Search
 • Follow NativePlanet
Share
ಮುಖಪುಟ » ಸ್ಥಳಗಳು» ಜಲಿಯನ್‍ವಾಲಾ ಬಾಗ್

ಜಲಿಯನ್ ವಾಲಾ ಬಾಗ್ - ಹುತಾತ್ಮರ ಪ್ರತಿಧ್ವನಿಯಂತಿರುವ ಸ್ಥಳ

8

ಜಲಿಯನ್ ವಾಲಾ ಬಾಗ್ ಎನ್ನುವ ಹೆಸರು ಪ್ರತೀ ಭಾರತೀಯರನ್ನು ಬೆಚ್ಚಿ ಬೀಳಿಸುವಂತಹ ಹೆಸರು, ಬ್ರಿಟಿಷರ ಕಾಲದಲ್ಲಿ ನಡೆದ ನರಮೇಧವೇ ಇದಕ್ಕಿರುವ ಕಾರಣ. ಸುಮಾರು ಆರುವರೆ ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಜಲಿಯನ್ ವಾಲಾ ಬಾಗ್ ಈಗ ಸಾರ್ವಜನಿಕ ಉದ್ಯಾನವನವಾಗಿದ್ದು ಭಕ್ತಿ ಪರವಶತೆಗೆ ಹೆಸರಾಗಿರುವ ಪಂಜಾಬಿನ ಅಮೃತಸರ ನಗರದಲ್ಲಿದೆ. ರಾಷ್ಟೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದಿರುವ ಈ ಸ್ಮಾರಕ ಸ್ಥಳವನ್ನು ಪಂಜಾಬ್ ರಾಜ್ಯೋತ್ಸವದ ದಿನವಾದ 13 ಎಪ್ರಿಲ್, 1961ರಂದು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಉದ್ಘಾಟಿಸಿದ್ದರು. ಸ್ಥಳಕ್ಕೆ ಚಾರಿತ್ರಿಕ ಇತಿಹಾಸವಿದ್ದು, ಜಲಿಯನ್ ವಾಲಾ ಬಾಗ್, ರಾಜ್ಯಕ್ಕೆ ಭೇಟಿ ನೀಡುವ ಎಲ್ಲಾ ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತದೆ.   

ಜಲಿಯನ್ ವಾಲಾ ಬಾಗ್ ನಲ್ಲಿನ ನರಮೇಧ

ಜಲಿಯನ್ ವಾಲಾ ಬಾಗ್ ಎನ್ನುವ ಹೆಸರೇ ಪ್ರತೀ ಭಾರತೀಯರ ದೇಶಭಕ್ತಿಯನ್ನು ಬಡಿದೆಬ್ಬಿಸುತ್ತದೆ, ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಡೆದ ಭೀಕರ ದುರಂತ  ಕಳೆದು ಹೋದ ನೆನಪನ್ನು ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತದೆ. ಇದೇ ಸ್ಥಳದಲ್ಲಿ ಬ್ರಿಟಿಷರ ಭೂಸೇನಾ ಮುಖ್ಯಸ್ಥನಾಗಿದ್ದ ಜನರಲ್ ಡೇರ್ ಮತ್ತು ಆತನ ಸೈನಿಕರು, ಸಾರ್ವಜನಿಕ ಸಭೆಗೆ ಬಂದಿದ್ದ ಮತ್ತು ಶಾಂತಿಯುತವಾಗಿ ನಡೆಯುತ್ತಿದ್ದ ಸಭೆಯಲ್ಲಿ ಭಾಗವಹಿಸಿದ್ದ ಪುರುಷರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಗುಂಡಿನ ಸುರಿಮಳೆಗೈದಿದ್ದರು. ಈ ದುರ್ಘಟನೆ ಎಪ್ರಿಲ್ 13, 1919 ರಂದು ನಡೆದಿತ್ತು, ಇದರ ಪರಿಣಾಮ ಸುಮಾರು ನೂರಕ್ಕೂ ಹೆಚ್ಚು ಮುಗ್ದ ಭಾರತೀಯರು ಪ್ರಾಣ ತೆರಬೇಕಾಯಿತು.

