Search
 • Follow NativePlanet
Share
ಮುಖಪುಟ » ಸ್ಥಳಗಳು» ಕಪುರ್ಥಾಲಾ

ಕಪುರ್ಥಾಲಾ: ಅರಮನೆ ಮತ್ತು ಉದ್ಯಾನಗಳ ನಗರಿ

25

ಅರಮನೆ ಮತ್ತು ಉದ್ಯಾನಗಳ ನಗರಿ ಕಪುರ್ಥಾಲಾ, ಕಪುರ್ಥಾಲಾ ಜಿಲ್ಲೆಯ ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಜೈಸಲ್ಮೇರ್ ನ ರಜಪೂತ್ ಘರಾನಾ ವಂಶಸ್ಥ ರಾಣಾ ಕಪೂರ್ 11 ನೇ ಶತಮಾನದಲ್ಲಿ ಈ ಸ್ಥಳವನ್ನು ರಚಿಸಿದ ಮೇಲೆ ಇದಕ್ಕೆ ಕಪುರ್ಥಾಲಾ ಎಂಬ ಹೆಸರು ಬಂದಿತು. ಇಲ್ಲಿನ ಸಂಪದ್ಭರಿತ ಇತಿಹಾಸ ಮತ್ತು ಅಮೋಘವಾದ ಸಂಸ್ಕೃತಿ ಖಂಡಿತವಾಗಿಯೂ ಪ್ರವಾಸಿಗನೊಬ್ಬನ ಗಮನ ಸೆಳೆಯುತ್ತದೆ.

ಕಪುರ್ಥಾಲಾದ ಪ್ರವಾಸಿ ತಾಣಗಳು

ಕಪುರ್ಥಲಾ ಜಿಲ್ಲೆ ಹಲವು ಆಕರ್ಷಣೆಗಳನ್ನು ತನ್ನೊಳಗಿಟ್ಟುಕೊಂಡು ಇತಿಹಾಸ ಮತ್ತು ಸಂಸ್ಕ್ರತಿಯ ವರ್ಣನೀಯ ದರ್ಶನ ಮಾಡಿಸುತ್ತದೆ. ಪಂಚ ಮಂದಿರ, ಕಂಜಲಿ ವೆಟ್ ಲ್ಯಾಂಡ್ಸ್ ಮತ್ತು ಜಗತಜಿತ್ ಅರಮನೆ(ಅತ್ಯಂತ ವಿಶೇಷವಾದ ವಾಸ್ತುಶೈಲಿಯ ಪ್ರಾಕಾರ)ಗುರುದ್ವಾರ್ ಬೀರ್ ಸಾಹೇಬ್ ಮತ್ತು ಪುಷ್ಪಾ ಗುಜ್ರಾಲ್ ವಿಜ್ನಾನ ನಗರ ಮುಂತಾದವುಗಳನ್ನು ಇಲ್ಲಿ ಭೇಟಿ ಮಾಡಬಹುದು.

ಕಪುರ್ಥಾಲಾದಿಂದ ಅತ್ಯಂತ ಕಡಿಮೆ ದೂರದಲ್ಲಿ ಹಲವು ನಗರಗಳು ಮತ್ತು ಪಟ್ಟಣಗಳನ್ನು ಪ್ರವಾಸಿಗರು ದರ್ಶಿಸಬಹುದು. ಪಂಜಾಬಿನಲ್ಲಿಯೇ ಅತ್ಯಂತ ಪ್ರಸಿದ್ದ ಪ್ರವಾಸಿ ತಾಣವಾದ ಜಲಂದರ್ ನಗರ ಕಪುರ್ಥಾಲಾದಿಂದ ಕೇವಲ 21ಕಿಮೀ ದೂರದಲ್ಲಿದೆ. ಅಮೃತಸರ್, ಹೋಶಿಯಾರ್ ಪುರ, ಗುರುದಾಸಪುರ, ಫಿರೋಝ್ಪುರ ಮತ್ತು ನವಾನಶಹರ್ ಗಳು ಪ್ರವಾಸಿಗರು ಭೇಟಿ ಮಾಡಬಹುದಾದ ಇನ್ನುಳಿದ ಪ್ರದೇಶಗಳು.

