ಬೀರ್ - ಪ್ಯಾರಗ್ಲೈಡರ್ಸ್ ಗಳಿಗೊಂದು ಅದ್ಭುತ ಅವಕಾಶ

ಮುಖಪುಟ » ಸ್ಥಳಗಳು » ಬೀರ್ » ಮುನ್ನೋಟ

ಹಿಮಾಚಲ ಪ್ರದೇಶದ ಅತ್ಯಂತ ಹೆಸರುವಾಸಿಯಾದ ಪ್ರವಾಸಿ ತಾಣ ಬೀರ್ ಆಗಿದೆ. ಇಲ್ಲಿನ ನಿವಾಸಿಗಳು ಪ್ರಮುಖವಾಗಿ ನೆರೆಯ ಟಿಬೆಟಿನಿಂದ ಬಂದ ನಿರಾಶ್ರಿತರಾಗಿದ್ದಾರೆ. ಈ ಪ್ರದೇಶವು ಅನೇಕ ಧಾರ್ಮಿಕ ಶಿಕ್ಷಣಕ್ಕೆ ಹೆಸರುವಾಗಿಯಾಗಿದ್ದು ಇಲ್ಲಿ ಡೀರ್ ಪಾರ್ಕ್ ಇನ್ಸ್ ಟಿಟ್ಯೂಟ್ ಹಾಗೂ ಧರ್ಮಾಲಯ ಇನ್ಸ್ ಟಿಟ್ಯೂಟ್ ಇದೆ.

ಶೈಕ್ಷಣಿಕ ಕೇಂದ್ರಗಳಲ್ಲದೆ ಸಾಹಸ ಕ್ರೀಡೆಗಳಿಗೂ ಬೀರ್ ಜನಪ್ರಿಯತೆಯನ್ನು ಹೊಂದಿದೆ. 'ಭಾರತದ ಪ್ಯಾರಾ ಗ್ಲೈಡಿಂಗ್ ಕ್ಯಾಪಿಟಲ್' ಎಂದೇ ಗುರುತಿಸಲ್ಪಡುವುದರಿಂದ ಈ ಪ್ರದೇಶದಲ್ಲಿ ಅನೇಕ ಪ್ಯಾರಾ ಗ್ಲೈಡಿಂಗ್ ಕ್ರೀಡಾ ತರಬೇತಿ ಕೇಂದ್ರಗಳಿವೆ. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಪ್ರಾಸೋದ್ಯಮ ಇಲಾಖೆ, ಸ್ಥಳೀಯ ವಿಮಾನಯಾನ ಕೇಂದ್ರ ಹಾಗೂ ಹಿಮಾಚಲ ಪ್ರದೇಶ ಸರ್ಕಾರದ ಸಹಯೋಗದೊಂದಿಗೆ 'ಪ್ಯಾರಾ ಗ್ಲೈಡಿಂಗ್ ಫ್ರೀ ವಲ್ಡ್ ಕಪ್' ಕ್ರೀಡೆಯನ್ನು ಇಲ್ಲಿ ನಡೆಸಲಾಗುತ್ತದೆ. ಈ ಜಾಗತಿಕ ಪ್ಯಾರಾ ಗ್ಲೈಡಿಂಗ್ ಸ್ಪರ್ಧೆ ಅನೇಕ ಪ್ರವಾಸಿಗರನ್ನು ಈ ಸಂದರ್ಭದಲ್ಲಿ ತನ್ನತ್ತ ಸೆಳೆಯುತ್ತದೆ.

