Search
 • Follow NativePlanet
Share
ಮುಖಪುಟ » ಸ್ಥಳಗಳು» ಪಹಲ್ಗಾಂ

ಪಹಲ್ಗಾಂ ಪ್ರವಾಸೋದ್ಯಮ - ಭುವಿಯ ಮೇಲಿನ ಸ್ವರ್ಗಕ್ಕೆ ಒಂದು ನಿದರ್ಶನ

51

ಪಹಲ್ಗಾಂ ಎಂಬುದು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಅನಂತ್‍ನಾಗ್ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಗ್ರಾಮದ ಇತಿಹಾಸವು ಮೊಘಲರ ಕಾಲದಷ್ಟು ಹಿಂದಕ್ಕೆ ಹೋಗುತ್ತದೆ. ಆಗ ಇದು ಒಂದು ಕುರಿಗಾಹಿಗಳ ಗ್ರಾಮವಾಗಿತ್ತು. ಈ ಸ್ಥಳದ ಹೆಚ್ಚುಗಾರಿಕೆಯು ಇಲ್ಲಿನ ಸ್ಥಳೀಯರ ಆಹಾರ, ವಸ್ತ್ರ ಮತ್ತು ಜೀವನ ಶೈಲಿಯಲ್ಲಿ ಅಡಗಿದೆ. ಈ ಪ್ರದೇಶದಲ್ಲಿ ಹಿಂದಿಯ ಜೊತೆಗೆ ಉರ್ದು, ಕಾಶ್ಮೀರಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಸಹ ಮಾತನಾಡಲಾಗುತ್ತದೆ.

ಸಮುದ್ರ ಮಟ್ಟದಿಂದ 2740 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಈ ಸ್ಥಳವು ದಟ್ಟವಾದ ಅರಣ್ಯಗಳು, ಸುಂದರವಾದ ಕೆರೆಗಳು ಮತ್ತು ಪರಿಶುದ್ಧವಾದ ಜಲಪಾತಗಳು ಹಾಗು ಹೂವುಗಳಿಂದ ಕೂಡಿದ ಹುಲ್ಲುಗಾವಲುಗಳನ್ನು ಹೊಂದಿದ್ದು, ಶ್ರೀನಗರದಿಂದ 95 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದಲ್ಲದೆ ಈ ಸ್ಥಳದ ಮತ್ತೊಂದು ವಿಶೇಷತೆಯೇನೆಂದರೆ ಇಲ್ಲಿ ಅರು ಮತ್ತು ಶೇಷ್‍ನಾಗ್ ಎಂಬ ಎರಡು ನದಿಗಳು ಸಂಗಮವಾಗುತ್ತವೆ.

ಅರು ನದಿಯು ಕೊಲಹೊಯ್ ಗ್ಲೇಸಿಯರ್ (ಹಿಮನದಿ) ಜೊತೆಗೆ ಸಂಗಮವಾದ ನಂತರ ತಾನು ಒಂದು ಗ್ಲೇಸಿಯರ್ ಆಗಿ ಪರಿವರ್ತನೆ ಹೊಂದುತ್ತದೆ. ಹಿಂದೂಗಳ ಅತ್ಯಂತ ಪ್ರಸಿದ್ಧ ಧಾರ್ಮಿಕ ಯಾತ್ರೆಯಾದ ಅಮರನಾಥ ಯಾತ್ರೆಯು ಪಹಲ್ಗಾಂ ಮೂಲಕವೇ ಸಾಗುತ್ತದೆ. ಪಹಲ್ಗಾಂನಿಂದ ಅಮರನಾಥಕ್ಕೆ ತಲುಪಲು 3 ದಿನಗಳಷ್ಟು ಸಮಯ ತಗುಲುತ್ತದೆ.

ಇದರ ಜೊತೆಗೆ ಪ್ರವಾಸಿಗರು ಪಹಲ್ಗಾಂನಿಂದ ಚಂಡೀವರ್, ಅರು ಕಣಿವೆ ಮತ್ತು ಕೋಹ್ಲಿ ಗ್ಲೇಸಿಯರ್ ಗಳಿಗೆ ಚಾರಣವನ್ನು ಸಹ ಕೈಗೊಳ್ಳಬಹುದು. ಅಲ್ಲದೆ ಇಲ್ಲಿಂದ ಲೇಹ್‍ಗೆ ಸಹ ಹೋಗಬಹುದು. ಇಲ್ಲಿ ಜೀಪ್ ಸಫಾರಿ ಸೌಲಭ್ಯವು ದೊರೆಯುತ್ತದೆ. ಮಟ್ಟನ್, ತರ್ಸರ್ ಕೆರೆ, ಶಿಕರ್ ಘಡ್, ಸೂರ್ಯ ದೇವಾಲಯ, ಐಶ್‍ಮುಖಂ, ಲಿಡ್ಡರ್ ವಟ್ ಮತ್ತು ಮಾಮಲೇಶ್ವರ್ ದೇವಾಲಯಗಳು ಪಹಲ್ಗಾಂ ಸುತ್ತ ಮುತ್ತ ಇರುವ ಇನ್ನಿತರ ಪ್ರವಾಸಿ ತಾಣಗಳಾಗಿವೆ.

