Search
  • Follow NativePlanet
Share
ಮುಖಪುಟ » ಸ್ಥಳಗಳು » ಪಠಾನ್‍ಕೋಟ್ » ಆಕರ್ಷಣೆಗಳು » ಮುಕ್ತೇಶ್ವರ ದೇವಸ್ಥಾನ

ಮುಕ್ತೇಶ್ವರ ದೇವಸ್ಥಾನ, ಪಠಾನ್‍ಕೋಟ್

1

ಪಠಾನ್‍ಕೋಟ್ ನಗರದಿಂದ 21 ಕಿ.ಮೀ ದೂರದಲ್ಲಿ ನೆಲೆಸಿರುವ ಮುಕ್ತೇಶ್ವರ ದೇವಾಲಯವು ಪಂಜಾಬಿನಲ್ಲಿರುವ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಬಿಳಿ ಅಮೃತ ಶಿಲೆಯಿಂದ ಮಾಡಲಾದ ಲಿಂಗವು ತಾಮ್ರದ ಯೋನಿಯಲ್ಲಿ ಸ್ಥಿತವಾಗಿದೆ. ಈ ದೇವಾಲಯದಲ್ಲಿ ವಿಷ್ಣು, ಪಾರ್ವತಿ ದೇವಿ ಹಾಗು ಗಣೇಶನ ವಿಗ್ರಹಗಳನ್ನೂ ಕಾಣಬಹುದು. ಪಾಂಡವರು ಅಜ್ಞಾತವಾಸದಲ್ಲಿ ಈ ಗುಹೆಯಲ್ಲಿ ತಂಗಿದ್ದು, ಶಿವನಿಗೆ ಗೌರವ ಸೂಚಕವಾಗಿ ಈ ದೇವಾಲಯವನ್ನು ನಿರ್ಮಿಸಿದರು ಎಂಬ ಐತಿಹ್ಯವಿದೆ.

ಈ ದೇವಾಲಯದ ಹಿಂಬದಿಯಲ್ಲಿ ಹರಿಯುವ ರಾವಿ ನದಿ ಹಾಗು ಬೆಟ್ಟಗುಡ್ಡಗಳು ಒಟ್ಟಾರೆಯಾಗಿ ಇಲ್ಲಿನ ಪರಿಸರವನ್ನು ಸುಂದರಮಯವಾಗಿ ಮಾಡುತ್ತವೆ. ಈ ದೇವಾಲಯವನ್ನು ಮುಕೇಸ್ರನ್ ಮಂದಿರ್ ಎಂಬ ನಾಮದಿಂದಲೂ ಗುರುತಿಸುತ್ತಾರೆ. 'ಮುಕೇಸ್ರನ್ ದಾ ಮೇಲಾ' ಎಂಬ ಉತ್ಸವವನ್ನು ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಬೈಸಾಖಿ ದಿನದಂದು ಆಚರಿಸುತ್ತಾರೆ. ಕೆವಲ ಪಂಜಾಬ್ ರಾಜ್ಯ ಮಾತ್ರವಲ್ಲದೆ ಸುತ್ತಮುತ್ತಲಿರುವ ಜಮ್ಮು, ಕಾಶ್ಮೀರ್ ಹಾಗು ಹಿಮಾಚಲ ಪ್ರದೇಶಗಳಿಂದಲೂ ಭಕ್ತಾರ್ಥಿಗಳನ್ನು ಈ ದೇವಾಲಯ ಉತ್ಸವ ಹಾಗು ಶಿವರಾತ್ರಿಯ ದಿನದಂದು ಆಕರ್ಷಿಸುತ್ತದೆ. ಈ ತಾಣದ ಕುರಿತು ಇನ್ನೊಂದು ಕೌತುಕದ ವಿಷಯವೆಂದರೆ ಇಲ್ಲಿ ಹರಿದಿರುವ ರಾವಿ ನದಿಯ ಎಡ ದಂಡೆಯು ಪಂಜಾಬ್ ರಾಜ್ಯದಲ್ಲಿದ್ದರೆ, ಬಲ ದಂಡೆಯು ಜಮ್ಮು ಮತ್ತು ಕಾಶ್ಮೀರ್ ರಾಜ್ಯವಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue