Search
  • Follow NativePlanet
Share
ಮುಖಪುಟ » ಸ್ಥಳಗಳು» ಪಠಾನ್‍ಕೋಟ್

ಪಠಾನ್‍ಕೋಟ್ : ಒಂದು ಉತ್ತಮ ಪ್ರವಾಸಿ ತಾಣ

8

ಪಠಾನ್‍ಕೋಟ್ ಜಿಲ್ಲೆಯ ಪ್ರಧಾನ ಜಿಲ್ಲಾ ಕಾರ್ಯಾಲಯವಾಗಿರುವ ಪಠಾನ್‍ಕೋಟ್ ನಗರವು ಪಂಜಾಬ್ ರಾಜ್ಯದ ಮಹಾನಗರಗಳಲ್ಲಿ ಒಂದಾಗಿದೆ. ಕಂಗ್ರಾ ಹಾಗು ಡಾಲ್‍ಹೌಸಿಯ ಪರ್ವತಗಳ ಕೆಳ ತುದಿಯಲ್ಲಿ ನೆಲೆಸಿರುವ ಈ ನಗರವು ಹಿಮಾಲಯ ಪರ್ವತ ಶ್ರೇಣಿಗಳಿಗೆ ಹೆಬ್ಬಾಗಿಲಾಗಿ ಕಾರ್ಯ ನಿರ್ವಹಿಸುತ್ತದೆ. ಹಿಮಾಲಯಕ್ಕೆ ಹೊರಡುವ ಪ್ರವಾಸಿಗರು ಮೊದಲು ಇಲ್ಲಿಯೆ ತಂಗುತ್ತಾರೆ. 1849 ರ ಮುಂಚೆ ಪಠಾನ್‍ಕೋಟ್ ಪಠಾನಿಯಾ ಆಡಳಿತಗಾರರ ರಾಜಧಾನಿಯಾಗಿದ್ದ ನುರ್ಪುರ್ ನ ಭಾಗವಾಗಿತ್ತು.

ಪಠಾನ್‍ಕೋಟ್ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಪಠಾನ್‍ಕೋಟ್ ಸುತ್ತ ಮುತ್ತ ಹಲವು ಆಕರ್ಷಣೀಯ ಸ್ಥಳಗಳಿದ್ದು ಇಲ್ಲಿನ ಪ್ರವಾಸೋದ್ಯಮಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಿವೆ. 900 ಕ್ಕೂ ಅಧಿಕ ವರ್ಷಗಳ ಹಿಂದೆ ಪಠಾನಿಯಾ ರಜಪೂತರಿಂದ ನಿರ್ಮಿಸಲಾದ ನುರ್ಪುರ್ ಕೋಟೆ, ಶಹಾಪುರ್‍ಕಂಡಿ ಕೋಟೆ, ಶಿವನ ದೇವಾಲಯ ಹಾಗು ಕಥಗಡ್ ಮತ್ತು ಜುಗಿಯಲ್ ಟಾವ್ನ್ ಶಿಪ್ ಇಲ್ಲಿನ ಕೆಲವು ಹೆಸರಿಸಬಹುದಾದ ಆಕರ್ಷಣೆಗಳು. ಜ್ವಾಲಾಜಿ ಮತ್ತು ಚಿಂತಪೂರ್ಣಿ, ಪ್ರವಾಸಿಗರು ಪಠಾನ್‍ಕೋಟ್ ನಲ್ಲಿದ್ದಾಗ ಹೋಗಬಹುದಾದ ಇತರೆ ರಜಾ ತಾಣಗಳು.

ಪಠಾನ್‍ಕೋಟ್‍ನಲ್ಲಿದ್ದಾಗ ಮಾಡಬಹುದಾದ ಚಟುವಟಿಕೆಗಳು

ವರ್ಷಪೂರ್ತಿ ಪ್ರವಾಸಿಗರನ್ನು ಕಾಣುವ ಈ ನಗರವು ತನ್ನಲ್ಲಿ ಹಲವು ಆರಾಮದಾಯಕ ಹೋಟೆಲುಗಳನ್ನು ಹೊಂದಿದ್ದು, ರುಚಿಕರವಾದ ಆಹಾರ್ ಖಾದ್ಯಗಳನ್ನು ಒದಗಿಸುತ್ತದೆ. ನಗರದ ಒಳಗೆ ಹಾಗು ಹೊರವಲಯದಲ್ಲಿರುವ ಧಾಬಾಗಳಲ್ಲಿ ಉತ್ತರಭಾರತ ಹಾಗು ಪಂಜಾಬಿ ಶೈಲಿಯ ಖಾದ್ಯಗಳನ್ನು ಸವಿಯಬಹುದು. ಇನ್ನುಳಿದಂತೆ ಖರೀದಿ ಪ್ರಿಯರಿಗೂ ಪಠಾನ್‍ಕೋಟ್ ಒಂದು ಉತ್ತಮ ಸ್ಥಳವಾಗಿದೆ. ಮಿಶನ್ ರೋಡ್, ಸುಜನ್ಪುರ್ ಮಾರ್ಕೇಟ್ ಮತ್ತು ಗಾಂಧಿ ಚೌಕ್ ಇಲ್ಲಿರುವ ಪ್ರಖ್ಯಾತ ಮಾರುಕಟ್ಟೆ ಪ್ರದೇಶಗಳು. ಇಲ್ಲಿನ ನೆನಪನ್ನು ಸದಾ ಹಸಿರಾಗಿಡಲು ಕೊಂಡುಕೊಳ್ಳಲೇಬೇಕಾದ ಒಂದು ವಸ್ತುವೆಂದರೆ ಪಶ್ಮಿನಾ ಶಾಲು. ಈ ಶಾಲುಗಳಿಗೆ ಈ ತಾಣ ತುಂಬಾ ಪ್ರಸಿದ್ಧ.  

ತಲುಪುವ ಬಗೆ

ರೈಲು ಹಾಗು ಬಸ್ಸುಗಳ ಮೂಲಕ ಪಠಾನ್‍ಕೋಟ್ ಭಾರತದ ಇತರೆ ಭಾಗಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಪಠಾನ್‍ಕೋಟ್ ಹಾಗು ಚಕ್ಕಿ ಬ್ಯಾಂಕ್ ಎಂಬ ಎರಡು ರೈಲು ನಿಲ್ದಾಣಗಳು ಇಲ್ಲಿದ್ದು ಚಕ್ಕಿ ಬ್ಯಾಂಕ್ ನಿಲ್ದಾಣವು ನಗರದಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿದೆ. ಪಠಾನ್‍ಕೋಟ್ ಬಸ್ ನಿಲ್ದಾಣವು ರೈಲು ನಿಲ್ದಾಣದ ಬಳಿಯಲ್ಲಿಯೆ ಇದ್ದು ಶಿಮ್ಲಾ, ದೆಹಲಿ, ಚಂದೀಗಡ್‍ನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸುತ್ತದೆ.

ಭೇಟಿ ನೀಡಲು ಸೂಕ್ತ ಸಮಯ

ದೇಶದ ಉತ್ತರ ಭಾಗದಲ್ಲಿ ನೆಲೆಸಿರುವ ಈ ನಗರವು ವಿಪರೀತ ಹವಾಗುಣವನ್ನು ಹೊಂದಿದೆ. ಅತಿ ಶಾಖಮಯ ಬೇಸಿಗೆ, ತೇವಭರಿತ ಮಳೆಗಾಲ ಹಾಗು ಹೆಪ್ಪುಗಟ್ಟಿಸುವಂತಹ ಚಳಿಗಾಲವನ್ನು ಇಲ್ಲಿ ಕಾಣಬಹುದು. ಅಕ್ಟೋಬರ್ ಹಾಗು ನವಂಬರ್ ಸಮಯವು ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ.

ಪಠಾನ್‍ಕೋಟ್ ಪ್ರಸಿದ್ಧವಾಗಿದೆ

ಪಠಾನ್‍ಕೋಟ್ ಹವಾಮಾನ

ಪಠಾನ್‍ಕೋಟ್
15oC / 59oF
  • Sunny
  • Wind: ENE 11 km/h

ಉತ್ತಮ ಸಮಯ ಪಠಾನ್‍ಕೋಟ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪಠಾನ್‍ಕೋಟ್

  • ರಸ್ತೆಯ ಮೂಲಕ
    ಪಠಾನ್‍ಕೋಟ್‍ನಲ್ಲಿರುವ ಬಸ್ ನಿಲ್ದಾಣದ ಹೆಸರು ಮಹಾರಾಣಾ ಪ್ರತಾಪ್. ಇತ ಒಬ್ಬ ಪ್ರಮುಖ ರಜಪೂತ ದೊರೆ. ಹಿಮಾಚಲ ಸಾರಿಗೆ ಸಂಸ್ಥೆ, ಪಂಜಾಬ್ ಸಾರಿಗೆ ಸಂಸ್ಥೆ, ಹರಿಯಾಣ ಮತ್ತು ಜಮ್ಮು ಕಾಶ್ಮೀರಗಳಿಂದ ನಿರಂತರ ಬಸ್ ಸೇವೆ ಇಲ್ಲಿಗಿದೆ. ಅಲ್ಲದೆ ಖಾಸಗಿ ಬಸ್ಸುಗಳು ಕೂಡ ಇಲಿಗೆ ತಲುಪಲು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪಠಾನ್‍ಕೋಟ್ ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ. ಒಂದು ಪಠಾನ್‍ಕೋಟ್ ಮತ್ತೊಂದು ಚಕ್ಕಿ ಬ್ಯಾಂಕ್. ಈ ನಗರವು ಉತ್ತರ ಭಾರತದ ಹಲವು ಪ್ರಖ್ಯಾತ ನಗರಗಳಿಗೆ ಹೆಬ್ಬಾಗಿಲಿನಂತಿರುವುದರಿಂದ ದೇಶದ ಪ್ರಮುಖ ಭಾಗಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಐಶಾರಾಮಿ ರೈಲಾದ 'ಕಂಗ್ರಾ ಕ್ವೀನ್' ಸಹ ಇಲ್ಲಿಂದ ಹಾದು ಹೋಗುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪಠಾನ್‍ಕೋಟ್ ವಿಮಾನ ನಿಲ್ದಾಣವು ಬಹುತೇಕವಾಗಿ ಭಾರತೀಯ ವಾಯು ಪಡೆಯಿಂದ ಬಳಸಲ್ಪಡುತ್ತದಾದರೂ, ನಾಗರಿಕರ ಅನುಕೂಲಕ್ಕೆಂದು ದೆಹಲಿ ಹಾಗು ಕುಲ್ಲುಗಳಿಂದ ಕೆಲವು ವಿಮಾನ ಹಾರಾಟಗಳಿವೆ. ಇನ್ನು ಇದಕ್ಕೆ ತಲುಪಲು ಬಳಸಬಹುದಾದ ಹತ್ತಿರದ ವಿಮಾನ ನಿಲ್ದಾಣವೆಂದರೆ ಅಮೃತಸರ್. ಇದು ಪಠಾನ್‍ಕೋಟ್ ನಿಂದ 108 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಪಠಾನ್‍ಕೋಟ್ ತಲುಪಲು ಟ್ಯಾಕ್ಸಿ ಅಥವಾ ಕ್ಯಾಬ್ ಲಭ್ಯವಿರುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Feb,Tue
Return On
20 Feb,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Feb,Tue
Check Out
20 Feb,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Feb,Tue
Return On
20 Feb,Wed
  • Today
    Pathankot
    15 OC
    59 OF
    UV Index: 6
    Sunny
  • Tomorrow
    Pathankot
    11 OC
    53 OF
    UV Index: 4
    Moderate or heavy rain shower
  • Day After
    Pathankot
    11 OC
    52 OF
    UV Index: 1
    Moderate or heavy rain shower