ಸುಮಾರು 70 ಕಿ.ಮೀ.ದೂರದಲ್ಲಿರುವ ಚಂಡಿಘಡದ ವಿಮಾನ ನಿಲ್ದಾಣ ಕಸೌಲಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಈ ನಿಲ್ದಾಣವು ಭಾರತದ ಇತರೆ ವಿಮಾನ ನಿಲ್ದಾಣಗಳಾದ ನವದೆಹಲಿ, ಕೊಲ್ಕೊತ್ತಾ, ಮುಂಬೈ, ಹಾಗೂ ಶ್ರೀನಗರಗಳಿಗೆ ಸಂಪರ್ಕ ಹೊಂದಿದೆ. ನಿಲ್ದಾಣದ ಹೊರಭಾಗದಲ್ಲಿ ಪ್ರವಾಸಿಗರು ಟ್ಯಾಕ್ಸಿಯನ್ನು ಪಡೆದು ಕಸೌಲಿ ಸೇರಬಹುದು. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣವು ಕಸೌಲಿಯ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ, ಇದು ಇಲ್ಲಿಂದ 300 ಕಿ.ಮೀ.ದೂರದಲ್ಲಿದೆ.