Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಭೂರಿ ಸಿಂಗ್‌ ಮ್ಯೂಸಿಯಂ

ಭೂರಿ ಸಿಂಗ್‌ ಮ್ಯೂಸಿಯಂ, ಡಾಲ್ ಹೌಸಿ

1

ಭೂರಿ ಸಿಂಗ್‌ ಮ್ಯೂಸಿಯಂ 1908 ರಲ್ಲಿ ನಿರ್ಮಾಣವಾಗಿದೆ. ಇದನ್ನು ರಾಜಾ ಭೂರಿ ನಿರ್ಮಿಸಿದ್ದಾನೆ. ಆ ಸಂದರ್ಭದಲ್ಲಿ ಚಂಬಾ ಪ್ರದೇಶವನ್ನು ಆತ ಆಳುತ್ತಿದ್ದ. ಈ ಮ್ಯೂಸಿಯಂ ಅನ್ನು ತನ್ನ ಕೌಟುಂಬಿಕ ಮ್ಯೂಸಿಯಂ ಆಗಿಸಿದ್ದು, ಇಲ್ಲಿ ಸಾಕಷ್ಟು ಪೇಂಟಿಂಗ್‌ಗಳನ್ನು ಇರಿಸಿದ್ದ. ಪೇಂಟಿಗ್‌ಗಳ ಹೊರತಾಗಿ ಇಲ್ಲಿ ಸರ್ದಾ ಲಿಪಿ ಇದೆ. ಈ ಲಿಪಿ ಛಂಬಾದ ಇತಿಹಾಸ ಹಾಗೂ ಘಟನಾವಳಿಗಳನ್ನು ವಿವರಿಸುತ್ತದೆ. ಇಲ್ಲಿರುವ ಸಂಗ್ರಹಗಳು ಚಂಬಾ ಅರಸರ ಕಲೆ ಹಾಗೂ ಸಂಸ್ಕೃತಿಯ ಪ್ರೀತಿಯನ್ನು ತೋರಿಸುತ್ತವೆ. ಇಲ್ಲಿ ಅತ್ಯಂತ ಸುಂದರ ಶೈಲಿಯಾದ ಗುಲೇರ್‌-ಕಂಗ್ರಾ ಶೈಲಿಯ ಪೇಂಟಿಂಗ್‌ಗಳನ್ನು ಸಂಗ್ರಹಿಸಿಡಲಾಗಿದೆ. ಇವು ಇಡೀ ಚಂಬಾ ಪ್ರದೇಶವನ್ನು ಚಿತ್ರದ ರೂಪದಲ್ಲಿ ಕಟ್ಟಿಕೊಡುತ್ತವೆ. ಅಲ್ಲದೇ ಇಲ್ಲಿ ವೀಕ್ಷಕರು ನೋಡಲೇ ಬೇಕಾದ್ದು ಆಕರ್ಷಕ ಬಾಸೋಲಿ ಪೇಂಟಿಂಗ್‌ಗಳನ್ನು. ಇದು ರಾಮಾಯಣದ ಭಗವತ್‌ಪುರಾಣದಲ್ಲಿ ಬರುವ ಶೈಲಿಯನ್ನು ಪ್ರತಿನಿಧಿಸುತ್ತದೆ.

ಇಲ್ಲಿನ ಇತರೆ ಆಕರ್ಷಣೆಗಳೆಂದರೆ ಅತ್ಯಾಕರ್ಷಕ ಚಂಬಾ ರುಮಾಲು ಅಥವಾ ಕೈವಸ್ತ್ರ. ಇದರ ಜತೆ ಬಾಣ ಹಾಗೂ ಬತ್ತಳಿಕೆ, ನಾಣ್ಯಗಳು, ಗುಡ್ಡದ ಆಭರಣ, ಉಡುಗೆ, ಆಭರಣಗಳು, ಕರಕುಶಲ ವಸ್ತುಗಳು, ಸಂಗೀತ ಸಾಧನಗಳು ಪ್ರದರ್ಶನವಾಗಿವೆ. ಮ್ಯೂಸಿಯಂ ಅನ್ನು ಸರ್ಕಾರಿ ರಜೆದಿನಗಳಲ್ಲಿ ಹಾಗೂ ಸೋಮವಾರ  ಬೆಳಗ್ಗೆ 10 ರಿಂದ ಸಂಜೆ 5 ರ ನಡುವೆ ವೀಕ್ಷಿಸಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue