Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್‌ಖೈ » ಹವಾಮಾನ

ಕೊಟ್‌ಖೈ ಹವಾಮಾನ

ಕೊಟ್‌ಖೈಗೆ ತಮ್ಮ ಪ್ರಯಾಣ ಮಾಡಲು ಬಯಸುವ ಪ್ರವಾಸಿಗರು ಮಳೆಗಾಲದ ಹೊರತಾಗಿ ಇನ್ಯಾವುದೇ ಕಾಲದಲ್ಲೂ ಹೋಗಬಹುದು.

ಬೇಸಿಗೆಗಾಲ

(ಏಪ್ರಿಲ್‌ನಿಂದ ಜೂನ್‌) : ಏಪ್ರಿಲ್‌ನಿಂದ ಜೂನ್‌ ತಿಂಗಳಿನ ವರೆಗೆ ಬೇಸಿಗೆ ಕಾಲವಿರುತ್ತದೆ. ಈ ಅವಧಿಯಲ್ಲಿ ಉಷ್ಣಾಂಶವು 15 ಡಿಗ್ರಿಯಿಂದ 28 ಡಿಗ್ರಿಯವರೆಗೆ ತುಯ್ದಾಡುತ್ತದೆ. ಈ ಪ್ರದೇಶದ ಉಷ್ಣಾಂಶವು ಮೇ ತಿಂಗಳಿನಲ್ಲಿ ಅತ್ಯಂತ ಹೆಚ್ಚಿರುತ್ತದೆ. ಪ್ರವಾಸಿಗರು ಬೇಸಿಗೆಕಾಲದಲ್ಲೇ ಪ್ರಯಾಣ ಮಾಡಲು ಸೂಚಿಸಲಾಗಿದೆ, ಯಾಕೆಂದರೆ ಈ ಅವಧಿಯಲ್ಲಿ ಧನಾತ್ಮಕ ವಾತಾವರಣವಿರುತ್ತದೆ.

ಮಳೆಗಾಲ

(ಜುಲೈನಿಂದ ಸಪ್ಟೆಂಬರ‍್) : ಕೊಟ್‌ಖೈನಲ್ಲಿ ಜುಲೈನಿಂದ ಸಪ್ಟೆಂಬರ್‌ವರೆಗೆ ಮಳೆಗಾಲವಿರುತ್ತದೆ. ಈ ಅವಧಿಯಲ್ಲಿ ತೇವಾಂಶ ಹೆಚ್ಚಿರುತ್ತದೆ. ಈಶಾನ್ಯ ಮಾರುತ ಇಲ್ಲಿ ಯಥೇಚ್ಛವಾಗಿ ಮಳೆಯ ಮಾರುತವನ್ನು ಹೊತ್ತು ತರುತ್ತದೆ.

ಚಳಿಗಾಲ

(ನವೆಂಬರಿನಿಂದ ಫೆಬ್ರುವರಿ): ನವೆಂಬರ್‌ ತಿಂಗಳಲ್ಲಿ ಚಳಿಗಾಲ ಆರಂಭವಾಗಿ ಫೆಬ್ರವರಿಯಲ್ಲಿ ಕೊನೆಗೊಳ್ಳುತ್ತದೆ. ಚಳಿಗಾಲದ ಗರಿಷ್ಟ ತಾಪಮಾನ 15 ಡಿಗ್ರಿ, ಕನಿಷ್ಟ ತಾಪಮಾನ 4 ಡಿಗ್ರಿ ಇರುತ್ತದೆ.