Search
  • Follow NativePlanet
Share
ಮುಖಪುಟ » ಸ್ಥಳಗಳು » ಜಲಂಧರ್ » ಹವಾಮಾನ

ಜಲಂಧರ್ ಹವಾಮಾನ

ಜಲಂಧರ್ ನಗರಕ್ಕೆ ಭೇಟಿ ನೀಡಲು ಅಕ್ಟೋಬರ್, ನವೆಂಬರ್, ಫೆಬ್ರವರಿ ಮತ್ತು ಮಾರ್ಚ್ ತಿಂಗಳು ಸೂಕ್ತ. ಆ ಸಮಯದಲ್ಲಿ ಹೆಚ್ಚಿ ಬಿಸಿಲೂ ಇಲ್ಲದೇ ಚಳಿಯೂ ಇಲ್ಲದೆ ವಾತಾವರಣ ಪ್ರಶಾಂತವಾಗಿರುತ್ತದೆ. 

ಬೇಸಿಗೆಗಾಲ

(ಎಪ್ರಿಲ್ ನಿಂದ ಜೂನ್) : ಬೇಸಿಗೆ ಕಾಲ ಎಪ್ರಿಲ್ ನಿಂದ ಜೂನ್ ವರೆಗಿರುತ್ತದೆ. ಮೇ, ಜೂನ್ ಮತ್ತು ಜುಲೈ ಮಧ್ಯದ ವರೆಗೆ ಅತಿಯಾದ ಉಷ್ಣಾಂಶ ಹೊಂದಿರುತ್ತದೆ. ಈ ಸಮಯದಲ್ಲಿ ಸರಾಸರಿ ಉಷ್ಣಾಂಶ 30ರಿಂದ 41ಡಿಗ್ರಿಯವರೆಗಿರುತ್ತದೆ.

ಮಳೆಗಾಲ

(ಜುಲೈ ನಿಂದ ಅಕ್ಟೋಬರ್) : ಮಳೆಗಾಲ ಜುಲೈ ನಿಂದ ಸೆಪ್ಟಂಬರ್ ವರೆಗೆ ಜಲಂಧರ್ ನಗರದಲ್ಲಿರುತ್ತದೆ, ಈ ಸಮಯದಲ್ಲಿ ಸರಾಸರಿ ಮಳೆ ಪ್ರಮಾಣ 70 ಸೆಂಟಿಮೀಟರ್ ವರೆಗಿರುತ್ತದೆ. ಮಳೆಗಾಲವು ಕೆಲವು ಬಾರಿ ಸೆಪ್ಟಂಬರ್ ಮಧ್ಯದಿಂದ ನವೆಂಬರ್ ತಿಂಗಳ ಆರಂಭದವರೆಗೂ ಸಾಗಿದ ಉದಾಹರಣೆಗಳಿವೆ.

ಚಳಿಗಾಲ

(ನವೆಂಬರ್ ನಿಂದ ಮಾರ್ಚ್) : ಚಳಿಗಾಲದ ಅವಧಿ ನವೆಂಬರ್ ನಿಂದ ಮಾರ್ಚ್ ತಿಂಗಳಾಂತ್ಯದ ವರೆಗೆ ಇರುತ್ತದೆ. ಜನವರಿ ತಿಂಗಳು ಅತ್ಯಂತ ಚಳಿಯಿಂದ ಕೂಡಿರುತ್ತದೆ, ಆ ಸಮಯದಲ್ಲಿ ಉಷ್ಣಾಂಶ್ ಆರು ಡಿಗ್ರಿಯವರೆಗೂ ಇಳಿಯುತ್ತದೆ.