ಪಹಲ್ಗಾಂನಿಂದ 5 ಕಿ.ಮೀ ದೂರದಲ್ಲಿರುವ ಬೈಸರನ್‍ನಲ್ಲಿ ದಟ್ಟವಾದ ಕಾಡು, ಹುಲ್ಲುಗಾವಲುಗಳು ಮತ್ತು ಹಿಮಚ್ಛಾಧಿತವಾದ ಪರ್ವತಗಳು ನೋಡುಗರ ಮನಸೂರೆಗೊಳ್ಳುತ್ತವೆ. ಅಲ್ಲದೆ ಪಹಲ್ಗಾಂನಿಂದ 16 ಕಿ.ಮೀ ದೂರದಲ್ಲಿರುವ ತುಲಿಯನ್‍ ಕೆರೆಯು ಸಮುದ್ರ ಮಟ್ಟದಿಂದ 3353 ಮೀಟರ್ ಎತ್ತರದಲ್ಲಿದ್ದು, ನೋಡಲೆ ಬೇಕಾದ ಸ್ಥಳವಾಗಿದೆ. ಈ ಸ್ಥಳಕ್ಕೆ ಭೇಟಿಕೊಡಲು ಬಯಸುವವರು ತಮ್ಮ ಅನುಕೂಲಕ್ಕಾಗಿ ಸಣ್ಣ ಕುದುರೆಗಳನ್ನು ಬಳಸಿಕೊಳ್ಳಬಹುದು.

ಇವುಗಳೆಲ್ಲದರ ಜೊತೆಗೆ ಪಹಲ್ಗಾಂಗೆ ಸಮೀಪದಲ್ಲಿ ಸಮುದ್ರ ಮಟ್ಟದಿಂದ 2923 ಮೀಟರ್ ಎತ್ತರದಲ್ಲಿರುವ ಚಂದನ್‍ವರಿ ಎಂಬ ಯಾತ್ರಾಸ್ಥಳವು ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಈ ಸ್ಥಳವು ಒಂದು ಹಿಮದ ಸೇತುವೆಯನ್ನು ಹೊಂದಿದ್ದು, ನೋಡುಗರಿಗೆ ಒಂದು ನಯನ ಮನೋಹರವಾದ ದೃಶ್ಯವೈಭವವನ್ನು ಒದಗಿಸುತ್ತದೆ. ಪಂಚ್‍ತರ್ನಿ ಎನ್ನುವ ಪ್ರಸಿದ್ಧ ಯಾತ್ರಾ ಸ್ಥಳವು ಪಹಲ್ಗಾಂನಿಂದ 40 ಕಿ.ಮೀ ದೂರದಲ್ಲಿದೆ. ಇದು ಅಮರನಾಥ ಯಾತ್ರೆಯ ಕಡೆಯ ತಂಗುದಾಣವಾಗಿ ಕಾರ್ಯನಿರ್ವಹಿಸುತ್ತಿದೆ.

ಈ ಸ್ಥಳವು ಅಮರನಾಥದಿಂದ ಆರು ಕಿ.ಮೀ ದೂರದಲ್ಲಿದ್ದು, ಪ್ರಸಿದ್ಧ ಶಿಬಿರ ತಾಣವಾಗಿ ಸಹ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿಗೆ ಸಮೀಪದಲ್ಲಿ ಜಮ್ಮು ಮತ್ತು ಕಾಶ್ಮೀರಬಾರಾಮುಲ್ಲಾ ಜಿಲ್ಲೆಯ ಹಜನ್ ಎಂಬ ಯಾತ್ರಾ ಸ್ಥಳವಿದೆ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕಾಗಿ ಹಲವಾರು ಬಾಲಿವುಡ್ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಪಹಲ್ಗಾಂನಲ್ಲಿ ತಮ್ಮ ರಜಾದಿನಗಳನ್ನು ಕಳೆಯಲು ಇಚ್ಛಿಸುವವರು ಈ ಸ್ಥಳಕ್ಕೆ ವರ್ಷದ ಯಾವುದೇ ಸಮಯದಲ್ಲಿ ಬೇಕಾದರು ಭೇಟಿಕೊಡಬಹುದು.  

