಲಿಂದ 80 ಕಿ.ಮೀ. ದೂರದಲ್ಲಿದೆ. ಪಠಾನ್‌ಕೋಟ್‌ ರೈಲು ನಿಲ್ದಾಣ ಪ್ರಮುಖ ನಗರಗಳಿಂದ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ. ದಿಲ್ಲಿ, ಮುಂಬಯಿ, ಅಮೃತಸರ ಇತ್ಯಾದಿ ನಗರದಿಂದ ರೈಲು ಇಲ್ಲಿಗೆ ಬರುತ್ತಿರುತ್ತವೆ.  ಸಾರ್ವಜನಿಕ ಸಾರಿಗೆ ವ್ಯವಸ್ಥೆ ಡಾಲ್‌ಹೌಸಿಗೆ ಸುತ್ತಲಿನ ಪ್ರದೇಶದಿಂದ ಅತ್ಯುತ್ತಮವಾಗಿದೆ. ಸುತ್ತಲಿನ ಪ್ರಮುಖ ನಗರದಿಂದ ಸಮೂಹ ಸಾರಿಗೆ ಸಂಪರ್ಕ ವ್ಯವಸ್ಥಿತವಾಗಿದೆ. ನಿರಂತರವಾಗಿ ಲಗ್ಜುರಿ ಬಸ್‌ಗಳು ಲಭ್ಯವಿರುತ್ತವೆ. ದಿಲ್ಲಿಯಿಂದ ಇಲ್ಲಿಗೆ 560 ಕಿ.ಮೀ. ಅಂತರವಿದೆ. ದಿಲ್ಲಿಯಿಂದ ಇಲ್ಲಿಗೆ ಹವಾನಿಯಂತ್ರಿತ ಬಸ್‌ ಮೂಲಕವೂ ಆಗಮಿಸಬಹುದು.

ಡಾಲ್ ಹೌಸಿ ಪ್ರಸಿದ್ಧವಾಗಿದೆ

ಡಾಲ್ ಹೌಸಿ ಹವಾಮಾನ

ಡಾಲ್ ಹೌಸಿ
16oC / 62oF
 • Sunny
 • Wind: NE 12 km/h

ಉತ್ತಮ ಸಮಯ ಡಾಲ್ ಹೌಸಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಡಾಲ್ ಹೌಸಿ

 • ರಸ್ತೆಯ ಮೂಲಕ
  ಸಾರ್ವಜನಿಕ ಸಾರಿಗೆ ವ್ಯವಸ್ಥೆ ಡಾಲ್‌ಹೌಸಿಗೆ ಸುತ್ತಲಿನ ಪ್ರದೇಶದಿಂದ ಅತ್ಯುತ್ತಮವಾಗಿದೆ. ಸುತ್ತಲಿನ ಪ್ರಮುಖ ನಗರದಿಂದ ಸಮೂಹ ಸಾರಿಗೆ ಸಂಪರ್ಕ ವ್ಯವಸ್ಥಿತವಾಗಿದೆ. ನಿರಂತರವಾಗಿ ಲಗ್ಜುರಿ ಬಸ್‌ಗಳು ಲಭ್ಯವಿರುತ್ತವೆ. ದಿಲ್ಲಿಯಿಂದ ಇಲ್ಲಿಗೆ 560 ಕಿ.ಮೀ. ಇದೆ. ದಿಲ್ಲಿಯಿಂದ ಇಲ್ಲಿಗೆ ಹವಾನಿಯಂತ್ರಿತ ಬಸ್‌ ಮೂಲಕವೂ ಆಗಮಿಸಬಹುದು. ಇದಕ್ಕೆ ಪ್ರತಿ ವ್ಯಕ್ತಿಗೆ 1500 ರೂ. ಶುಲ್ಕವಾಗುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಡಾಲ್‌ಹೌಸಿಗೆ ಹತ್ತಿರದ ರೈಲು ನಿಲ್ದಾಣ ಪಠಾನ್‌ಕೋಟ್‌. ಇದು ಇಲ್ಲಿಂದ 80 ಕಿ.ಮೀ. ದೂರದಲ್ಲಿದೆ. ಪಠಾನ್‌ಕೋಟ್‌ ರೈಲು ನಿಲ್ದಾಣ ಪ್ರಮುಖ ನಗರಗಳಿಂದ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ. ದಿಲ್ಲಿ, ಮುಂಬಯಿ, ಅಮೃತಸರ ಇತ್ಯಾದಿ ನಗರದಿಂದ ರೈಲು ಬರುತ್ತವೆ. ಇಲ್ಲಿಂದ ಡಾಲ್‌ಹೌಸಿಗೆ ಟ್ಯಾಕ್ಸಿ, ಕ್ಯಾಬ್‌ಗಳು ಸಿಗುತ್ತವೆ. ಇಲ್ಲಿ ತಲುಪಲು ಖಾಸಗಿ ವಾಹನಗಳು ಸುಮಾರು ಸಾವಿರ ರೂ. ಪಡೆಯುತ್ತವೆ ಅಷ್ಟೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಡಾಲ್‌ಹೌಸಿಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಪಠಾನ್‌ಕೋಟ್‌. ಇದು ಡಾಲ್‌ಹೌಸಿಯಿಂದ 80 ಕಿ.ಮೀ. ದೂರದಲ್ಲಿದೆ. ಆದರೆ ಇಲ್ಲಿಂದ ಸಂಪರ್ಕ ಸೌಲಭ್ಯ ಇರುವುದು ಕೇವಲ ದಿಲ್ಲಿಗೆ ಮಾತ್ರ. ಇದನ್ನು ಹೊರತುಪಡಿಸಿದರೆ ಹತ್ತಿರದ ನಿಲ್ದಾಣ ಜಮ್ಮು. ಡಾಲ್‌ಹೌಸಿಯಿಂದ ಇದು 180 ಕಿ.ಮೀ. ದೂರದಲ್ಲಿದೆ. ಇದಾದ ಮೇಲೆ ಸಿಗುವುದು ದಿಲ್ಲಿ ವಿಮಾನ ನಿಲ್ದಾಣ. ದಿಲ್ಲಿಯು ಉತ್ತರ ಭಾರತದ ಎಲ್ಲೆಡೆಯಿಂದ ಹಾಗೂ ವಿದೇಶಗಳಿಂದಲೂ ಅತ್ಯುತ್ತಮ ಸಂಪರ್ಕ ಹೊಂದಿದೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಐಜಿಐ ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಡಾಲ್‌ಹೌಸಿಗೆ ನೀಡುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Sep,Tue
Return On
30 Sep,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Sep,Tue
Check Out
30 Sep,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Sep,Tue
Return On
30 Sep,Wed
 • Today
  Dalhousie
  16 OC
  62 OF
  UV Index: 5
  Sunny
 • Tomorrow
  Dalhousie
  11 OC
  52 OF
  UV Index: 5
  Partly cloudy
 • Day After
  Dalhousie
  13 OC
  55 OF
  UV Index: 6
  Partly cloudy