Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ರು » ಆಕರ್ಷಣೆಗಳು » ಹತ್ಕೋಟಿ

ಹತ್ಕೋಟಿ, ರೋಹ್ರು

3

ಹತ್ಕೋಟಿಯು ಶಿಮ್ಲಾದಿಂದ 105 ಕಿ.ಮೀ ವ್ಯಾಪ್ತಿಯಲ್ಲಿರುವ ಸುಂದರ ಹಳ್ಳಿ. ಪಬ್ಬರ‍್ ನದಿಯ ದಡದಲ್ಲಿ, ಸಮುದ್ರ ಮಟ್ಟದಿಂದ ಸುಮಾರು 1100 ಮೀ. ಎತ್ತರದಲ್ಲಿ ಈ ಹಳ್ಳಿಯಿದೆ, ಎರಡು ತೊರೆಗಳಾದ ಬಿಶ್ಕುಲ್ತಿ ಮತ್ತು ರಾನ್ವತಿಗಳು ಹತ್ಕೋಟಿಯಲ್ಲಿ ಪಬ್ಬರ‍್ ಆಗಿ ಸೇರುತ್ತವೆ. ಇಲ್ಲಿ ನದಿಯ ನೀರು ಕಂದು ಬಣ್ಣದಲ್ಲಿರುತ್ತದೆ. ಐತಿಹ್ಯಗಳ ಪ್ರಕಾರ, ಇಲ್ಲಿಂದ ನೀರು ವಿಷವನ್ನು ನೀಗಿ ಹೊರಬರುತ್ತದೆ ಎಂದು ನಂಬಲಾಗಿದೆ. ಮೂರು ನದಿಗಳು ಇಲ್ಲಿ ಸೇರುವುದರಿಂದ ಹಿಂದೂಗಳಿಗೆ ಇದೊಂದು ಪವಿತ್ರ ಸ್ಥಳವಾಗಿದೆ. ಹಿಂದೂ ಪುರಾಣಗಳ ಪ್ರಕಾರ, ಈ ಸ್ಥಳಕ್ಕೆ ಧಾರ್ಮಿಕ ಪ್ರಾಮುಖ್ಯತೆಯೂ ಇದೆ. ಈ ಸ್ಥಳದಲ್ಲಿ ಶಿವ ಮತ್ತು ಆತನ ಪತ್ನಿ ಪಾರ್ವತಿ ಜಗಳವಾಡಿದ್ದರಂತೆ.

ಪ್ರವಾಸಿಗರು ಇಲ್ಲಿ ಸುಂದರವಾದ ಮರದ ಬಾಗಿಲುಗಳನ್ನು ಹೊಂದಿರುವ ದೇವಸ್ಥಾನಗಳನ್ನು ನೋಡಬಹುದು. ಈ ಬಾಗಿಲುಗಳು ಮತ್ತು ಕಲ್ಲಿನ ಗೋಡೆಗಳು ಜನರ ಕಲಾತ್ಮಕ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ದೇವಸ್ಥಾನದಿಂದಾಗಿ ಹತ್ಕೋಟಿಗೆ ಕಲ್ಲಿನ ದೇವಾಲಯಗಳ ಕಣಿವೆ ಎಂಬ ಹೆಸರು ಬಂದಿದೆ. ಚಾರಣ, ಪರ್ವತಾರೋಹಣ ಮತ್ತು ರಾಫ್ಟಿಂಗ್‌ಗಳು ಹತ್ಕೋಟಿಯ ಜನಪ್ರಿಯ ಕ್ರೀಡೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed