ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿರುವ ಹಜನ್ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಪಹಲ್ಗಾಂಗೆ ಸಮೀಪದಲ್ಲಿದ್ದು, ಇಲ್ಲಿ ಹಲವಾರು ಬಾಲಿವುಡ್ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ. ಸಮುದ್ರ ಮಟ್ಟದಿಂದ 1556 ಮೀಟರ್ ಎತ್ತರದಲ್ಲಿರುವ ಈ ಸ್ಥಳದಲ್ಲಿ ಪ್ರವಾಸಿಗರು ಚಂದನ್ವಾರಿ ಯಿಂದ ಪಹಲ್ಗಾಂಗೆ ಸಾಗುವ ಹಾದಿಯಲ್ಲಿ ಕಾಣಸಿಗುವ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಚಂದನ್ವರಿ ಕಣಿವೆಯಿಂದ ಕುದುರೆಗಳನ್ನು ಬಾಡಿಗೆಗೆ ಪಡೆದು ಇಲ್ಲಿಗೆ ತಲುಪಬಹುದು.