ಕಸೌಲಿಗೆ ಹೋಗುವ ಮಾರ್ಗದಲ್ಲಿರುವ ಘರ್ ಕಾಲ್ ಮಾರುಕಟ್ಟೆಯ ಸಮೀಪದಲ್ಲಿ ಗುರುದ್ವಾರ ಶ್ರೀ ಗುರುನಾನಕ್ ಜೀ ಸಿಕ್ಕರ ಧಾರ್ಮಿಕ ಕೇಂದ್ರ ಇದೆ. ಪ್ರತಿ ಭಾನುವಾರ ಗುರುದ್ವಾರದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದ ನಂತರ ಬರುವ ಭಕ್ತರಿಗೆ 'ಕರ ಪ್ರಸಾದ' ನೀಡಲಾಗುವುದು, ಇದನ್ನು ಈ ಧಾರ್ಮಿಕ ಕೇಂದ್ರ ಅಡುಗೆ ಮನೆಯಲ್ಲಿಯೇ ಸಿದ್ದ ಮಾಡಲಾಗುವುದು ಹಾಗೂ ಭಕ್ತರು ಇದನ್ನು ಅತ್ಯಂತ ಪವಿತ್ರ ಭಾವನೆಯಿಂದ ಸ್ವೀಕರಿಸುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ರಾತ್ರಿ ತಂಗಲು ಲಾಡ್ಜಿಂಗ್ ಸೌಕರ್ಯವನ್ನೂ ಮಾಡಲಾಗಿದೆ.
ಇದರ ಸಮೀಪದಲ್ಲೇ ಕಸೌಲಿಯ ಮಾಶೋಬ್ರಾ ರಸ್ತೆಯಲ್ಲಿ ಮತ್ತೊಂದು ಗುರುದ್ವಾರವು ಇದೆ.