Search
  • Follow NativePlanet
Share
ಮುಖಪುಟ » ಸ್ಥಳಗಳು » ರೂಪನಗರ » ಹವಾಮಾನ

ರೂಪನಗರ ಹವಾಮಾನ

ರೂಪನಗರಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ, ಸೆಪ್ಟಂಬರ್ ನಿಂದ ನವೆಂಬರ್ ವರೆಗೆ. ಏಕೆಂದರೆ, ಈ ಸಮಯದಲ್ಲಿ ಮುಂಗಾರು ಮುಗಿದಿರುತ್ತದೆ ಹಾಗು ಚಳಿಗಾಲ ಪ್ರರಂಭವಾಗಿರುವುದಿಲ್ಲ. ಈ ಸಂದರ್ಭದಲ್ಲಿ ಅತಿ ಹೆಚ್ಚು ಬಿಸಿಲೂ ಇರುವುದಿಲ್ಲ ಮತ್ತು ಅತಿ ಹೆಚ್ಚು ಚಳಿಯೂ ಇರುವುದಿಲ್ಲ. ವರ್ಷದ ಈ ಭಾಗದಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ನಗರದ ಸಂಸ್ಕೃತಿ  ಮತ್ತು ಸಂಪ್ರದಾಯವನ್ನು ತಿಳಿದುಕೊಳ್ಳಲು ಪ್ರವಾಸಿಕರಿಗೆ ಅನುಕೂಲಕರವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್ ವರೆಗೆ): ಬೇಸಿಗೆಯಲ್ಲಿ ಒಣಹವೆ ಇದ್ದು, ಬಿಸಿಲಿನಿಂದ ಕೂಡಿರುತ್ತದೆ. ಆಗಾಗ್ಗೆ ಮರಳಿನ ಚಂಡಮಾರುತವಾಗುತ್ತದೆ. ಉಷ್ಣಾಂಶ 45 ಡಿಗ್ರೀ ಸೆಲ್ಶಿಯಸ್ ವರೆಗೆ ಏರುವ ಸಾಧ್ಯತೆ ಇರುತ್ತದೆ.

ಮಳೆಗಾಲ

 (ಜುಲೈ ನಿಂದ ಸೆಪ್ಟಂಬರ್ ವರೆಗೆ):ಜೂನ್ ತಿಂಗಳು ಮುಗಿಯುತ್ತಿದ್ದಂತೆ ಮುಂಗಾರು ಶುರುವಾಗುತ್ತದೆ. ಈ ಸಮಯದಲ್ಲಿ ಉಷ್ಣಾಂಶ ಇಳಿದು ರೂಪನಗರದ ಜನರಿಗೆ ನೆಮ್ಮದಿಯನ್ನು ತಂದು ಕೊಡುತ್ತದೆ. ಸೆಪ್ಟಂಬರ್ ತಿಂಗಳ ಮಧ್ಯ ಭಾಗದವರೆಗೆ ಮುಂಗಾರು ಮುಂದುವರೆಯುತ್ತದೆ. ಈ ನಗರವು ಅಂದಾಜು 775.6 ಮಿ.ಮಿ ಮಳೆಯನ್ನು ಕಾಣುತ್ತದೆ. ತೇವಾಂಶ ಹೆಚ್ಚಿರುತ್ತದೆ.

ಚಳಿಗಾಲ

 (ನವೆಂಬರ್ ಮಧ್ಯ ಭಾಗದದಿಂದ ಫೆಬ್ರುವರಿವರೆಗೆ): ರೂಪನಗರದಲ್ಲಿ ಚಳಿಗಾಲದಲ್ಲಿ ಕೊರೆಯುವ ಚಳಿ ಇರುತ್ತದೆ. ಉಷ್ಣಾಂಶವು 4 ಡಿಗ್ರೀ ಸೆಲ್ಶಿಯಸ್ ವರೆಗು ಇಳಿಯುವ ಸಂಭವವಿರುತ್ತದೆ. ಡಿಸೆಂಬರ್ ಮತ್ತು ಜನುವರಿಯಲ್ಲಿ ಅತಿ ಹೆಚ್ಚು ಚಳಿ ಇರುತ್ತದೆ.