ಬಿಯಸ್ ಕುಂಡ, ಮನಾಲಿ

ಬಿಯಸ್ ನದಿಯಿಂದ ಉದ್ಭವಿಸಿದ ಈ ತಾಣ ಬಿಯಸ್ ಕುಂಡ ಅಂತಲೇ ಜನಪ್ರಿಯವಾಗಿದೆ. ಮನಾಲಿಯ ಖಾಯಂ ಪ್ರವಾಸಿ ತಾಣ. ಹಿಂದು ಧರ್ಮೀಯರ ಪ್ರಮುಖ ಸ್ಥಳವಾಗಿದೆ. ಏಕೆಂದರೆ ಇಲ್ಲಿ ಋಷಿ ವ್ಯಾಸರು ಸ್ನಾನ ಮಾಡುತ್ತಿದ್ದರು ಎಂದು ಹೇಳಲಾಗಿದೆ. ವ್ಯಾಸರು ಭಾರತೀಯ ಮಹಾಗ್ರಂಥ ಮಹಾಭಾರತದ ಕರ್ತೃ. ಸ್ಥಳೀಯರ ನಂಬಿಕೆ ಪ್ರಕಾರ, ಈ ಬಿಯಸ್ ಕುಂಡ ನದಿಯ ನೀರಲ್ಲಿ ಮುಳುಗು ಹಾಕಿದರೆ ಯಾವುದೇ ವಿಧದ ಚರ್ಮರೋಗವಿದ್ದರೂ ವಾಸಿಯಾಗುತ್ತದೆ.  ಬಿಯಸ್ ಕುಂಡವು ಇಗ್ಲೂ ಮಾದರಿಯ ಕಲ್ಲಿನಲ್ಲಿ ನಿರ್ಮಾಣವಾಗಿದೆ. ಈ ಕಲ್ಲಿನ ತಳಪಾಯದ ಆಧಾರದ ಮೇಲೆ ಚಾರಣ ಮಾಡುತ್ತ ಫ್ರೆಂಡ್‌ಶಿಪ್‌ ಶೃಂಗ, ಸಿತಿಂದರ್‌ ತಪ್ಪಲು, ಹನುಮಾನ್‌ ಟಿಬ್ಬಾ ತಪ್ಪಲು, ಲಡಾಖಿ ತಪ್ಪಲುಗಳಿಗೆ ತೆರಳಬಹುದು.

Please Wait while comments are loading...