Search
 • Follow NativePlanet
Share
ಮುಖಪುಟ » ಸ್ಥಳಗಳು» ಜಲಂಧರ್

ಜಲಂಧರ್ : ಭೇಟಿ ಮಾಡಬಹುದಾದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ನಗರ

24

ಪಂಜಾಬ್ ರಾಜ್ಯದಲ್ಲಿರುವ ಪುರಾತನ, ಶ್ರೀಮಂತ ಇತಿಹಾಸ ಹೊಂದಿರುವ ನಗರ ಜಲಂಧರ್. ಪುರಾಣಗಳ ಪ್ರಕಾರ ಜಲಂಧರ್ ಎನ್ನುವ ಹೆಸರು ದೈವದಿಂದ ಬಂದಿದ್ದು ಎನ್ನಲಾಗಿದೆ ಮತ್ತು ಮಹಾಭಾರತದಲ್ಲಿ ಕೂಡಾ ಇದರ ಉಲ್ಲೇಖನವಿದೆ.  ಹಿಂದಿಯಲ್ಲಿ ಜಲಂಧರ್ ಎಂದರೆ ನೀರಿನಲ್ಲಿ ಮುಳುಗಿರುವ ನಗರವೆಂದು ಅರ್ಥ. ದಂತಕಥೆಯ ಪ್ರಕಾರ, ಈ ನಗರಕ್ಕೆ ಭೌಗೋಳಿಕವಾಗಿ ಬಿಯಾಸ್ ಮತ್ತು ಸಟ್ಲೇಜ್ ನದಿ ನಡುವೆ ಇರುವುದರಿಂದ ಈ ಹೆಸರು ಬಂದಿದೆ ಎನ್ನುವುದು ಇತಿಹಾಸ. ಸ್ವಾತಂತ್ರ್ಯ ಬಂದ ನಂತರ ಅಂದರೆ 1953 ರ ತನಕ ಜಲಂಧರ್ ನಗರವು ಪಂಜಾಬ್ ರಾಜ್ಯದ ರಾಜಧಾನಿಯಾಗಿತ್ತು, ನಂತರ ಚಂಡೀಗಢ ಪಂಜಾಬಿನ ರಾಜಧಾನಿಯಾಯಿತು. ಈ ನಗರವು ಹಲವು ಶ್ರೀಮಂತ ಪಾರಂಪರಿಕ ಸಂಸ್ಕೃತಿಯನ್ನು ಹೊಂದಿದ್ದು ಹಲವಾರು ಪ್ರವಾಸಿ ಸ್ಥಳಗಳನ್ನು ಹೊಂದಿದೆ. ಜಲಂಧರ್ ನಗರವು ಪ್ರವಾಸಿಗರಿಗೆ ಮುದ ನೀಡುವ ನಗರವಾಗಿದೆ.

ಜಲಂಧರ್ ಸುತ್ತಮುತ್ತವಿರುವ ಪ್ರವಾಸಿ ಸ್ಥಳಗಳು

ಜಲಂಧರ್ ನಗರವು ಹಲವಾರು ಪ್ರವಾಸಿ ಸ್ಥಳಗಳನ್ನು ಹೊಂದಿದೆ, ಅದರಲ್ಲಿ ಪ್ರಮುಖವಾಗಿ ಕೋಟೆ, ದೇವಾಲಯ ಮತ್ತು ಮ್ಯೂಸಿಯಂ. ಜಲಂಧರ ಪ್ರವಾಸೋದ್ಯಮದಲ್ಲಿ ನಾವು ಪಟ್ಟಿ ಮಾಡಬಹುದಾದ ಪ್ರಮುಖ ಪ್ರವಾಸಿ ಸ್ಥಳಗಳೆಂದರೆ ಶಿವ ಮಂದಿರ, ತುಳಸಿ ಮಂದಿರ, ದೇವಿ ತುಲಾಬ್ ಮಂದಿರ, ಸೈಂಟ್ ಮೇರಿ ಕ್ಯಾಥಡ್ರಾಲ್ ಚರ್ಚ್, ಪುಷ್ಪ ಗುಜ್ರಾಲ್ ವಿಜ್ಞಾನ ನಗರ, ಭಗತ್ ಸಿಂಗ್ ಮ್ಯೂಸಿಯಂ ಮತ್ತು ವಂಡರ್ ಲ್ಯಾಂಡ್ ಥೀಮ್ ಪಾರ್ಕ್. ಇದಲ್ಲದೇ ಹಲವು ಗುರುದ್ವಾರಗಳೂ ನಗರದ ವಿವಿಧ ಪ್ರದೇಶಗಳಲ್ಲಿದೆ, ಇದೆಲ್ಲವೂ ಕಲೆ ಮತ್ತು ಸಂಸ್ಕೃತಿಯನ್ನು  ಬಿಂಬಿಸುತ್ತದೆ. ಜಲಂಧರ್ ನಗರದಲ್ಲಿ ಹಲವಾರು ಮಾಲ್ ಗಳು, ವ್ಯಾಪಾರೀ ಕೇಂದ್ರಗಳಿದ್ದು ಖರೀದಿ ಮಾಡುವವರಿಗೆ ಖುಷಿ ನೀಡುತ್ತದೆ.

ಜಲಂಧರ್ ತಲುಪುವುದು ಹೇಗೆ?

ಜಲಂಧರ್ ನಗರವು ದೇಶದ ಪ್ರಮುಖ ನಗರಗಳಿಂದ ರೈಲು ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಇದಲ್ಲದೇ ವ್ಯಾಪಕವಾಗಿ ಹರಡಿರುವ ಬಸ್ ವ್ಯವಸ್ಥೆ ಉತ್ತರದ ರಾಜ್ಯಕ್ಕೆ ಉತ್ತಮ ಸಂಪರ್ಕ ಕೊಂಡಿಯಾಗಿದೆ. ಜಲಂಧರ್ ನಗರಕ್ಕಿರುವ ಹತ್ತಿರದ ವಿಮಾನ ನಿಲ್ದಾಣವೆಂದರೆ ರಾಜಾ ಸಾನ್ಸಿ ವಿಮಾನ ನಿಲ್ದಾಣ, ಅಮೃತಸರ (90 ಕಿ.ಮೀ) ಇಲ್ಲಿಗೆ ಭಾರತದ ಇತರ ನಗರಗಳಿಂದ ವಿಮಾನದ ಸೌಲಭ್ಯವಿದೆ.

ಜಲಂಧರ್ ಭೇಟಿ ನೀಡಲು ಯಾವ ಸಮಯ ಸೂಕ್ತ?

ಜಲಂಧರ್ ನಗರದಲ್ಲಿ ಉಷ್ಣ ಮತ್ತು ತೇವಾಂಸದ ವಾತಾವರಣವಿದ್ದು, ಜೊತೆಗೆ ಅತಿಯಾದ ಚಳಿಗಾಲ ಮತ್ತು ಬಿರು ಬೇಸಿಗೆ ಇರುತ್ತದೆ. ಅಕ್ಟೋಬರ್, ನವೆಂಬರ್, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಜಲಂಧರಿಗೆ ಭೇಟಿ ನೀಡುವುದು ಹೆಚ್ಚು ಪ್ರಶಸ್ತ.

ಜಲಂಧರ್ ಪ್ರಸಿದ್ಧವಾಗಿದೆ

ಜಲಂಧರ್ ಹವಾಮಾನ

ಜಲಂಧರ್
33oC / 91oF
 • Sunny
 • Wind: NE 0 km/h

ಉತ್ತಮ ಸಮಯ ಜಲಂಧರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಜಲಂಧರ್

 • ರಸ್ತೆಯ ಮೂಲಕ
  ಜಲಂಧರ್ ನಗರಕ್ಕೆ ಪಂಜಾಬಿನ ಪ್ರಮುಖ ನಗರಗಳಿಂದ ಮತ್ತು ಇತರ ರಾಜ್ಯಗಳಿಂದಲೂ ಬಸ್ ಸೌಲಭ್ಯವಿದೆ. ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿಯ ಬಸ್ಸುಗಳು ಪ್ರಮುಖವಾಗಿ ವೊಲ್ವೋ, ಡಿಲಕ್ಸ್ ಮತ್ತು ಸೆಮಿ ಡಿಲಕ್ಸ್ ಬಸ್ಸಿನ್ನು ಆಯ್ಕೆ ಮಾಡಿಕೊಳ್ಳಬಹುದು..
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಜಲಂಧರ ರೈಲ್ವೆ ನಿಲ್ದಾಣವು ದೆಹಲಿ - ಅಮೃತಸರ ರೈಲ್ವೇ ಹಳಿಯಲ್ಲಿದೆ. ಶತಾಬ್ದಿ, ಜಮ್ಮು ಮೇಲ್ ಸೇರಿದಂತೆ ದೆಹಲಿ ಮತ್ತು ಜಲಂಧರ್ ನಗರಗಳ ನಡುವೆ ಓಡಾಡುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಹತ್ತಿರದ ವಿಮಾನ ನಿಲ್ದಾಣವೆಂದರೆ ರಾಜಾ ಸಾನ್ಸಿ ವಿಮಾನ ನಿಲ್ದಾಣ ಅಮೃತಸರ, ಇದು ಜಲಂಧರ್ ನಗರದಿಂದ 90 ಕಿಲೋಮೀಟರ್ ದೂರದಲ್ಲಿದೆ. ಅಮೃತಸರ ನಿಲ್ದಾಣದಿಂದ ಪ್ರವಾಸಿಗರು ಖಾಸಾಗಿ ಕ್ಯಾಬ್ ಮೂಲಕ ಜಲಂಧರ್ ತಲುಪಬಹುದು. ವಿಮಾನ ನಿಲ್ದಾಣದಿಂದ ಸುಮಾರು 90 ನಿಮಿಷಗಳಲ್ಲಿ ಅಮೃತಸರದಿಂದ ಜಲಂಧರ್ ನಗರಕ್ಕೆ ರಸ್ತೆ ಮೂಲಕ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 Oct,Wed
Return On
24 Oct,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 Oct,Wed
Check Out
24 Oct,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 Oct,Wed
Return On
24 Oct,Thu
 • Today
  Jalandhar
  33 OC
  91 OF
  UV Index: 8
  Sunny
 • Tomorrow
  Jalandhar
  29 OC
  83 OF
  UV Index: 9
  Partly cloudy
 • Day After
  Jalandhar
  28 OC
  83 OF
  UV Index: 9
  Partly cloudy