Search
 • Follow NativePlanet
Share
ಮುಖಪುಟ » ಸ್ಥಳಗಳು» ರೂಪನಗರ

ರೂಪನಗರ  -  ಇಂಡಸ್ ವ್ಯಾಲಿ ನಾಗರೀಕತೆಯ ಸಾಕ್ಷಿ

16

ಮೊದಲಿಗೆ ರೊಪರ್ ಎಂದೇ ಕರೆಯಲ್ಪಡುತ್ತಿದ್ದ ರೂಪನಗರ, ಸಟಲಜ್ ನದಿಯ ಎಡಭಾಗದಲ್ಲಿ, ಉಪಸ್ಥಿತವಿರುವ ಪುರಾತನ ನಗರ. ಈ ನಗರವನ್ನು, 11 ನೇ ಶತಮಾನದಲ್ಲಿ ಆಳಿದ ರಾಜಾ ರೋಕೇಶ್ವರ್ ನ ಮಗನಾದ ರಾಜಾ ರೂಪಸೇನನ ನಂತರ ಹೆಸರಿಸಲಾಗಿದೆ. ಇದು ಇಂಡಸ್ ವ್ಯಾಲಿ ನಾಗರೀಕತೆಯ ನಗರಗಳಲ್ಲಿ, ಒಂದು ಮುಖ್ಯ ನಗರವಾಗಿತ್ತು. ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆ ನಡೆಸಿದ ಸಂಶೋಧನ ಕಾರ್ಯದಲ್ಲಿ, ಸುಮಾರು ಆರು ವಿವಿಧ ಕಾಲದ ನಾಗರೀಕತೆಯ ಅವಶೇಷಗಳು ಲಭ್ಯವಾಗಿದ್ದವು. ಇಲ್ಲಿ ದೊರೆತ ಅವಶೇಷಗಳನ್ನು ಕಾಪಾಡಿ, ಸಂರಕ್ಷಿಸಲು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆ ಒಂದು ವಿಶೇಷವಾದ ಸಂಗ್ರಹಾಲಯವನ್ನು ಕಟ್ಟಿಸಿತು. ಇದು ರೂಪನಗರ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ರೂಪನಗರ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ರಾಜ್ಯದ ಗಡಿ ಭಾಗದ ಸಮೀಪಕ್ಕೆ, ಉಪಸ್ಥಿತವಿರುವ ಇದು, ಪೂರ್ವ ಭಾಗದಲ್ಲಿ ಸಟ್ಲಜ್ ನದಿ ಮತ್ತು ಶಿವಾಲಿಕ ಸಾಲು ಬೆಟ್ಟಗಳ ನಡುವೆ ನೆಲೆಗೊಂಡಿದೆ. ಈ ನಗರವು, ಅನೇಕ ಪ್ರವಾಸಿ ತಾಣಗಳಿಗೆ ಮನೆಯಾಗಿದೆ. ಅವು ಯಾವುವೆಂದರೆ ಆನಂದಪುರ ಸಾಹಿಬ್, ಭಾಕ್ರನಂಗಲ್ ಅಣೆಕಟ್ಟು, ಜತೇಶ್ವರ ಮಹಾದೇವ ಮಂದಿರ, ಕಿರಾತ್ ಪುರ ಸಾಹಿಬ್ ಮುಂತಾದವುಗಳು. ರೂಪನಗರ ಪ್ರವಾಸ ಕೈಗೊಂಡಾಗ, ಪ್ರವಾಸಿಗರು ಸಮೀಪದ ಇತರ ಪ್ರವಾಸಿ ಸ್ಥಳಗಳಿಗೂ ಭೇಟಿ ಕೊಡಬಹುದು. ರೂಪನಗರದಿಂದ ರಾಜ್ಯದ ರಾಜಧಾನಿಯಾಗಿರುವ ಚಂದಿಗಡ್ ಕೆಲವೇ ಗಂಟೆಗಳ ಪ್ರಯಾಣ. ಅಲ್ಲಿ ಪ್ರವಾಸಿಗರು ಹಾಯಾಗಿ ತಂಗಬಹುದು. ಇದನ್ನು ಹೊರತು ಪಡಿಸಿಯೂ ಪ್ರವಾಸಿಗರು, ಅನೇಕ ಪ್ರವಾಸಿ ತಾಣಗಳಾದ ಶಿಮ್ಲಾ(125 ಕಿ.ಮಿ) ಮತ್ತು ಕಸೌಲಿಗೆ (98 ಕಿ.ಮಿ) ಭೇಟಿ ಕೊಡಬಹುದು.

