ಐದು ಸೇತುವೆಗಳ ತಾಣ ಎಂಬ ಅರ್ಥ ನೀಡುವ ಪಂಚಪುಲಾ, ಡಾಲ್ಹೌಸಿಯಿಂದ ಮೂರು ಕಿ.ಮೀ. ದೂರದಲ್ಲಿದೆ. ಇದೊಂದು ಹೆಸರುವಾಸಿಯಾದ ಪ್ರವಾಸಿ ತಾಣ. ಝರಿಯಾಗಿ ಹರಿಯುವ ನೀರು ಇಲ್ಲಿನ ಪ್ರಮುಖ ಆಕರ್ಷಣೆ. ಸ್ಥಳೀಯ ನಿವಾಸಿಗಳಿಗೆ, ಡಾಲ್ಹೌಸಿ ಹಾಗೂ ಬಲೂನ್ ಭಾಗದ ಜನರ ಬಳಕೆಗೆ ಈ ನೀರು ಆಧಾರವಾಗಿದೆ. ಇದು ದಯಾಕುಂಡದ ಉತ್ತರ ಭಾಗಕ್ಕೆ ಇದೆ. ಪಂಚಪುಲಾ ಮಾರ್ಗವಾಗಿ ನಾನಾ ಭಾಗವಾಗಿ ಹರಿಯುವ ಈ ತೊರೆ ದಯಾಕುಂಡದಲ್ಲಿ ಜನ್ಮತಾಳಿದೆ.
ಈ ಸ್ಥಳದಲ್ಲಿ ಪಂಚಪುಲಾ ಎಂಬ ಹಸರಿನ ಸ್ಮಾರಕವೊಂದನ್ನು ಸರ್ದಾರ್ ಅಜಿತ್ ಸಿಂಗ್ ಅವರ ನೆನಪಿಗಾಗಿ ನಿರ್ಮಿಸಲಾಗಿದೆ. ಇವರೊಬ್ಬ ಕ್ರಾಂತಿಕಾರಿ ಹೊರಾಟಗಾರರಾಗಿ ಜನಪ್ರಿಯರಾಗಿದ್ದರು. ತಮ್ಮ ಹೋರಾಟದ ರೂಪುರೇಷೆಯನ್ನು ಇದೇ ಸ್ಥಳದಲ್ಲಿ ಕುಳಿತು ಹೆಣೆಯುತ್ತಿದ್ದರು. ಇಲ್ಲೊಂದು ಸುಂದರ ಜಲಪಾತ ಕೂಡ ಇದ್ದು, ಅದನ್ನು ಸಾತ್ಧಾರಾ ಎಂದು ಕರೆಯಲಾಗುತ್ತದೆ. ಈ ಜಲಪಾತದ ನೀರಿನಲ್ಲಿ ಅಮೃತದ ಗುಣವಿದ್ದು, ಔಷಧೀಯ ಸತ್ವ ಹೊಂದಿದೆ ಎಂಬುದು ಇಲ್ಲಿನ ಜನರ ನಂಬಿಕೆ.