ಜಲಿಯನ್ ವಾಲಾ ಬಾಗ್ ದುರ್ಘಟನೆಯಲ್ಲಿ ಮಡಿದ ಹುತಾತ್ಮರ ಸ್ಮರಣೆ

1961 ರಲ್ಲಿ ಅಮೃತಸರದಲ್ಲಿ ಹುತಾತ್ಮರಾದವರ ಗೌರವಾರ್ಥ ಕಟ್ಟಡವನ್ನು ಕಟ್ಟಲಾಯಿತು, ಇದು 1919 ರಲ್ಲಿ ಬ್ರಿಟಿಷರ ಅನಾಗರಿಕ ವರ್ತನೆಯಿಂದ ಗುಂಡಿನ ದಾಳಿಯಿಂದ ಮೃತ ಪಟ್ಟವರಿಗಾಗಿ ನಿರ್ಮಿಸಲಾಗಿದೆ. ಇಂದಿಗೂ ಗುಂಡಿನ ದಾಳಿಯ ನಿಶಾನೆಗಳನ್ನು ಈ ಉದ್ಯಾನವನದ ಗೋಡೆಯಲ್ಲಿ ಕಾಣಬಹುದಾಗಿದೆ, ಇದು ಅಂದು ನಡೆದ ನರಮೇಧದ ನೆನಪನ್ನು ಸ್ಮರಿಸುವಂತೆ ಮಾಡುತ್ತದೆ. ಇದರ ಹೊರಗಿರುವ ಬಾವಿಗೆ ಹಲವಾರು ಭಾರತೀಯರು ಗುಂಡಿನ ದಾಳಿಯಿಂದ ತಪ್ಪಿಸಿ ಕೊಳ್ಳಲು ಜಿಗಿದು, ಮುಳುಗಿದ ಬಾವಿಯೂ ಉದ್ಯಾನವನದ ಒಳಗಿದೆ.

ಉದ್ಯಾನವನದ ಪ್ರವೇಶ ದ್ವಾರದಲ್ಲಿ ಸಣ್ಣ ಹಲಗೆಯ ಟಿಪ್ಪಣಿ ಪುಸ್ತಕವಿದ್ದು ಇತಿಹಾಸದ ವಿವರಗಳನ್ನು ನೀಡುತ್ತದೆ. ಉದ್ಯಾನವನದ ಇನ್ನೊಂದು ಭಾಗದಲ್ಲಿ ’ಸ್ವಾತಂತ್ರ್ಯದ ಜ್ವಾಲೆ’ಯಿದ್ದು, ಹೊರಗಿನ ಜ್ವಾಲೆ ಅಂದು ಜಲಿಯನ್ ವಾಲಾ ಬಾಗ್ ನಲ್ಲಿ ನಡೆದ ದುರ್ಘಟನೆಯಲ್ಲಿ ಮಡಿದವರ ನೆನಪಿಗಾಗಿ. ಜಲಿಯನ್ ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಈ ಉದ್ಯಾನವನದ ಮೇಲ್ವಿಚಾರಣೆ ತೆಗೆದು ಕೊಂಡಿದ್ದು ಪ್ರತೀದಿನ ಸಾರ್ವಜನಿಕರ ದರ್ಶನಕ್ಕೆ ಬೇಸಿಗೆ ಕಾಲದಲ್ಲಿ ಬೆಳಗ್ಗೆ ಆರರಿಂದ ರಾತ್ರಿ ಒಂಬತ್ತರವರೆಗೆ ಮತು ಚಳಿಗಾಲದಲ್ಲಿ ಬೆಳಗ್ಗೆ ಏಳರಿಂದ ರಾತ್ರಿ ಎಂಟರವರೆಗೆ ತೆರೆದಿರುತ್ತದೆ. ಜಲಿಯನ್ ವಾಲಾ ಬಾಗ್ ವೀಕ್ಷಿಸಲು ಬರುವ ಆಸಕ್ತರು ಹತ್ತಿರದ ಸ್ವರ್ಣ ಮಂದಿರ ಮತ್ತು ವಾಘಾ ಬೋರ್ಡರ್ ಅನ್ನೂ ವೀಕ್ಷಿಸಬಹುದಾಗಿದೆ.   