ರೋಚಕತೆಗಳು ಮತ್ತು ಸೌಲಭ್ಯಗಳು

ನಗರದ ನಿವಾಸಿಗಳು ಅನೇಕ ಹಬ್ಬಗಳನ್ನು ಹೆಚ್ಚಿನ ಹುರುಪು ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಇದು ಇಲ್ಲಿನ ಜನರ ಕೋಮು ಸೌಹಾರ್ದತೆಯನ್ನು ಪ್ರತಿಬಿಂಬಿಸುತ್ತದೆ. ಈ ನಗರದಲ್ಲಿ ಹೊಲ್ಲಮೊಹಲ್ಲಾ ಎಂಬ ದೊಡ್ಡ ಹಬ್ಬವನ್ನು ಆಚರಿಸುತ್ತಾರೆ. ಇದನ್ನು, ಪ್ರತಿ ವರ್ಷ ಹೋಲಿ ಹಬ್ಬದ ನಂತರ ಆನಂದಪುರ ಸಾಹಿಬ್ ನಲ್ಲಿ ಆಚರಿಸಲಾಗುತ್ತದೆ. ದೇಶದೆಲ್ಲಡೆ ಇರುವ ಸಿಖ ಸಮುದಾಯದವರು ಮೂರು ದಿವಸಗಳ ಕಾಲ ನಡೆಯುವ ಈ ಜಾತ್ರೆಗೆ ಆಗಮಿಸುತ್ತಾರೆ. ಕಡೆಯ ದಿವಸ ನಿಹಂಗರು ಅಂದರೆ, ಸಿಖ ಯೋಧರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಆಯುಧಗಳನ್ನು ಹಿಡಿದು ಹೋಲಗಡ ಕೋಟೆಯ ಹತ್ತಿರ ನಡೆಯುತ್ತಾರೆ. ಈ ಸಂದರ್ಭದಲ್ಲಿ ಗುಡಾರ ಹೂಡಿಕೆ, ಕತ್ತಿ ವರಸೆ, ಕುದುರೆ ಸವಾರಿಯನ್ನು ಚರಣ ಗಂಗಾದ ಮರಳು ಹಾಸಿಗೆಯಲ್ಲಿ ಪ್ರದರ್ಶಿಸುತ್ತಾರೆ. ಈ ನಗರವು ಅನೇಕ ಹೊಟೆಲ್ ಗಳನ್ನು ಮತ್ತು ರೆಸ್ಟೋರೆಂಟ್ ಗಳನ್ನು ಒಳಗೊಂಡಿದೆ. ಇದರ ಜೊತೆಗೆ, ರಸ್ತೆ ಬದಿಯ ಪಕ್ಕಾ ಪಂಜಾಬಿ ಧಾಬಾಗಳೂ ಲಭ್ಯವಿದೆ. ಈ ಎಲ್ಲಾ ವೈವಿಧ್ಯತೆ, ರೂಪನಗರ ಪ್ರವಾಸೊದ್ಯಮವನ್ನು ಜನಪ್ರಿಯವನ್ನಾಗಿ ಮಾಡಿದೆ.

ರೂಪನಗರವನ್ನು ತಲುಪುವ ಬಗೆ

ರಾಷ್ಟ್ರೀಯ ಹೆದ್ದಾರಿ 21 ರೂಪನಗರದಲ್ಲಿ ಹಾಯುವುದರಿಂದ, ಈ ನಗರವು ಪಂಜಾಬಿನ ಬಹುತೇಕ ಎಲ್ಲಾ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಹಾಗೆ, ರಾಷ್ಟ್ರ ರಾಜಧಾನಿಯಾದ ನವದೆಹಲಿ ಸಹ ನಗರದಿಂದ 297 ಕಿ.ಮಿ ದೂರದಲ್ಲಿದೆ ಮತ್ತು ರಾಜ್ಯದ ರಾಜಧಾನಿಯಾದ ಚಂದಿಗಡ ರೂಪನಗರದಿಂದ 45 ಕಿ.ಮಿ ದೂರದಲ್ಲಿದೆ. ಪ್ರವಾಸಿಗರು ಹತ್ತಿರದ ಅಂತಾರಾಷ್ಟ್ರೀಯ ಹಾಗು ರಾಷ್ಟ್ರೀಯ ಅಂದರೆ, ಕ್ರಮವಾಗಿ ಅಮೃತ್ಸರ ಹಾಗು ಚಂದಿಗಡಿನ ವಿಮಾನನಿಲ್ದಾಣದಿಂದ ವಾಯು ಯಾನದ ಸೌಲಭ್ಯ ಪಡೆದು ಸುಲಭವಾಗಿ ಪ್ರಯಾಣಿಸಬಹುದು. ಭಾರತದ ಅನೇಕ ನಗರಗಳಿಗೆ, ರೂಪನಗರವು ಉತ್ತಮ ಸಂಪರ್ಕ ಹೊಂದಿರುವುದರಿಂದ ಪ್ರವಾಸಿಗರು ರೈಲು ಮಾರ್ಗವಾಗಿ ಕೂಡ ಪ್ರಯಾಣಿಸಬಹುದು.

