Search
  • Follow NativePlanet
Share
ಮುಖಪುಟ » ಸ್ಥಳಗಳು » ರೈಸನ್ » ಹವಾಮಾನ

ರೈಸನ್ ಹವಾಮಾನ

ರೈಸನ್‌ಗೆ ಪ್ರಯಾಣ ಮಾಡಲು ಸೂಕ್ತ ಅವಧಿಯೆಂದರೆ ಬೇಸಿಗೆ. ಈ ಅವಧಿಯಲ್ಲಿ ವಾತಾವರಣವು ಪ್ರಶಾಂತವಾಗಿರುತ್ತದೆ. ಪ್ರವಾಸಿಗರು ವಿವಿಧ ಸಾಹಸಿ ಕ್ರೀಡೆಗಳಾದ ವೈಟ್‌ ರಿವರ್ ರಾಫ್ಟಿಂಗ್‌ ಮತ್ತು ಚಾರಣದಂತಹ ಚಟುವಟಿಕೆಗಳನ್ನು ನಡೆಸಬಹುದು.

ಬೇಸಿಗೆಗಾಲ

(ಏಪ್ರಿಲ್‌ನಿಂದ ಜೂನ್‌) : ರೈಸನ್‌ನಲ್ಲಿ ಬೇಸಿಗೆಕಾಲವು ಏಪ್ರಿಲ್‌ ನಿಂದ ಜೂನ್‌ ವರೆಗೆ ಇರುತ್ತದೆ. ಈ ಅವಧಿಯಲ್ಲಿ ತಾಪಮಾನವು 35 ಡಿಗ್ರಿಯ ತನಕ ಏರುತ್ತದೆ ಹಾಗೂ 25 ಡಿಗ್ರಿಯ ತನಕ ಇಳಿಯುತ್ತದೆ. ಪ್ರವಾಸಿಗರು ಈ ಅವಧಿಯಲ್ಲಿ ನಗರವನ್ನು ಮುಕ್ತವಾಗಿ ಎಲ್ಲೆಂದರೆಲ್ಲಿ ಸುತ್ತಬಹುದು ಮತ್ತು ಯಾವುದೇ ವುಲನ್‌ ಬಟ್ಟೆಗಳನ್ನು ಕೊಂಡೊಯ್ಯುವ ಅಗತ್ಯವೇ ಇಲ್ಲ.

ಮಳೆಗಾಲ

(ಜುಲೈನಿಂದ ಸಪ್ಟೆಂಬರ್) : ರೈಸನ್‌ನಲ್ಲಿ ಮಳೆಗಾಲವು ಜುಲೈನಿಂದ ಸಪ್ಟೆಂಬರಿನವರೆಗೆ ಇರುತ್ತದೆ. ಈ ಅವಧಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ. ಆದ್ದರಿಂದ ಮಳೆಗಾಲದಲ್ಲೂ ಕೂಡಾ ಪ್ರವಾಸಿಗರು ರೈಸನ್‌ನ ಸೌಂದರ್ಯವನ್ನು ಸವಿಯಬಹುದು.

ಚಳಿಗಾಲ

(ಅಕ್ಟೋಬರಿನಿಂದ ಮಾರ್ಚ್‌) : ಚಳಿಗಾಲದಲ್ಲಿ ಇಲ್ಲಿನ ವಾತಾವರಣವು 0 ಡಿಗ್ರಿಯಿಂದ 25 ಡಿಗ್ರಿಯ ತನಕ ಇರುತ್ತದೆ. ತಾಪಮಾನವು ಸೊನ್ನೆಗಿಂತಲೂ ಕೆಳಗೆ ಇಳಿಯಬಹದು. ಹೀಗಾಗಿ ಪ್ರವಾಸಿಗರು ಈ ಪ್ರದೇಶವನ್ನು ಚಳಿಗಾಲದಲ್ಲಿ ಭೇಟಿ ಮಾಡದೇ ಇರುವುದು ಸೂಕ್ತ.