ಪ್ರವಾಸಿಗರು ತಮ್ಮ ಸಾಹಸದ ಹವ್ಯಾಸಕ್ಕಾಗಿ ಮತ್ತೊಂದು ಅವಕಾಶ ಇಲ್ಲಿದೆ, ಅದೇನೆಂದರೆ ಹ್ಯಾಂಗ್-ಗ್ಲೈಡಿಂಗ್. 1980 ರಲ್ಲಿ ಇದನ್ನು ಇಲ್ಲಿ ಪರಿಚಯಿಸಲಾಯಿತು, ಈ ಕ್ರೀಡೆ ಇಲ್ಲಿ ದಿನದಿಂದ ದಿನಕ್ಕೆ ಭಾರಿ ಜನಪ್ರೀಯತೆಯನ್ನು ಹೊಂದುತ್ತಿದೆ. 1984 ರಿಂದ ಬೀರ್ ಮೂರು ಅಂತಾರಾಷ್ಟ್ರೀಯ ಹಾಗೂ ಐದು ರಾಷ್ಟ್ರೀಯ ಮಟ್ಟದ ಹ್ಯಾಂಗ್-ಗ್ಲೈಡಿಂಗ್ ಕ್ರೀಡಾ ಕೂಟ ನಡೆಸಿದೆ. ಈ ಕ್ರೀಡೆಗೆ ಸಂಬಂಧಿಸಿದ ತರಬೇತಿಯನ್ನು ಹಿಮಾಚಲ ಪ್ರದೇಶ ಪ್ರವಾಸ ಇಲಾಖೆ ಅಥವಾ ಹೆಚ್.ಟಿ.ಡಿ.ಸಿ ಹಮ್ಮಿಕೊಳ್ಳುತ್ತದೆ.

ಪ್ರವಾಸಿಗರು ಇತರ ಪ್ರವಾಸಿ ತಾಣಗಳಾದ ಚಿಕ್ಲಿಂಗ್ ಗೋಂಪಾ, ಬೀರ್ ಟೀ ಫ್ಯಾಕ್ಟರಿ ಹಾಗೂ ಟಿಬೇಟಿಯನ್ ಕಾಲೋನಿಯನ್ನೂ ಭೇಟಿ ಮಾಡಬಹುದು. ನೈಸರ್ಗಿಕ ಸೌಂದರ್ಯವನ್ನು ಇಷ್ಟ ಪಡುವ ಪ್ರವಾಸಿಗರು ಹಾಗೇ ಒಂದು ವಾಕ್ ಹೋದರೆ ಸಾಕು.. ಮನಸ್ಸಿಗೆ ಹಿತವಾಗುವುದು ಗ್ಯಾರಂಟಿ.

ಈ ಜನಪ್ರಿಯ ಸ್ಥಳವನ್ನು ಸಂಚಾರಿ ವ್ಯವಸ್ಥೆಗಳ ಮೂಲಕ ಸುಲಭವಾಗಿ ತಲುಪಬಹುದು. ಸುಮಾರು 150 ಕಿ.ಮೀ.ದೂರದಲ್ಲಿರುವ ಪಠಾನ್ ಕೋಟ್ ಏರ್ ಪೋರ್ರ್ಟ್ ಬೀರ್ ನಗರಕ್ಕೆ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ. ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೀರ್ ನಗರಕ್ಕೆ ಸಮೀಪದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

ಪಠಾನ್ ಕೋಟ್ ರೈಲು ನಿಲ್ದಾಣವೇ ಬೀರ್ ನಗರಕ್ಕೆ ಸಮೀಪವಿರುವ ರೈಲು ನಿಲ್ದಾಣವಾಗಿದೆ. ನವದೆಹಲಿ ಹಾಗೂ ಚಂಡೀಘಡ ನಗರಗಳಿಂದ ಬೀರ್ ನಗರ ತಲುಪಲು ಪ್ರವಾಸಿಗರಿಗೆ ಅನೇಕ ಬಸ್ ಹಾಗೂ ಇತರೆ ವಾಹನಗಳ ಸೌಕರ್ಯವಿದೆ.

ಇಡಿ ವರ್ಷ ಈ ಪ್ರದೇಶದಲ್ಲಿ ಹಿತವಾಗಿರುವುದರಿಂದ ಪ್ರವಾಸಿಗರು ಇಲ್ಲಿಗೆ ತಮಗೆ ಅನುಕೂಲವಾದ ದಿನಗಳಲ್ಲಿ ಭೇಟಿ ನೀಡಬಹುದು.

Please Wait while comments are loading...