Search
  • Follow NativePlanet
Share
ಮುಖಪುಟ » ಸ್ಥಳಗಳು » ಬೀರ್ » ಹವಾಮಾನ

ಬೀರ್ ಹವಾಮಾನ

ಪ್ರವಾಸಿಗರು ವರ್ಷದ ಯಾವುದೇ ಕಾಲದಲ್ಲಿ ಬೇಕಾದರೂ ಈ ಪ್ರದೇಶಕ್ಕೆ ಭೇಟಿ ನೀಡ ಬಹುದು.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್): ಈ ಪ್ರದೇಶದಲ್ಲಿ ಬೇಸಿಗೆಯು ಏಪ್ರಿಲ್ ತಿಂಗಳಿನಿಂದ ಆರಂಭವಾಗಿ ಜೂನ್ ವರೆಗೆ ಮುಂದುವರೆಯಯುತ್ತದೆ. ಈ ದಿನಗಳಲ್ಲಿ ಗರಿಷ್ಠ 38 ಡಿಗ್ರಿ ಹಾಗೂ ಕನಿಷ್ಠ 25 ಡಿಗ್ರಿ ಸೆಲ್ಶಿಯಸ್ ತಾಪಮಾನವಿರುತ್ತದೆ. ಈ ಸಮಯದಲ್ಲಿ ಶೆಕೆ ಹೆಚ್ಚಾಗಿದ್ದು ಮೇ ತಿಂಗಳಲ್ಲಂತೂ ವಿಪರೀತ ಶೆಕೆ ಇರುತ್ತದೆ.

ಮಳೆಗಾಲ

(ಜುಲೈ ನಿಂದ ಸೆಪ್ಟೆಂಬರ್): ಬೀರ್ ನಗರದಲ್ಲಿ ಮಳೆಗಾಲ ಜುಲೈ ತಿಂಗಳಿನಿಂದ ಪ್ರಾರಂಭವಾಗಿ ಸೆಪ್ಟಂಬರ್ ವರೆಗೂ ಇರುತ್ತದೆ. ಮಳೆಗಾಲದಲ್ಲಿ ಈ ಪ್ರದೇಶದ ಹವಾಮಾನದಲ್ಲಿ ಆರ್ದ್ರತೆ ಹೆಚ್ಚಾಗಿದ್ದು ವಾತಾವರಣ ತಂಪಾಗಿರುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ): ಪ್ರತಿ ವರ್ಷ ಡಿಸೆಂಬರ್ ತಿಂಗಳಿನಿಂದ ಬೀರ್ ನಗರದಲ್ಲಿ ಚಳಿಗಾಲ ಆರಂಭವಾಗಿ ಫೆಬ್ರವರಿ ವರೆಗೂ ಚಳಿ ಇರುತ್ತದೆ. ಈ ದಿನಗಳಲ್ಲಿ ಹವಾಮಾನ ಕನಿಷ್ಠ 0 ಡಿಗ್ರಿಗೆ ತಲುಪುತ್ತದೆ ಹೆಚ್ಚೆಂದರೆ ಸುಮಾರು 20 ಡಿಗ್ರಿಗೆ ಬರಬಹುದು ಅಷ್ಟೆ. ಕೆಲವೊಮ್ಮೆ ಹಿಮವೂ ಸುರಿಯುತ್ತದೆ. ಇದರ ಅನುಭವವೂ ಹಿತವಾಗಿರುತ್ತದೆ. ಈ ಕಾಲದಲ್ಲಿ ಪ್ರವಾಸಕ್ಕೆ ಬರಲು ಬಯಸುವವರು ಬೆಚ್ಚನೆಯ ಬಟ್ಟೆಗಳನ್ನು ತರುವುದಕ್ಕೆ ಮರೆಯಬಾರದು.