ಜಲಿಯನ್ ವಾಲಾ ಬಾಗ್ ತಲುಪುವುದು ಹೇಗೆ

ಜಲಿಯನ್ ವಾಲಾ ಬಾಗ್ ತಲುಪಲು ಪ್ರವಾಸಿಗರು ಒಂದೋ ಶ್ರೀ. ಗುರು ರಾಮದಾಸ್ ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬರ ಬೇಕಾಗುತ್ತದೆ, ಇಲ್ಲವೇ ಅಮೃತಸರ ರೈಲ್ವೇ ನಿಲ್ದಾಣಕ್ಕೆ ಹೋಗಬೇಕಾಗುತ್ತದೆ. ವಿಶ್ವವಿಖ್ಯಾತ ಸ್ವರ್ಣ ಮಂದಿರಕ್ಕೆ ಕಾಲ್ನಡಿಗೆಯ ದೂರದಲ್ಲಿರುವ ಈ ಉದ್ಯಾನವನವನ್ನು ಸಾರ್ವಜನಿಕರು ಸಾರಿಗೆ, ಆಟೋರಿಕ್ಷಾ, ಸೈಕಲ್ ರಿಕ್ಷಾ, ಬಸ್ ಅಥವಾ ಬಾಡಿಗೆ ಕಾರಿನ ಮೂಲಕ ನಿರಾಯಾಸವಾಗಿ ತಲುಪಬಹುದು.

ಜಲಿಯನ್ ವಾಲಾ ಬಾಗಿನ ವಾತಾವರಣ

ಜಲಿಯನ್ ವಾಲಾ ಬಾಗ್ ಪ್ರದೇಶವು ಬೇಸಿಗೆ ಮತ್ತು ಚಳಿಗಾಲದಲ್ಲಿ ವಿಪರೀತ ಉಷ್ಣ ಮತ್ತು ಶೀತದ ವಾತಾವರಣದಿಂದ ಕೂಡಿರುತ್ತದೆ. ಆದರೆ ಮಳೆಗಾಲದಲ್ಲಿ ಸರಾಸರಿ ಉಷ್ಣಾಂಶ ಹೊಂದಿರುತ್ತದೆ.

ಜಲಿಯನ್ ವಾಲಾ ಬಾಗಿಗೆ ಭೇಟಿ ನೀಡಲು ಯಾವದು ಸೂಕ್ತ ಸಮಯ

ಈ ಉದ್ಯಾನವನ ವೀಕ್ಷಿಸಲು ವರ್ಷ ಪೂರ್ತಿ ಬರಬಹುದು, ಆದರೆ ಪ್ರವಾಸಿಗರಿಗೆ ಜಲಿಯನ್ ವಾಲಾ ಉದ್ಯಾನವನ ವೀಕ್ಷಿಸಲು ಸೂಕ್ತ ಸಮಯವೆಂದರೆ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ. ಈ ಸಮಯದಲ್ಲಿ ವಾತಾವರಣ ತಣ್ಣಗಿರುತ್ತದೆ. 

ಜಲಿಯನ್‍ವಾಲಾ ಬಾಗ್ ಪ್ರಸಿದ್ಧವಾಗಿದೆ

ಜಲಿಯನ್‍ವಾಲಾ ಬಾಗ್ ಹವಾಮಾನ

ಉತ್ತಮ ಸಮಯ ಜಲಿಯನ್‍ವಾಲಾ ಬಾಗ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಜಲಿಯನ್‍ವಾಲಾ ಬಾಗ್

 • ರಸ್ತೆಯ ಮೂಲಕ
  ಜಲಿಯನ್ ವಾಲಾ ಬಾಗ್ ತಲುಪಲು ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ ಒಂದರ ಮೂಲಕ ತಲುಪಬಹುದು, ಇದು ಪ್ರಮುಖ ನಗರಗಳಿಗೆ ಸಂಪರ್ಕ ಕೊಂಡಿಯಾಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಜಲಿಯನ್ ವಾಲಾ ಬಾಗ್ ತಲುಪಲು ಹತ್ತಿರದ ರೈಲ್ವೇ ನಿಲ್ದಾಣವೆಂದರೆ ಅಮೃತಸರ ರೈಲ್ವೇ ನಿಲ್ದಾಣ, ಇಲ್ಲಿಗೆ ಭಾರತದ ಪ್ರಮುಖ ಪ್ರದೇಶಗಳಿಂದ ಇಲ್ಲಿಗೆ ರೈಲು ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಜಲಿಯನ್ ವಾಲಾ ಬಾಗಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಅಮೃತಸರ ಅಂತಾರಾಷ್ಟೀಯ ವಿಮಾನ ನಿಲ್ದಾಣ, ಇಲ್ಲಿಗೆ ಭಾರತದ ಪ್ರಮುಖ ನಗರಗಳಿಂದ ವಿಮಾನ ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Nov,Mon
Return On
30 Nov,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Nov,Mon
Check Out
30 Nov,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Nov,Mon
Return On
30 Nov,Tue