ರೂಪನಗರಕ್ಕೆ ಭೇಟಿ ಕೊಡಲು ಸೂಕ್ತ ಸಮಯ

ಉತ್ತರ ಭಾರತದ ಇತರ ಪ್ರದೇಶಗಳಂತೆ, ರೂಪನಗರ ಹವಾಮಾನವು ಬೇಸಿಗೆಯಲ್ಲಿ ಸುಡುವ ಬಿಸಿಲು, ಮಳೆಗಾಲದಲ್ಲಿ ಭಾರಿ ಮಳೆ ಹಾಗು ಚಳಿಗಾಲದಲ್ಲಿ ಕೊರೆಯುವ ಚಳಿಯನ್ನು ಹೊಂದಿರುತ್ತದೆ. ಹಾಗಾಗಿ ರೂಪನಗರಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಸೆಪ್ಟೆಂಬರ್ ನಿಂದ ನವೆಂಬರ್ ವರೆಗಿನ ಅವಧಿ.

ರೂಪನಗರ ಪ್ರಸಿದ್ಧವಾಗಿದೆ

ರೂಪನಗರ ಹವಾಮಾನ

ರೂಪನಗರ
16oC / 61oF
 • Clear
 • Wind: ENE 7 km/h

ಉತ್ತಮ ಸಮಯ ರೂಪನಗರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ರೂಪನಗರ

 • ರಸ್ತೆಯ ಮೂಲಕ
  ಹತ್ತಿರದ ನಗರಗಳಿಂದ ರೂಪನಗರಕ್ಕೆ ತಲುಪಲು, ಸರ್ಕಾರಿ ಅಥವಾ ಖಾಸಗಿ ಬಸ್ ಪ್ರಯಾಣ ಸೂಕ್ತ. ಪ್ರವಾಸಿಗರು ಟ್ಯಾಕ್ಸಿ ಅಥವಾ ಕ್ಯಾಬ್ ಮೂಲಕ ನಗರಕ್ಕೆ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಸಾಕಷ್ಟು ರೈಲುಗಳು ರೂಪನಗರ ರೇಲ್ವೆ ನಿಲ್ದಾಣದಿಂದ ಪಂಜಾಬ್ ನಲ್ಲಿರುವ ನಗರಗಳಿಗೆ ಮತ್ತು ಭಾರತದ ಇತರ ನಗರಗಳಿಗೆ ಸಂಪರ್ಕ ಕಲ್ಪಿಸಿಕೊಡುತ್ತದೆ. ನೇರವಾಗಿ ನವದಹಲಿಗೆ ಯುಹೆಚ್ ಎಲ್ ಜನಶತಾಬ್ಧಿಯಿಂದ ಮತ್ತು ಹಿಮಾಚಲ ಪ್ರದೇಶಕ್ಕೆ ಹಿಮಾಚಲ ಎಕ್ಸಪ್ರೆಸ್ ನಿಂದ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪಂಜಾಬ್ ರಾಜ್ಯದಲ್ಲಿ ರೂಪನಗರಕ್ಕೆ ಅತ್ಯಂತ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಮೃತ್ಸರದಲ್ಲಿದೆ. ಸುಮಾರು 200 ಕಿ.ಮಿ ದೂರದಲ್ಲಿರುವುದರಿಂದ ನಾಕು ತಾಸಿಗಿಂತ ಕಡಿಮೆ ಅವಧಿಯಲ್ಲಿ ಇಲ್ಲಿಗೆ ತಲುಪಬಹುದು. ರೂಪನಗರದಿಂದ ಚಂದಿಗಡ ವಿಮಾನ ನಿಲ್ದಾಣ 55 ಕಿ.ಮಿ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
22 Mar,Fri
Return On
23 Mar,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Mar,Fri
Check Out
23 Mar,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Mar,Fri
Return On
23 Mar,Sat
 • Today
  Rupnagar
  16 OC
  61 OF
  UV Index: 5
  Clear
 • Tomorrow
  Rupnagar
  13 OC
  56 OF
  UV Index: 5
  Partly cloudy
 • Day After
  Rupnagar
  16 OC
  60 OF
  UV Index: 6
  Partly cloudy