ಪಹಲ್ಗಾಂನಲ್ಲಿ ಹವಾಮಾನವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ. ಏಪ್ರಿಲ್‍ನಿಂದ ಜೂನ್ ತಿಂಗಳವರೆಗೆ ಇಲ್ಲಿ ಆಹ್ಲಾದಕರವಾದ ವಾತಾವರಣವಿರುತ್ತದೆ. ಹಿಮಪಾತವನ್ನು ಆಸ್ವಾದಿಸಲು ಬಯಸುವ ಜನರು ಇಲ್ಲಿಗೆ ನವೆಂಬರ್ ನಿಂದ ಫೆಬ್ರವರಿ ತಿಂಗಳ ನಡುವೆ ಭೇಟಿಕೊಡಬಹುದು. ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಅಮರನಾಥ್ ಯಾತ್ರೆಗೆ ಹೋಗುವ ಸಹಸ್ರಾರು ಯಾತ್ರಿಕರನ್ನು ನಾವು ಇಲ್ಲಿ ಕಾಣಬಹುದು. ಹಾಗಾಗಿ ಏಪ್ರಿಲ್ ಮಧ್ಯ ಭಾಗದಿಂದ ನವೆಂಬರ್ ಮಧ್ಯಭಾಗದವರೆಗೆ ಇರುವ ಸಮಯವು ಇಲ್ಲಿಗೆ ಭೇಟಿಕೊಡಲು ಅತ್ಯುತ್ತಮ ಅವಧಿಯಾಗಿರುತ್ತದೆ.

ಪಹಲ್ಗಾಂಗೆ ಭೇಟಿಕೊಟ್ಟಾಗ ಇಲ್ಲಿ ಸ್ಥಳೀಯವಾಗಿ ತಯಾರಿಸಲ್ಪಟ್ಟ ಸಾಂಪ್ರದಾಯಿಕ ಮಾದರಿಯ ನೆಲಹಾಸು, ಶಾಲು ಮತ್ತು ಬಟ್ಟೆಬರೆಗಳನ್ನು ಕೊಳ್ಳಲು ಮರೆಯಬೇಡಿ.

ಪಹಲ್ಗಾಂಗೆ ವಿಮಾನ, ರೈಲು ಮತ್ತು ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು.

ಪಹಲ್ಗಾಂ ಪ್ರಸಿದ್ಧವಾಗಿದೆ

ಪಹಲ್ಗಾಂ ಹವಾಮಾನ

ಪಹಲ್ಗಾಂ
-4oC / 25oF
 • Partly cloudy
 • Wind: ENE 14 km/h

ಉತ್ತಮ ಸಮಯ ಪಹಲ್ಗಾಂ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪಹಲ್ಗಾಂ

 • ರಸ್ತೆಯ ಮೂಲಕ
  ಪಹಲ್ಗಾಂ ದೆಹಲಿಯಿಂದ 868 ಕಿ.ಮೀ ಮತ್ತು ಶ್ರೀನಗರದಿಂದ 95 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ರಾಷ್ಟ್ರೀಯ ಹೆದ್ದಾರಿ 1A ಮೂಲಕ ಜಮ್ಮು ಕಾಶ್ಮೀರವನ್ನು ತಲುಪಬಹುದು. ಪ್ರವಾಸಿಗರಿಗೆ ರಾಜ್ಯ ಸರ್ಕಾರದ ಮತ್ತು ಖಾಸಗಿ ಬಸ್ಸುಗಳು ಶ್ರೀನಗರದಿಂದ ಪಹಲ್ಗಾಂಗೆ ತಲುಪಲು ನೆರವಾಗುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪಹಲ್ಗಾಂಗೆ ಅತ್ಯಂತ ಸಮೀಪದ ರೈಲು ನಿಲ್ದಾಣವನ್ನು ಹೊಂದಿದೆ. ಇದು ಇಲ್ಲಿಂದ 90 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿ ಮತ್ತು ಬಸ್ಸುಗಳ ಮೂಲಕ ಕೈಗೆಟುಕುವ ದರದಲ್ಲಿ ಪಹಲ್ಗಾಂ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಶ್ರೀನಗರ್ ವಿಮಾನ ನಿಲ್ದಾಣವು ಪಹಲ್ಗಾಂಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದು ಇಲ್ಲಿಂದ 95 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ದೆಹಲಿಯೊಂದಿಗೆ ಉತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ. ಇದು ಮುಂಬೈ ಮತ್ತು ಜಮ್ಮುವಿನಂತಹ ಪ್ರಮುಖ ವಿಮಾನ ನಿಲ್ದಾಣಗಳ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳ ಮೂಲಕ ಪಹಲ್ಗಾಂಗೆ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
22 May,Wed
Return On
23 May,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 May,Wed
Check Out
23 May,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 May,Wed
Return On
23 May,Thu
 • Today
  Pahalgam
  -4 OC
  25 OF
  UV Index: 2
  Partly cloudy
 • Tomorrow
  Pahalgam
  -6 OC
  20 OF
  UV Index: 2
  Partly cloudy
 • Day After
  Pahalgam
  -4 OC
  24 OF
  UV Index: 2
  Partly cloudy