ಶಿಕ್ರು ದೇವತಾ ದೇವಸ್ಥಾನವು ಹಿಂದೂ ದೇವಸ್ಥಾನ. ರೋಹ್ರುವಿನಲ್ಲಿರುವ ಅತ್ಯಂತ ಪ್ರಮುಖ ದೇವಸ್ಥಾನವಿದು. ನಗರದ ಮಧ್ಯ ಭಾಗದಲ್ಲಿರುವುದರಿಂದಾಗಿ ಸುಲಭವಾಗಿ ಕಾಣುತ್ತದೆ. ಹೀಗಾಗಿ ಶಿಕ್ರು ದೇವತಾ ದೇವಸ್ಥಾನವನ್ನು ವರ್ಷದ ಯಾವುದೇ ಸಮಯದಲ್ಲೂ ಭೇಟಿ ಮಾಡಬಹುದು. ಏಪ್ರಿಲ್‌ನಲ್ಲಿ ಇಲ್ಲೊಂದು ಹಬ್ಬವನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಪ್ರವಾಸಿಗರು/ಭಕ್ತರು ಇಲ್ಲಿ ಆಗಮಿಸುತ್ತಾರೆ.