ಹೋಳಿ, ದಿವಾಲಿ, ಲೋಹ್ರಿ ಮತ್ತು ಹಲವಾರು ಹಬ್ಬಗಳನ್ನು ಸಂತಸ ಸಡಗರದಿಂದ ಆಚರಿಸಲಾಗುತ್ತದೆ. ಬೈಸಾಖಿ- ಅಂದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರುವ ವೈಶಾಖ- ಪ್ರತಿ ವರ್ಷ ಏಪ್ರಿಲ್ 13 ರಂದು ಆಚರಿಸಲಾಗುವ ಕಪುರ್ಥಾಲಾದ ಪ್ರಮುಖ ಹಬ್ಬ. ಬೈಸಾಖಿ ಹಬ್ಬ ಕಷ್ಟದ ದಿನಗಳ ಸಂಕೇತ. ಿದರ ಜೊತೆಗೆ ಹಲವಾರು ಫ್ರೆಂಚ್ ಮತ್ತು ಇಂಡೋ ಸಾರ್ಸೆನಿಕ್ ವಾಸ್ತುಶೈಲಿಯ ರಚನೆಗಳು ಕಪರ್ಥಾಲಾ ಪ್ರವಾಸೋದ್ಯಮದ ಒಳನೋಟವನ್ನು ತೋರಿಸುತ್ತವೆ.

ಪ್ರಶಸ್ತ ಸಮಯ

ಕಪುರ್ಥಾಲಾವನ್ನು ಭೇಟಿ ಮಾಡಲು ಅಕ್ಟೋಬರ್ ನಿಂದ ಮಾರ್ಚ್ ಪ್ರಶಸ್ತ ಸಮಯ. ಈ ಸಮಯದಲ್ಲಿ ಪ್ರವಾಸಿಗರು ಕೇವಲ ವಾತಾವರಣವನ್ನು ಇಷ್ಟಪಡುವುದರ ಜೊತೆಗೆ ಹಬ್ಬದ ಸಮಯವನ್ನೂ ಇಷ್ಟಪಡುತ್ತಾರೆ.

ಕಪುರ್ಥಾಲಾ ಪ್ರಸಿದ್ಧವಾಗಿದೆ

ಕಪುರ್ಥಾಲಾ ಹವಾಮಾನ

ಉತ್ತಮ ಸಮಯ ಕಪುರ್ಥಾಲಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಪುರ್ಥಾಲಾ

 • ರಸ್ತೆಯ ಮೂಲಕ
  ಕಪುರ್ಥಾಲಾ ನಗರ ಜಲಂಧರ್ ಫಿರೋಜ್ ಪುರ ರಸ್ತೆಯಲ್ಲಿದೆ. ರಾಜ್ಯ ಸರ್ಕಾರಿ ಮತ್ತು ಖಾಸಗಿ ಬಸ್ ಸೌಕರ್ಯಗಳಿವೆ. ಜೊತೆಗೆ ಟ್ಯಾಕ್ಸಿ ಸೌಲಭ್ಯವೂ ಇದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕಪುರ್ಥಾಲಾದಲ್ಲಿ ರೈಲ್ವೇ ನಿಲ್ದಾಣವಿದ್ದು ಜಲಂಧರ್ ನಿಲ್ದಾಣ ಇಲ್ಲಿಂದ 22.5ಕಿಮೀ ದೂರದಲ್ಲಿದೆ. ಜಲಂಧರ್ ರೈಲ್ವೇ ನಿಲ್ದಾಣಕ್ಕೆ ಪಂಜಾಬ್ ಮತ್ತು ದೇಶದ ವಿವಿಧ ಭಾಗಗಳಿಂದ ರೈಲ್ವೇ ಸಂಪರ್ಕವಿದೆ. ಜಲಂಧರ್ ನಿಂದ ಕಪುರ್ಥಾಲಾಕ್ಕೆ ಬಸ್ ಸೌಕರ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಹತ್ತಿರದ ವಿಮಾನ ಸಂಪರ್ಕವೆಂದರೆ ಅಮೃತಸರದ ರಾಜಾ ಸಾನ್ಸಿ ಅಂತರಾಷ್ಟ್ರೀಯ ಏರ್ಪೋರ್ಟ್. ಕಪುರ್ಥಾಲಾದಿಂದ ಇದು ಸುಮಾರು 82ಕಿಮೀ ದೂರದಲ್ಲಿದೆ. ಏರ್ ಇಂಡಿಯಾ, ಇಂಡಿಯನ್ ಏರ್ ಲೈನ್ಸ್, ಇಂಡಿಗೋ ಮತ್ತು ಜೆಟ್ ಏರ್ವೇಯ್ಸ್ ನ ಹಲವು ವಿಮಾನಗಳು ಇಲ್ಲಿ ಹಾರಾಡುತ್ತವೆ. ಅಮೃತಸರದಿಂದ ಬಸ್ ಸೌಕರ್ಯವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
01 Dec,Wed
Return On
02 Dec,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
01 Dec,Wed
Check Out
02 Dec,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
01 Dec,Wed
Return On
02 Dec,Thu