Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ರು » ಹವಾಮಾನ

ರೋಹ್ರು ಹವಾಮಾನ

ಮಾರ್ಚ್‌‌ನಿಂದ ನವೆಂಬರಿನ ಅವಧಿಯಲ್ಲಿ ರೋಹ್ರುವಿಗೆ ಹೋಗುವುದು ಸೂಕ್ತ. ಈ ಅವಧಿಯಲ್ಲಿ ವಾತಾವರಣವು ಬೆಚ್ಚಗಿರುತ್ತದೆ. ಹ್ಯಾಂಗ್‌ ಗ್ಲೈಡಿಂಗ್‌, ಮೀನು ಹಿಡಿಯುವುದು, ಪ್ಯಾರಾಗ್ಲೈಡಿಂಗ್‌ ಮತ್ತು ರಿವರ‍್ ರಾಫ್ಟಿಂಗ್‌ನಂತಹ ಸಾಹಸ ಕ್ರೀಡೆಗಳಿಗೆ ಈ ವಾತಾವರಣ ಸೂಕ್ತ. ಡಿಸೆಂಬರಿನಿಂದ ಫೆಬ್ರುವರಿಯ ಅವಧಿಯಲ್ಲಿ ವಿಪರೀತ ಚಳಿಯಿರುವುದರಿಂದ ಬಾಹ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಅಸಾಧ್ಯ.

ಬೇಸಿಗೆಗಾಲ

(ಮಾರ್ಚ್‌‌ನಿಂದ ಜೂನ್‌) : ರೋಹ್ರುವಿನ ಬೇಸಿಗೆಗಾಲವು ಅತ್ಯಂತ ಚಿಕ್ಕದಾಗಿದ್ದು ಮಾರ್ಚ್‌‌ನಿಂದ ಜೂನ್‌ ತನಕ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣವು 14 ಡಿಗ್ರಿಯಿಂದ 20 ಡಿಗ್ರಿಯ ತನಕ ಇರುತ್ತದೆ. ಇದೇವೇಳೆ ಗರಿಷ್ಠ ತಾಪಮಾನವು 25 ಡಿಗ್ರಿಯ ತನಕ ದಾಖಲಾಗಿದೆ. ಇದೇ ಕಾರಣಕ್ಕೆ ಇಲ್ಲಿನ ವಾತಾವರಣವು ಪ್ರವಾಸಿಗರಿಗೆ ಸೂಕ್ತವಾಗಿದೆ.

ಮಳೆಗಾಲ

(ಜುಲೈನಿಂದ ಅಕ್ಟೋಬರ‍್ ) : ಜುಲೈನಲ್ಲಿ ರೋಹ್ರು ಪ್ರಾಂತ್ಯದಲ್ಲಿ ಮಳೆಗಾಲದ ಲಕ್ಷಣಗಳು ಕಂಡುಬರುತ್ತವೆ. ಒಮ್ಮೆ ಮಳೆ ಆರಂಭವಾದರೆ ಅಕ್ಟೋಬರಿನವರೆಗೂ ಹದವಾಗಿ ಮಳೆ ಸುರಿಯುತ್ತದೆ. ಈ ಪ್ರದೇಶದಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆ ಆಗುತ್ತದೆ. ಹೀಗಾಗಿ ಮಳೆಯಿಂದ ರಕ್ಷಿಸಿಕೊಳ್ಳಲು ಸೂಕ್ತ ರೈನ್‌ಕೋಟ್‌ಗಳನ್ನೋ ಅಥವಾ ಇನ್ನಿತರ ವಸ್ತುಗಳನ್ನು ಒಯ್ಯಲು ಸಲಹೆ ಮಾಡಲಾಗಿದೆ. ಈ ಅವಧಿಯಲ್ಲಿ ಹಚ್ಚ ಹಸಿರು ಪರಿಸರ ಹಾಗೂ ಆಹ್ಲಾದಕರ ವಾತಾವರಣವನ್ನು ಅನುಭವಿಸಬಹುದು.

ಚಳಿಗಾಲ

(ನವೆಂಬರಿನಿಂದ ಫೆಬ್ರುವರಿ ) : ರೋಹ್ರುವಿನಲ್ಲಿ ನವೆಂಬರಿನಿಂದ ಫೆಬ್ರವರಿ ಅವಧಿಯಲ್ಲಿ ಚಳಿಗಾಲವಿರುತ್ತದೆ. ಈ ಅವಧಿಯಲ್ಲಿ ವಾತಾವರಣದ ತಾಪಮಾನವು -7 ಡಿಗ್ರಿಯ ತನಕ ಇಳಿಯುತ್ತದೆ. ಇದೇ ವೇಳೆ ಗರಿಷ್ಠ ತಾಪಮಾನವು 10 ಡಿಗ್ರಿಯ ತನಕ ದಾಖಲಾಗಿದೆ. ಈ ರೀತಿಯ ವಾತಾವರಣವು ಚಳಿಯನ್ನು ಇಷ್ಟಪಡುವ ಪ್ರವಾಸಿಗರಿಗೆ ಮಾತ್ರ ಸೂಕ್ತವಾಗಿರುತ್ತದೆ.