ಚನ್ಸಾಲ್ ಶ್ರೇಣಿಯು ಸಮುದ್ರ ಮಟ್ಟದಿಂದ ಸುಮಾರು 4520 ಮೀ. ಎತ್ತರದಲ್ಲಿ ದೋದ್ರಾ ಕವಾರ್ ಕಣಿವೆಯಲ್ಲಿದೆ.
ಇಲ್ಲಿನ ಕೆಲವು ಪರ್ವತಗಳ ಎತ್ತರವು ಸುಮಾರು 5200 ಮೀವರೆಗೂ ಇದೆ. ಸಾಹಸ ಪ್ರವೃತ್ತಿಯ ಪ್ರವಾಸಿಗರಿಗೆ ಇದು ಸೂಕ್ತ ತಾಣ ಹಾಗೂ ಈ ಸ್ಥಳ ಸ್ಲೋಪ್ ಸ್ಕೀಯಿಂಗ್ಗೆ ಪ್ರಸಿದ್ಧವಾದದ್ದು. ಇಲ್ಲಿ ಸ್ಕೀಯಿಂಗ್ನ ಜನಪ್ರಿಯತೆಯನ್ನು ಪರಿಗಣಿಸಿದ ಹಿಮಾಚಲ ಪ್ರದೇಶ ಸರ್ಕಾರವು ಒಂದು ಸ್ಕೀ ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದೆ.
ಈ ಸ್ಥಳವು ಮೇ ಮತ್ತು ಅಕ್ಟೋಬರ್ ತಿಂಗಳ ಅವಧಿಯಲ್ಲಿ ಮಾತ್ರ ಪ್ರವಾಸಿಗರಿಗೆ ತೆರೆದಿರುತ್ತದೆ. ಉಳಿದ ಅವಧಿಯಲ್ಲಿ ಮಂಜಿನ ಕಾರಣದಿಂದ ಮುಚ್ಚಿರುತ್ತದೆ.