ಈ ಸಂಶೋಧನಾ ಕೇಂದ್ರದಲ್ಲಿ ಪ್ರದರ್ಶಿಸಲಾದ ವೈವಿಧ್ಯಮಯ ಆಣೆಕಟ್ಟುಗಳ ಮಾದರಿಗಳು ಮತ್ತು ನೀರಾವರಿ ಯೋಜನೆಗಳ ಮಾದರಿಗಳಿಂದಾಗಿ ಇದು ಪ್ರಸಿದ್ಧವಾಗಿದೆ. ಈ ಮಾದರಿಗಳು ನಿರ್ಮಾಣ ಹಂತದ ತಾಂತ್ರಿಕ ಕುಶಲತೆಗಳನ್ನು ಪ್ರದ್ರ್ಶಿಸುವುದರಲ್ಲಿ ಯಶಸ್ವಿಯಾಗಿದ್ದು, ಭೇಟಿ ನೀಡಿದವರಿಗೆ ದಂಗು ಬಡಿಯುವಂತೆ ಮಾಡುತ್ತದೆ. ಈ ಕೇಂದ್ರವು ಮಲಿಕ್ಪುರ್ ನಲ್ಲಿದ್ದು, ಪಠಾನ್ಕೋಟ್ನಿಂದ ಕೇವಲ ಏಳು ಕಿ.ಮೀ ದೂರದಲ್ಲಿದೆ. ಆಸಕ್ತಿಭರಿತ ಪ್ರವಾಸಿಗರಿಗೆ ಮಾದರಿಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಒದಗಿಸಲಾಗುತ್ತದೆ.